Home Archive by category ದೇರಳಕಟ್ಟೆ

ಯಕ್ಷ ಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನೆ

ದೇರಳಕಟ್ಟೆ: ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭ ದೇರಳಕಟ್ಟೆಯ ಕಂಫರ್ಟ್ ಆಫ್ ಹೋಟೆಲ್‍ನ ನೆಲಮಹಡಿಯಲ್ಲಿ ನಡೆಯಿತು.ಮುಂಬಯಿಯ ಹೇರಂಭಾ ಇಂಡಸ್ಟೀಸ್ ಲಿ. ಮತ್ತು ಕೆಮಿನೋ ಫಾರ್ಮಾ ಅಧ್ಯಕ್ಷಕನ್ಯಾನ ಸದಾಶಿವ ಶೆಟ್ಟಿ ನೂತನ ಸೊಸೈಟಿಯನ್ನು ಉದ್ಘಾಟಿಸಿದರು.ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ

ದೇರಳಕಟ್ಟೆ :ಕಣಚೂರು ಸಂಸ್ಥೆಯೊoದಿಗೆ ಮೆಡ್ ಪಾರ್ಲಿಮೆಂಟ್ ಆರೋಗ್ಯ ರಕ್ಷಣೆ ಒಡಂಬಡಿಕೆ

ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರ ಸೇರಿದಂತೆ ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಸೈನ್ಸ್ನ ಶಿಕ್ಷಣದೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನದೊAದಿಗೆ ಆರೋಗ್ಯ ರಕ್ಷಣೆಗೆ ಬೇಕಾದ ಕೌಶಲ್ಯ ವೃದ್ಧಿ ಇಂದಿನ ಅಗತ್ಯಗಳಲ್ಲಿ ಒಂದಾಗಿದ್ದು, ಶಿಕ್ಷಣದೊಂದಿಗೆ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೆಡ್ ಅಚೀವರ್ಸ್ ಗ್ರೂಪ್ ಆಫ್ ಕಂಪೆನಿಯ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಡಾ| ಹರ್ಷ ವರ್ದನ್

ಚರ್ಚ್ ಸಭಾಂಗಣ ಉದ್ಘಾಟಿಸಿದ ಭಟ್ರು !ತೊಕ್ಕೋಟ್ಟಿನಲ್ಲೊಂದು ಸೌಹಾರ್ದ ಕಾರ್ಯಕ್ರಮ

ತೊಕ್ಕೋಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಇಗರ್ಜಿ ಬಳಿಯಲ್ಲಿ ಸಂತ ಸೆಬಾಸ್ತಿಯನ್ ಅಡಿಟೋರಿಯಂ ಹೆಸರಿನ ಸುಸಜ್ಜಿತವಾದ ಮದುವೆ ಸಮಾರಂಭಕ್ಕೆ ಯೋಗ್ಯವಾದ ಸಭಾಂಗಣ ವೊಂದು ಉದ್ಘಾಟನೆ ಗೊಂಡಿತು. ಸರ್ವ ಧರ್ಮ ಸಮನ್ವಯತೆಯ ಸಂದೇಶ ಸಾರುವ ರೀತಿಯಲ್ಲಿ ಈ ಸಮಾರಂಭ ಏರ್ಪಟ್ಟಿತ್ತು. ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾಯದ ಬಾಂಧವರು ವೇದಿಕೆಯಲ್ಲಿ ಆಸನ ಅಲಂಕರಿಸಿದ್ದರು. ಈ ವೇದಿಕೆಯಲ್ಲಿದ್ದವರೆಲ್ಲರೂ ಗಣ್ಯರೇ. ಆ ಪೈಕಿ ಸಭಾಂಗಣವನ್ನು ಉದ್ಘಾಟಿಸಿದ ಡಾ|| ಯು.ಸಿ.

ಉಳ್ಳಾಲ : 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆ

ದೇರಳಕಟ್ಟೆ, : ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ)ಯ ವತಿಯಿಂದ ದೇರಳಕಟ್ಟೆಯ ‘ಕಣಚೂರು ಪಬ್ಲಿಕ್ ಸ್ಕೂಲ್’ ಕ್ಯಾಂಪಸ್‌ನಲ್ಲಿ ಅಕ್ಟೋಬರ್ 15ರಂದು ನಡೆಯುವ ಉಳ್ಳಾಲ ತಾಲೂಕು 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕ, ಸಂಘಟಕ, ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆಯಾಗಿದ್ದಾರೆ. ಪರಿಚಯ: 1965ರ ಜುಲೈ 1ರಂದು ಬಿ.ಎಂ. ಅಬ್ದುಲ್ ರಹ್ಮಾನ್-ಖತೀಜಾ ದಂಪತಿಯ ಪುತ್ರನಾಗಿ ಜನಿಸಿದ ಬಿ.ಎ. ಮುಹಮ್ಮದ್ ಹನೀಫ್ ಬೆಳ್ತಂಗಡಿ ತಾಲೂಕಿನ

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ : ಡಾ. ಎಂ.ಎಮ್ ಧಾವಲೆ ಸ್ಮರಣಾರ್ಥ ಉಪಾನ್ಯಾಸ

ದೇರಳಕಟ್ಟೆ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ ಡಾ.ಎಂ.ಎಲ್. ಧಾವಲೆ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮುಂಬಾಯಿ ಡಾ.ಎಂ.ಎಲ್. ಧವಲೇ ಮೆಮೋರಿಯಲ್ ಹೋಮಿಯೋಪಥಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಬಿಪಿನ್ ಜೈನ್ ಒಂದು ದಿನದ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಸಾಧನೆ ಮಹತ್ತರವಾದುದು. ಇಂದಿನ ಆಧುನಿಕತೆಯ ಕಾಲಘಟ್ಟದಲ್ಲಿ

ಕೆ.ಎಸ್. ಹೆಗ್ಡೆ ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಾಟದ ವಿರುದ್ಧ ಜಾಗೃತಿ

ದೇರಳಕಟ್ಟೆ: ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಅಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗ ಮತ್ತು ಆಳ್ವಾಸ್ ಕಾಲೇಜಿನ ಪದವಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ದ ಅಂತರಾಷ್ಟ್ರೀಯ ದಿನಾಚರಣೆಯ ಮತ್ತು ಜಾಗೃತಿ ಕಾರ್ಯಕ್ರಮ ಅಸ್ಪತ್ರೆ ಗ್ಲಾಸ್ ಹೌಸ್ ನಲ್ಲಿ ನಡೆಯಿತು.ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಪದವಿ ವಿಭಾಗದ ಮುಖ್ಯಸ್ಥ ಡಾ.ಮಧುಮಾಲ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ದ

ದೇರಳಕಟ್ಟೆಯ ಕಾನೆಕೆರೆ ಗುಡ್ಡ ಕುಸಿತ : ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಯು.ಟಿ. ಖಾದರ್ ಭೇಟಿ

ಉಳ್ಳಾಲ: ಮಳೆಯಿಂದ ಹಾನಿಗೀಡಾದ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತುರ್ತು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.ಬೋರುಗುಡ್ಡೆ ಎರಡು ಮನೆಗಳ ಮೇಲೆ ಗುಡ್ಡೆ ಜರಿತವಾಗಿ ಹಾನಿ, ರೆಂಜಾಡಿಯ ಪಾಲೆದಡಿ ಮಸೀದಿ ಬಳಿ ಹಾನಿ, ಕೊಳಕೆಬೈಲ್ ಗುಡ್ಡ ಜರಿತ ಹಾಗೂ ಕಾನಕೆರೆ ಬಳಿ ಪೆಟ್ರೋಲ್ ಪಂಪ್ ಹಿಂಭಾಗದ ಒಂದು ಭಾಗ ಜರಿತ ಉಂಟಾಗಿದೆ. ಇವೆಲ್ಲವನ್ನು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ

ಆ್ಯಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ ಕಾರು ಚಾಲಕ ಪೊಲೀಸರ ವಶಕ್ಕೆ

ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಆಂಬುಲೆನ್ಸ್‌ನ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಕುಂಪಲದ ಚರಣ್ (31) ಪೊಲೀಸರ ವಶದಲ್ಲಿರುವ ಆರೋಪಿಯಾಗಿದ್ದಾನೆ. ದೇರಳಕಟ್ಟೆಯಿಂದ ಮಂಗಳೂರಿಗೆ ಸೋಮವಾರ ತುರ್ತಾಗಿ ಬರುತ್ತಿದ್ದ ಆ್ಯಂಬ್ಯುಲೆನ್ಸ್ನ ಸುಗಮ ಸಂಚಾರಕ್ಕೆ ಅಡಚಣೆಯಾಗುವಂತೆ ಆರೋಪಿ ಚರಣ್ ತಾನು ಚಲಾಯಿಸುತ್ತಿದ್ದ ಕಾರನ್ನು ಅಡ್ಡಾದಿಡ್ಡಿ