Home Archive by category ಕರಾವಳಿ (Page 486)

ವಿಜಯಪುರದ ಕನ್ನೋಳಿ ವಾಹನ ಚಾಲಕರಿಗೆ ಉಪಹಾರದ ವ್ಯವಸ್ಥೆ

ವಿಜಯಪುರ ಜಿಲ್ಲೆಯ ಕನ್ನೊಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಯಕರ್ನಾಟಕ ಸಂಘಟನೆ ವಾಹನ ಚಾಲಕರ ಘಟಕದ ಸಹಯೋಗದಲ್ಲಿ ಸತತವಾಗಿ ನಾಲ್ಕು ದಿನಗಳಿಂದ ಉಪಹಾರ ಸೇವೆ ಮಾಡುತ್ತಿದ್ದಾರೆ. ಕಾಶಿನಾಥ ಬಿರಾದಾರ ಎನ್ನುವರು ವಾಹನದ ಚಾಲಕನಾಗಿದ್ದು ಕಳೆದ ವಾರ ವಾಹನ ಚಲಾಯಿಸುವಾಗ ಊಟ ಸಿಗದೆ ಪರದಾಡಿ ತುಂಬಾ ಸಂಕಷ್ಟ ಅನುಭವಿಸಿದ್ದರು. ಆದರಿಂದ ಚಾಲಕರ ತೊಂದರೆಗೆ ಸ್ಪಂದಿಸುವ ಮನಸ್ಸಿಂದ ತಮಗಾದ ಊಟದ ತೊಂದರೆ ಬೇರೆ ಚಾಲಕರು ಅನುಭವಿಸಬಾರದು ಎಂದು ಸತತವಾಗಿ ನಾಲ್ಕು ದಿನದಿಂದ ತಮ್ಮ

ಮಿಶ್ರಬೆಳೆಗಳಿಗೆ ಆದ್ಯತೆ ನೀಡಿ-ಶಾಸಕ ಸಂಜೀವ ಮಠಂದೂರು

  ಪುತ್ತೂರು: ಕೊರೋನಾ ಸಂಕಷ್ಟದಲ್ಲಿ ವ್ಯಾಪಾರ ಕೈಗಾರಿಕೆಗಳು ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಕೃಷಿಕೆ ಒಲವು ತೋರಿಸಿದ್ದಾರೆ. ಅವರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಮಿಶ್ರ ಬೆಳೆಗಳಿಗೆ ಆದ್ಯತೆ ನೀಡಿ ಎಂದು ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ತಾ.ಪಂ ಕಿರು ಸಭಾಂಗಣದಲ್ಲಿ ನಡೆದ ಕೃಷಿ, ತೋಟಗಾರಿಕೆ,

ಮಂಜೇಶ್ವರದಲ್ಲಿ ಎಲ್‍ಡಿಎಫ್‍ನಿಂದ ಲಕ್ಷದ್ವೀಪ ಸಂರಕ್ಷಿಸಿ ಪ್ರತಿಭಟನೆ

ಮಂಜೇಶ್ವರ: ಲಕ್ಷದ್ವೀಪ ಸಂರಕ್ಷಿಸಿರಿ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ಎಲ್‍ಡಿಎಫ್ ಕೇರಳ ರಾಜ್ಯ ಸಮಿತಿಯ ಕರೆಯಂತೆ ಮಂಜೇಶ್ವರ ಪ್ರಧಾನ ಅಂಚೆ ಕಚೇರಿ ಮುಂದೆ ನಡೆದ ಧರಣ ಸತ್ಯಾಗ್ರಹವನ್ನು ಎಲ್‍ಡಿಎಫ್ ಮಂಜೇಶ್ವರ ಮಂಡಲ ಸಂಚಾಲಕ ಬಿವಿ.ರಾಜನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಫುಲ್ ಪಾಟೀಲ್ ಎಂಬ ಸಂಘ ಪರಿವಾರದ ಏಜಂಟನ್ನು ಮುಂದಿಟ್ಟು ಲಕ್ಷದ್ವೀಪ ಜನತೆಯೊಂದಿಗೆ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸಬೇಕು, ಸ್ಥಳೀಯ ಜನರ ಜೀವನ ಶೈಲಿ ಹಾಗೂ ಲಕ್ಷ

ಬೆಳ್ತಂಗಡಿಯಲ್ಲಿ ಅಕ್ರಮ ಮರಳು ಅವ್ಯವಹಾರ ಸೂಕ್ತ ತನಿಖೆ : ವಸಂತ ಬಂಗೇರರಿಂದ ಡಿಸಿಗೆ ಮನವಿ

ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರಳು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇದನ್ನು ಕೂಡಲೇ ತನಿಖೆ ಮಾಡುವಂತೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅವರು ಮಾಧ್ಯಮದ ಜೊತೆ ಮಾತನಾಡಿ ಬೆಳ್ತಂಗಡಿಯ ಧರ್ಮಸ್ಥಳ ಆಸು ಪಾಸು ದಿನಕ್ಕೆ ಸುಮಾರು 500 ಲೋಡಿಗಿಂತ ಅಧಿಕ ಮರಳು ಸಾಗಾಣಿಕೆ ಮೂಲಕ ಅನೇಕ ಅವ್ಯವಹಾರಗಳು ನಡೆಯುತ್ತಿದೆ. ಪರವಾನಿಗೆ ಇಲ್ಲದೆ ಮರಳು ಗಣಿಗಾರಿಕೆ ನಡೆಯುತ್ತಿದ್ದು ದೂರದ ಊರುಗಳಿಗೆ ಮರಳು ಸಾಗಣೆ

ಶೈಕ್ಷಣಿಕ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದಿಂದ ಗೊಂದಲ: ಶಾಸಕ ಯು.ಟಿ.ಖಾದರ್

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೈಕ್ಷಣಿಕ ವಿಚಾರದಲ್ಲಿ ಗೊಂದಲ ನಿರ್ಮಾಣ ಮಾಡಿದೆ. ಈ ವಿಚಾರದಲ್ಲಿ ಶಿಕ್ಷಕರನ್ನು ರಾಜ್ಯ ಸರ್ಕಾರ ಭಿಕ್ಷುಕರನ್ನಾಗಿ ಮಾಡಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ. ಈ ಕುರಿತು ಮಂಗಳೂರಿನ ಸರ್ಕ್ಯೂಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನ ಲಾಕ್‌ಡೌನ್ ಪ್ಯಾಕೇಜ್‌ನಲ್ಲಿ ಕೂಡ ಶಿಕ್ಷಕರನ್ನ ಕಡೆಗಣಿಸಲಾಗಿದೆ. ಅನುದಾನ ರಹಿತ ಶಿಕ್ಷಕರಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಬೇಕು.

ವಿದೇಶಿ ಹಣ್ಣಿನ ಮೊರೆ ಹೋದ ಕರಾವಳಿಯ ಕೃಷಿಕರು

ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಅಡಿಕೆಗೆ ಮಾರುಕಟ್ಟೆ ಇರುವ ಸಂಶಯವೂ ಕೆಲವು ಕೃಷಿಕರಲ್ಲಿ ಮೂಡಲಾರಂಭಿಸಿದೆ. ಈ ಕಾರಣಕ್ಕಾಗಿ ಅಡಿಕೆಗೆ ಪರ್ಯಾಯ ಬೆಳೆಯ ಹುಡುಕಾಟದಲ್ಲಿ ಕರಾವಳಿಯ ಕೆಲ ಕೃಷಿಕರಿದ್ದು, ಇಂಥ ಕೃಷಿಕರು ಇದೀಗ ವಿದೇಶೀ ಹಣ್ಣಿನ ಮೊರೆ ಹೋಗಿದ್ದಾರೆ. ಈಗಾಗಲೇ ಈ ಹಣ್ಣಿನ ಬೆಳೆಯನ್ನೂ ಆರಂಭಿಸಿರುವ ಈ ಕೃಷಿಕರಿಗೆ ಭರ್ಜರಿ ಇಳುವರಿಯ ಜೊತೆಗೆ ಉತ್ತಮ ಆದಾಯವೂ ಬಂದಿದೆ.

ವೈದ್ಯರ ನಡೆ ಹಳ್ಳಿ ಕಡೆ ಸರಕಾರದ ಯೋಜನೆ : ಕೊಂಪಪದವಿನಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಶೀತ, ಜ್ವರ ಇದ್ದವರು ಕೋವಿಡ್ 19 ಟೆಸ್ಟ್ ಗೆ ಹೋಗದೆ ಮನೆಯಲ್ಲಿ ಇರುತ್ತಾರೆ. ಅವರಲ್ಲಿ ಸೋಂಕಿತರು ಕೂಡ ಇರಬಹುದು. ಸೋಂಕಿತರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಇದ್ದು ರೋಗ ಗಂಭೀರವಾದಾಗ ಕೊನೆಯ ಹಂತದಲ್ಲಿ ವೈದ್ಯರನ್ನು ಕಾಣುವುದರಿಂದ ಸಾವು, ನೋವು ಪ್ರಮಾಣ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಅವರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರದ ಜಾರಿಗೆ ತಂದಿರುವ ವೈದ್ಯರ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜನರಿಗೆ ತಲುಪುವಲ್ಲಿ ನಾವೆಲ್ಲ ಕೆಲಸ ಮಾಡಬೇಕು. ವೈದ್ಯರು,

ಕಾರ್ಕಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಕ್ಕಳ ರಕ್ಷಣೆ

ಕಾರ್ಕಳ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಇಲ್ಲದೆ ತಬ್ಬಲಿಯಾದ ಅಸಹಾಯಕ ತಂದೆಯೊಂದಿಗಿದ್ದ 4 ಮಕ್ಕಳ ರಕ್ಷಿಸಿ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳ ರಕ್ಷಣಾ ಘಟಕ ವ್ಯವಸ್ಥೆಯನ್ನು ಕಲ್ಪಿಸಿದ್ದರು.  ನಿಟ್ಟೆ ಗ್ರಾಮ ಪಂಚಾಯತ್ ಪರಿಸರದಲ್ಲಿ ಅಸಾಹಯಕ ಪರಿಸ್ಥಿಯಲ್ಲಿದ್ದ ಮಕ್ಕಳ ತಂದೆ ಹಾಗೂ 3 ಗಂಡು ಮಕ್ಕಳು 1 ಹೆಣ್ಣು ಮಗು ಸೇರಿ 4 ಮಕ್ಕಳನ್ನು ರಕ್ಷಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಾರ್ಕಳದ ಸಮಾಜ ಸೇವಕಿ ರಮಿತಾ ಶೈಲೇಂದ್ರ ರವರು ದೂರವಾಣಿ

ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಅಭಿಯಾನ:ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಬಂಗ್ರಕೂಳೂರು ವಾರ್ಡ್ 16 ರಲ್ಲಿ ರಿಕ್ಷಾ,ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡುವ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಅಭಿಯಾನಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ. ಕೋವಿಡ್ 2ನೇ ಅಲೆಯ ಲಾಕ್ ಡೌನ್ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರವು ರಿಕ್ಷಾ,ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡುವ ರೂಪಾಯಿ 3000/-ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಸೇವಾಕಾರ್ಯಕ್ಕೆ ಬಂಗ್ರಕೂಳೂರು ವಾರ್ಡಿನ ಮನಪಾ ಸದಸ್ಯರಾದ ಕಿರಣ್ ಕುಮಾರ್ ರವರ