ಮಾತು ಉಳಿಸಲಾಗದ ಸಂಸದ ಅಜ್ಞಾತ ವಾಸಕ್ಕೆ : ಮುನೀರ್ ಕಾಟಿಪಳ್ಳ

ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಈವರೆಗೆ ನೀಡಿದ ಭರವಸೆಗಳು ಯಾವುದೂ ಈಡೇರಿಲ್ಲ. ಒಂದು ರೂಪಾಯಿಗೆ 16 ಡಾಲರ್ ಒದಗಿಸುವ , ಎರಡು ಸಾವಿರಕ್ಕೆ ಒಂದು ಲೋಡು ಮರಳು ಒದಗಿಸುವ, ಜಿಲ್ಲೆಯ ಜನರಿಗೆ ಎಮ್ ಆರ್ ಪಿ ಎಲ್, ಎಸ್ಇಝಡ್ ಮುಂತಾದ ಉದ್ಯಮಗಳಲ್ಲಿ ಕಡ್ಡಾಯ ಉದ್ಯೋಗ ಒದಗಿಸುವ ಮಾತುಗಳಲ್ಲಿ ಒಂದನ್ನೂ ಈಡೇರಿಸಲಾಗದಿದ್ದರು ಯಾವುದೇ ಆತಂಕವಿಲ್ಲದೆ ಜಿಲ್ಲೆಯ ಜನರ ಮುಂದೆ ನಿರ್ಭೀತಿಯಿಂದ ಎದೆಗೊಟ್ಟು ತಿರುಗಾಡುತ್ತಿದ್ದರು. ಇದೇ ಪ್ರಥಮ ಬಾರಿಗೆ ಟೋಲ್ ಗೇಟ್ ವಿರುದ್ಧದ ಹೋರಾಟದೆದುರು ಮಾತು ತಪ್ಪಿದ ಸಂಸದರಿಗೆ ಜನರಿಗೆ ಮುಖ ತೋರಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ‌‌. ಜನರ ಆಕ್ರೋಶ, ಕಪ್ಪು ಬಾವುಟಗಳಿಗೆ ಹೆದರಿ ಅವರು ಹತ್ತು ದಿನಗಳ ಅಜ್ಞಾತ ವಾಸಕ್ಕೆ ತೆರಳಿರುತ್ತಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷರು, ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತ ಪಡಿಸಿದರು. ಅವರು ಟೋಲ್ ಗೇಟ್ ತೆರವಿಗಾಗಿ ನಡೆಯುತ್ತಿರುವ ಹಗಲು ರಾತ್ರಿ ಧರಣಿಯಯ 11 ನೇ ದಿನವಾದ ಇಂದು (7-11-2022) ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಧರಿಸಿ ನಡೆಸಿದ ಧರಣಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ ಸದನದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಾಗದೆ ಇಂದು ಕಾರ್ಯಕ್ರಮದ ನಿಮಿತ್ತ ಕಾಪು ತಲುಪಲು ಹೆಲಿಕಾಪ್ಟರ್ ಮೂಲಕ ಆಕಾಶ ಮಾರ್ಗ ಬಳಸಿರುವುದರ ಹಿಂದಿನ ಉದ್ದೇಶ ಹೋರಾಟಗಾರರನ್ನು ಎದುರಿಸಲಾಗದೆ ತಪ್ಪಿಸಿಕೊಳ್ಳಲು ಆರಿಸಿದ ಮಾರ್ಗ ಎಂದರೆ ಸುಳ್ಳಾಗದು. ಈ ಬಿಜೆಪಿ ಸರಕಾರಕ್ಕೆ ಜನರ ಕನಿಷ್ಟ ಬೇಡಿಕೆಗಳನ್ನೇ ಈಡೇರಿಸಲಾಗುತ್ತಿಲ್ಲ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜಾಗಲಿ, ಸುಸಜ್ಜಿತ ಮಾರುಕಟ್ಟೆಯಾನ್ನಾಗಲಿ , ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲೂ ಸಾಧ್ಯವಾಗದ ಬಿಜೆಪಿ ಪಕ್ಷ ಸರಕಾರ ನಡೆಸಲು ಆಯೋಗ್ಯರಾಗಿದ್ದಾರೆ. ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವಂತಹ ಸಣ್ಣ ಕೆಲಸವನ್ನೇ ಮಾಡಕ್ಕಾಗದವರು ನಮ್ಮ ಹೋರಾಟದಲ್ಲಿ ಬಂದು ಸೇರಿಕೊಳ್ಳಲಿ ಅಥವಾ ಕೂಡಲೇ ರಾಜಿನಾಮೆ ಕೊಟ್ಟು ಕೆಳಗಿಳಿದುಬಿಡಲಿ ಎಂದರು.

ಧರಣಿಯನ್ನು ಉದ್ದೇಶಿಸಿ ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಿಪಿಐಎಂ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ಖ್ಯಾತ ಹೈಕೋರ್ಟ್ ವಕೀಲರಾದ ಎಸ್ ಬಾಲನ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ದಿನೇಶ್ ಕುಂಪಲ, ಇಂಟೆಕ್ ಮುಖಂಡ ಸದಾಶಿವ ಶೆಟ್ಟಿ, ಶ್ರೀನಾಥ್ ಕುಲಾಲ್, ಆಯಾಝ್ ಕೃಷ್ಣಾಪುರ, ಸಿಪಿಐಎಂ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಜಯಂತ ನಾಯ್ಕ್, ಮಹಾಬಲ ದೆಪ್ಪೆಲಿಮಾರ್, ಶೇಖರ ಕುಂದರ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಸಂಕೇತ್ ಕುತ್ತಾರ್, ಕಾಂಗ್ರೆಸ್ ಮುಖಂಡರಾದ ಯೋಗೀಶ್ ನಾಯಕ್, ಶಾಹುಲ್ ಹಮೀದ್, ಬಶೀರ್ ಕುಳಾಯಿ, ಪ್ರಮೀಳಾ ದೇವಾಡಿಗ, ಹುಸೈನ್ ಕಾಟಿಪಳ್ಳ, ರಮೇಶ್ ಉಳ್ಳಾಲ್, ವಿದ್ಯಾರ್ಥಿ ಮುಖಂಡರಾದ ವಿನಿತ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು

Related Posts

Leave a Reply

Your email address will not be published.