ಮಂಗಳೂರು : ವೆಂಕಟರಮಣ ದೇವರಿಗೆ ಸ್ವರ್ಣ ಕವಚ ಸಮರ್ಪಣೆ

ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಪೂಜಿಸಲ್ಪಡುವ ಶ್ರೀ ಮೂಲ ವೆಂಕಟರಮಣ , ಗೋಪಾಲಕೃಷ್ಣ ಹಾಗೂ ಹಯಗ್ರೀವ ದೇವರಿಗೆ ಸಮಾಜ ಭಾಂದವರಿಂದ ಸೇವಾರೂಪದಲ್ಲಿ ನೂತನವಾಗಿ ನಿರ್ಮಿಸಲಾದ ಸ್ವರ್ಣ ಕವಚಗಳನ್ನು ನವರಾತ್ರಿಯ ಪರ್ವ ದಿನವಾದ ಇಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಸಮರ್ಪಿಸಲಾಯಿತು .

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ , ಪಂಡಿತ್ ನರಸಿಂಹ ಆಚಾರ್ಯ ,ಪಂಡಿತ ಕಾಶೀನಾಥ ಆಚಾರ್ಯ, ವೇದಮೂರ್ತಿ ವೈಕುಂಠ ಭಟ್, ಸಮಿತಿಯ ಅಧ್ಯಕ್ಷ ಡಾ. ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ವಿಠಲ ಆಚಾರ್ಯ, ಅಲಂಕಾರ ತಂಡದ ರಘುರಾಮ ಕಾಮತ್, ಸುರೇಶ್ಸ ವಿ ಕಾಮತ್ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.