ಪುತ್ತೂರು : ಜೋಸ್ ಅಲುಕ್ಕಾಸ್ ಚಿನ್ನಾಭರಣ ಸಂಸ್ಥೆ ನಾಲ್ಕನೇ ವರ್ಷದ ಸಂಭ್ರಮ

ಹೆಸರಾಂತ ಸ್ವರ್ಣಾಭರಣ ಸಂಸ್ಥೆಯಾದ ಜೋಸ್‍ಅಲುಕ್ಕಾಸ್‍ನ ಪುತ್ತೂರಿನ ಶಾಖೆಯು ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿದ್ದು ಇದರ ವಾರ್ಷಿಕೋತ್ಸವ ಸಂಭ್ರಮವನ್ನು ಮಳಿಗೆಯಲ್ಲಿ ಆಚರಿಸಿದರು. ಕಾರ್ಯಕ್ರಮವನ್ನು ಪುತ್ತೂರು ವಿಧಾನಾಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಖ್ಯಾತ ತುಳು ಚಿತ್ರದ ನಟಿ ರಂಗ ಕಲಾವಿದೆ ಎಕ್ಕ ಸಕ್ಕ ಮತ್ತು ರಾಜ್ ಸೌಂಡ್ಸ್ ಖ್ಯಾತಿಯ ಚೈತ್ರ ಶೆಟ್ಟಿ ಹಾಗೂ ಈ ವರ್ಷದ ಸೂಪರ್ ಹಿಟ್ ಚಲನಚಿತ್ರ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಇದರ ನಿರ್ದೇಶಕ, ಚಲನಚಿತ್ರ, ಕಿರುತೆರೆ ನಟ ರಾಹುಲ್ ಅಮೀನ್, ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಚಲನಚಿತ್ರದ ಸಹ ನಿರ್ಮಾಪಕರಾದ ಪವನ್ ಕುಮಾರ್ ವಿಶೇಷ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಸಿಬ್ಬಂದಿಗಳೊಂದಿಗೆ ವಿಶೇಷ ಅತಿಥಿಗಳು ಕೇಕ್ ಕತ್ತರಿಸುವ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಿದರು. ಸಂಸ್ಥೆಯ ಏರಿಯಾ ಮ್ಯಾನೇಜರ್ ಬಿಜು ಮಾತನಾಡಿ ಮಳಿಗೆಯ ಯಶಸ್ಸಿಗೆ ಕಾರಣರಾದ ಪುತ್ತೂರಿನ ಜನತೆಗೆ ಹಾಗೂ ಅವರ ಪ್ರೀತಿ,ವಿಶ್ವಾಸ ಮತ್ತು ಬೆಂಬಲಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು

ಸಂಸ್ಥೆಯ ಮ್ಯಾನೇಜರ್ ರತೀಶ್ ಅವರು ಮಾತನಾಡಿ, 4ನೇ ವಾರ್ಷಿಕೋತ್ಸವದ ಸಂಭ್ರಮಾಚಾರಣೆ ಪ್ರಯುಕ್ತ ಮಳಿಗೆಯಲ್ಲಿ ಚಿನ್ನಾಭರಣ ಮೇಕಿಂಗ್ ಚಾರ್ಜಸ್ ಮೇಲೆ ವಿಶೇಷ ರಿಯಾಯಿತಿ ಹಾಗೂ ವಜ್ರಾಭರಣಗಳ ಖರೀದಿಯ ಮೇಲೆ 20% ರಿಯಾಯಿತಿ ಅಲ್ಲದೆ ಪ್ಲಾಟಿನಂ ಖರೀದಿಯ ಮೇಲೆ 7% ರಿಯಾಯಿತಿ, ಜೊತೆಗೆ ಪ್ರತೀ ಖರೀದಿಗೂ ಉಚಿತ ಉಡುಗೊರೆ ಮತ್ತು ಅದೃಷ್ಟ ಕೂಪನ್ ನೀಡಲಾಗುವುದು ಎಂದು ತಿಳಿಸಿದರು. ಅದೃಷ್ಟಶಾಲಿ ವಿಜೇತರಿಗೆ ಗೃಹಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು. ಈ ಆಫರ್ ಸೆಪ್ಟಂಬರ್ 26 ರಿಂದ 30ರ ವರೆಗು ಇರಲಿದೆ.ಕಾರ್ಯಕ್ರಮದಲ್ಲಿ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷರಾದಂತಹ ದಿವ್ಯಾ ಪ್ರಭಾ ಗೌಡ, ಶಾಖೆಯ ಮ್ಯಾನೇಜರ್‍ಗಳಾದ ರತೀಶ್, ಶಿಬು, ಪ್ರಶಾಂತ್, ಮನೋಜ್, ರಾಜೇಶ್ ರಾಕೇಶ್ ಆಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.