ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಿರ್ಮಿಸಿದ್ದ ಆಧಾರ ಕಂಬಗಳಿಗೆ ತುಕ್ಕು

ಕಾರ್ಕಳದಲ್ಲಿ 2015ರಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪುರಸಭೆಯ ವತಿಯಿಂದ ಸ್ವಾಗತ ಕಮಾನು ಅಂಚೆ ಇಲಾಖೆಗೆ ಸೇರಿದ ನಿವೇಶನ ಇರಿಸಲಾಗಿದೆ. ಸುಮಾರು ಏಳು ವರ್ಷಗಳು ಕಳೆದರೂ ಕಬ್ಬಿಣದ ಆಧಾರ ಸ್ತಂಭಗಳು ತುಕ್ಕು ಹಿಡಿದು ಹೋಗಿದ್ದು, ತೆರಿಗೆ ಹಣ ಪೋಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶ್ಪಕ್ ಅಹಮ್ಮದ್ ಅವರು, ಸ್ವಾಗತ ಕಮಾನುವಿಗೆ 2 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿತ್ತು. ಹಲವು ಸಲ ಇದರ ಬಗ್ಗೆ ಪುರಸಭೆಯ ಮಾಸಿಕ ಅಧಿವೇಶನದ ಸಂದರ್ಭದಲ್ಲಿ ಅಧಿಕಾರಿಗಳ ಹಾಗೂ ಅಧ್ಯಕ್ಷರು ಗಮನಕ್ಕೂ ತಂದರು ಯಾವುದು ಪ್ರಯೋಜನವಿಲ್ಲ. ಅದಲ್ಲದೆ ಮಂತ್ರಿಗಳು ಈ ಮಾರ್ಗದಿಂದ ಹಲವು ಬಾರಿ ಸಂಚರಿಸಿದರೂ ಅವರ ಗಮನಕ್ಕೆ ಬಾರದೆ ಇರುವುದು ತುಂಬಾ ಆಶ್ಚರ್ಯಕರ. ಈ ಬಾರಿಯಾದರೂ ಪುರಸಭೆ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಬಳಿ ದೂರನ್ನು ನೀಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.

Related Posts

Leave a Reply

Your email address will not be published.