ಪಡುಬಿದ್ರಿಯಲ್ಲಿ 62 ಬಗೆ ವಿವಿಧ ತಳಿಯ ಮಾವು : ನಿರುದ್ಯೋಗ ನಿವಾರಣೆಗೆ ಯುವಕರು ಕಂಡುಕೊಂಡ ಮಾರ್ಗ

ನಿರುದ್ಯೋಗ ಎಂದಾಕ್ಷಣ ಯುವಕರು ವಾಲುವುದು ದುಶ್ಚಟಗಳಿಗೆ…ಈ ಅಪವಾದಗಳನ್ನು ಮೆಟ್ಟಿನಿಂತ ಪಡುಬಿದ್ರಿಯ ಯುವಕರ ತಂಡವೊಂದು ದಿನವೊಂದಕ್ಕೆ ಸಹಸ್ರಾರು ರೂಪಾಯಿ ಸಂಪಾದಿಸುವ ಕಾಯಕಕ್ಕೆ ಕೈ ಹಾಕುವ ಮೂಲಕ ಕಷ್ಟ ಪಟ್ಟರೆ ನಿರುದ್ಯೋಗ ನಿವಾರಣೆ ನಮ್ಮಿಂದಲೇ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಮಾವು ಎಂದರೆ ಯಾರ ಬಾಯಲ್ಲಿ ನೀರೂರದೆ ಇರಲು ಸಾಧ್ಯಹೇಳಿ..? ಅದೂ ಕೂಡ ಬರೋಬ್ಬರಿ 62ಬಗೆಯ ಮಾವಿನ ಹಣ್ಣುಗಳನ್ನು ದೂರದ ಊರುಗಳಿಂದ ತಂದು ಪಡುಬಿದ್ರಿ ಯ ಬಾಡಿಗೆ ಕಟ್ಟಡದಲ್ಲಿ ಇರಿಸಿ, ಅದನ್ನು ಹಣ್ಣು ಮಾಡಿ ಮಾರಾಟ ನಡೆಸುವ ಮೂಲಕ ದಿನವೊಂದಕ್ಕೆ ಸಹಸ್ರಾರು ರೂಪಾಯಿ ದುಡಿಯುವ ಮೂಲಕ… ನಿರುದ್ಯೋಗ ಎಂಬ ಹೆಸರಿನಡಿಯಲ್ಲಿ ಬೀದಿ ಸುತ್ತುವ ಯುವಕರಿಗೆ ಇವರು ಮಾದರಿಯಾಗಿದ್ದಾರೆ. ಪಡುಬಿದ್ರಿಯ ಮಿನ್ಹಾಜ್ ಹಾಗೂ ಹನೀಫ್ ಎಂಬ ಈ ಯುವಕರ ತಂಡ ಮುಂಜಾನೆಯಿಂದ ರಾತ್ರಿಯ ವರಿಗೂ ಈ ಕಾಯಕಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.ಪಡುಬಿದ್ರಿಯ ಜನತೆ ಮೆಚ್ಚುಗೆಗೆ ಕಾರಣವಾಗಿರುವ ಇವರು ಶೇಕರಣೆ ಮಾಡುವ ಮಾವಿನ ಹಣ್ಣುಗಳೇ ಪ್ರತಿಷ್ಠಿತ ಉಡುಪಿ ಕೃಷ್ಣ ಮಠದಲ್ಲಿ ಬಳಕೆಯಾಗುತ್ತಿರುವುದು ಎಂಬುದು ನಮ್ಮ ಗ್ರಾಮಕ್ಕೆ ಹೆಮ್ಮೆ ಎನ್ನುತ್ತಾರೆ ಗ್ರಾಮಸ್ಥ ಶಾಜು ಪಡುಬಿದ್ರಿ.

Related Posts

Leave a Reply

Your email address will not be published.