Home 2021 June (Page 27)

ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಚಿವ ಅರವಿಂದ ಲಿಂಬಾವಳಿ

ಕರ್ನಾಟಕ ಸರಕಾರ ರಾಜ್ಯ ಸರ್ಕಾರದ ಮಾನ್ಯ ಅರಣ್ಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದರು. ಬಳಿಕ ಶ್ರೀ ಕ್ಷೇತ್ರ ದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.ಈ ವೇಳೆ ಬೆಳ್ತಂಗಡಿ ಶಾಸಕ

ಸುಳ್ಯದಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ಕಾನೂನು ಕಾಲೇಜು ವಿದ್ಯಾರ್ಥಿಯೊಬ್ಬ ಶನಿವಾರ ಮುಂಜಾನೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ . ಸುಳ್ಯ ತಾಲೂಕು ಮರ್ಕಂಜ ಗ್ರಾಮದ ದೇಶಕೋಡಿ ದಿ| ರಘುನಾಥ ಪುರುಷ ಎಂಬವರ ಪುತ್ರ ನಿತೇಶ್ ಎಂ.ಆರ್(30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ . ಆತ್ಮಹತ್ಯೆ ಮಾಡಿಕೊಂಡ ನಿತೇಶ್ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ

ವ್ಯಾಕ್ಸಿನ್ ಕೇಂದ್ರಗಳಲ್ಲಿ ನಿಯಮ ಉಲ್ಲಂಘನೆಯಾಗಲ್ಲ: ಉಡುಪಿ ಡಿಸಿ ಜಿ. ಜಗದೀಶ್

ಕುಂದಾಪುರ: ತಾಲೂಕಿನಲ್ಲಿರುವ ವ್ಯಾಕ್ಸಿನ್ ಕೇಂದ್ರಗಳಲ್ಲಿ ಕೆಲ ಗೊಂದಲಗಳಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಯಾರಿಂದಲೂ ನಿಯಮ ಉಲ್ಲಂಘನೆಯಾಗದಂತೆ ಕುಂದಾಪುರ, ಕಾರ್ಕಳ ಹಾಗೂ ಮಲ್ಪೆಯ ವ್ಯಾಕ್ಸಿನ್ ಕೇಂದ್ರಗಳಿಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿರುವ ವ್ಯಾಕ್ಸಿನ್

ಮಂಜೇಶ್ವರ ಗ್ರಾ.ಪಂ. ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಸರಕಾರಿ ಜಿಡಬ್ಲ್ಯುಎಲ್‍ಪಿ ಶಾಲೆ ಮಂಜೇಶ್ವರದಲ್ಲಿ ನಡೆಯಿತು. ಕೋವಿಡ್ ಮಾನದಂಡಗಳನ್ನು ಪಾಲಿಸಿ ಕೊಂಡು ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಪರಿಸರದಲ್ಲಿ ಗಿಡ

ಮಂಗಳೂರಿನಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಮಂಗಳೂರು:  ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಇಂದು ಮಂಗಳೂರು ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಆವರಣದಲ್ಲಿ , ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಗಿಡ ನೇಡುವ ಮೂಲಕ

ಮನೆ ಮನೆಗೆ ದಿನಸಿ ಸಾಮಾಗ್ರಿ ವಿತರಣೆ : ಉಡುಪಿಯ ಸ್ಪೀಡ್ ಡೆವಿಲ್ಸ್ ಯುವಕರ ತಂಡದ ಕಾರ್ಯ

ಲಾಕ್ ಡೌನ್‍ನಿಂದಾಗಿ ದುಡಿಮೆ ಇಲ್ಲದೇ ಹಲವು ಕುಟುಂಬಗಳು ಸಂಕಷ್ಟದಲ್ಲಿವೆ. ಹೀಗಾಗಿ ಸಂಕಷ್ಟದ ಕುಟುಂಬಗಳ ಹಸಿವು ನೀಗಿಸುವ ಕೆಲಸವನ್ನು ಸದ್ದಿಲದೇ ಮಾಡುತ್ತಿದೆ. ಉಡುಪಿಯ ಸ್ಪೀಡ್ ಡೆವಿಲ್ಸ್ ಎನ್ನುವ ಹೆಸರಿನ ಯುವಕರು ಸಂಕಷ್ಟದಲ್ಲಿ ಕುಟುಂಬಗಳ ಮನೆ ಮನೆಗೆ ತೆರಳಿ ಹಸಿವು ನೀಗಿಸುತ್ತಿದೆ. ಇಡೀ ದೇಶವೇ ಕೊವಿಡ್ ಮಹಾಮಾರಿ ಯಿಂದ ಹಾಕಲಾಗಿರುವ ಲಾಕ್ ಡೌನ್ ಗೆ ತತ್ತರಿಸಿ

ವಿಶ್ವ ಪರಿಸರ ದಿನಾಚರಣೆ ಬಂಟ್ವಾಳದಲ್ಲಿ ಜೆಸಿಐ ವತಿಯಿಂದ ವನಮಹೋತ್ಸವ

ಬಂಟ್ವಾಳ: ವಿಶ್ವ ಪರಿಸರ ದಿನದ ಅಂಗವಾಗಿ ಜೆಸಿಐ ಬಂಟ್ವಾಳದ ವತಿಯಿಂದ ಮಾರ್ನಬೈಲಿನಲ್ಲಿರುವ ಆರೋಗ್ಯ ಉಪಕೇಂದ್ರದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.  ತಾಲೂಕು ಪಂಚಾಯತಿ ಸದಸ್ಯ ಸಂಜೀವ ಪೂಜಾರಿ ಬೊಳ್ಳಾಯಿ ಹಾಗೂ ಉದ್ಯಮಿ ಡಾ. ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್

ಕೋವಿಡ್ ವಾರಿಯರ್ಸ್‍ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ : ಸಚಿವ ಶ್ರೀಮಂತ್ ಪಾಟೀಲ್

ಬೆಳಗಾವಿ: ಸಚಿವ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಕೊರೊನಾ ವಾರಿಯರ್ಸ್‍ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಅಥಣಿ ಸುಗರ್ಸ್ ಕಾರ್ಖಾನೆ ಆವರಣದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ ವಿತರಿಸಲಾಯಿತು. ಸಚಿವರ ಆಪ್ತ ಕಾರ್ಯದರ್ಶಿಯಾದ ಸಚಿನ್ ದೇಸಾಯಿ ಅವರು ಮಾತನಾಡಿ,ಕೊರೊನಾ

ಆಳ್ವಾಸ್‍ನಲ್ಲಿ ಕೋವಿಶೀಲ್ಡ್ ಲಸಿಕೆ ಅಭಿಯಾನ : ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ

ಮೂಡುಬಿದಿರೆ: ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕೋವಿಶೀಲ್ಡ್ ಲಸಿಕೆ ಅಭಿಯಾನವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು. ಮೊದಲ ಹಂತದ ವ್ಯಾಕ್ಸಿನೇಶನ್ ಡ್ರೈವ್ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ನಡೆಯಿತು. ಲಸಿಕೆ ಅಭಿಯಾನದ ಭಾಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಿಬ್ಬಂದಿ ವರ್ಗ ಹಾಗೂ ಅವರ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ  ಜಾರ್ಜ್ ಫೆರ್ನಾಂಡಿಸ್ ರ  91 ನೇ ಹುಟ್ಟು ಹಬ್ಬದ ಸಂಸ್ಮರಣೆ

ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ  ಅವಿಭಜಿತ ದಕ್ಷಿಣ ಕನ್ನಡ,. ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು.