Home 2023 July

ಪಡುಬಿದ್ರಿ ಬೀಚ್‌ಗೆ ಆಗಮಿಸಲಿರುವ ಸಿಎಂ : ಪೊಲೀಸ್ ಕಟ್ಟೆಚರ, ತಾತ್ಕಾಲಿಕ ರಸ್ತೆ ದುರಸ್ಥಿ ಕಾರ್ಯ

ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಡುಬಿದ್ರಿ ಕಡಲು ಕೊರೆತ ವೀಕ್ಷಣೆಗಾಗಿ ಇಲ್ಲಿನ ಮುಖ್ಯ ಬೀಚ್ ಗೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸ್ ಕಟ್ಟೆಚರ ವಹಿಸಲಾಗಿದೆ. ಪಡುಬಿದ್ರಿಯ ಪ್ರಸಿದ್ಧ ಬ್ಲೂ ಫ್ಲ್ಯಾಗ್ ಬೀಚ್ ಗೆ ಕಡಲು ಕೊರೆತದಿಂದ ಆದ ಹಾನಿಯ ಬಗ್ಗೆ ವೀಕ್ಷಣೆ ಮಾಡಬೇಕಾಗಿದ್ದರೂ ಅಂತಿಮ ಕ್ಷಣದಲ್ಲಿ ಬದಲಾಗಿ ಬಾರೀ ಹಾನಿಯಾದ ಮುಖ್ಯ ಬೀಚ್‌ನ್ನು ಮುಖ್ಯ ಮಂತ್ರಿಗಳು

ಪಚ್ಚನಾಡಿ ದೇವಿನಗರದಲ್ಲಿ ಬಹಳ ಅದ್ದೂರಿಯಿಂದ ನಡೆದ SRR ವಾಲಿಬಾಲ್ 2K23 ಪಂದ್ಯಾಕೂಟ

ಮಂಗಳೂರು ನಗರದ ಪಚ್ಚನಾಡಿ ದೇವಿನಗರದಲ್ಲಿ ದಿನಾಂಕ 30/07/2023 ರ ಆದಿತ್ಯವಾರ ಶ್ರೀ ರಾಜರಾಜೇಶ್ವರಿ ಈವೆಂಟ್ಸ್ ಹಾಗೂ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್(ರಿ) ಪಚ್ಚನಾಡಿ ಇವರ ನೇತೃತ್ವದಲ್ಲಿ SRR Tropy 2K23 ಸ್ಥಳೀಯ ಮಟ್ಟದ ವಾಲಿಬಾಲ್ ಪಂದ್ಯಾಕೂಟವು ಬಹಳ ವಿಜೃಂಭಣೆಯಿಂದ ಪಚ್ಚನಾಡಿ ದೇವಿನಗರದ ಕೇಂದ್ರ ಮೈದಾನದಲ್ಲಿ ನೆರವೇರಿತು. . ಈ ಕಾರ್ಯಕ್ರಮದಲ್ಲಿ

ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆ.26ರಂದು ಉದ್ಯೋಗ ಮೇಳ

ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು, ಬಿಇಡಬ್ಲ್ಯುಎಸ್ ಯುವವಾಹಿನಿ ಕೇಂದ್ರ ಸಮಿತಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವು ಆಗಸ್ಟ್ ೨೬ರಂದು ನಡೆಯಲಿದೆ.ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಆಗಸ್ಟ್ 26ರಂದು ನಡೆಯಲಿದೆ. ದೇಶದ ವಿವಿಧ ಕಡೆಗಳಿಂದ ಪ್ರತಿಷ್ಠಿತ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿದೆ. ಉದ್ಯೋಗ

ಕರ್ನಾಟಕದಲ್ಲಿ “ಮದ್ರಾಸ್ ಐ” ರೋಗದ ಆತಂಕ

ಕರ್ನಾಟಕದಲ್ಲಿ ಪಿಂಕ್ ಐ, ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮದ್ರಾಸ್ ಐ ರೋಗ ಹೆಚ್ಚಾಗಿ ಇರುವುದರಿಂದ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇನ್ನು ಈ ರೋಗ ರಾಜ್ಯದಲ್ಲಿ ದಿನದಿಂದ

ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣ : ದ.ಕ. ಜಿಲ್ಲಾ ಬಿಜೆಪಿಯಿಂದ ಘಟನೆ ಖಂಡಿಸಿ ಪ್ರತಿಭಟನೆ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ನಡೆಸಿದ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರು ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿ, ರಾಷ್ಟ್ರ

ಮಂಗಳೂರು ವಿವಿ ಮಾಜಿ ಉಪಕುಲಪತಿ ಪ್ರೊ.ಕೆ. ಭೈರಪ್ಪ ನಿಧನ

ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ..ಕೆ.ಭೈರಪ್ಪ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. 2014 ಜೂನ್ ನಿಂದ 2019 ಜೂನ್ ವರೆಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದ್ದರು ಆ ಬಳಿಕ ಆದಿ ಚುಂಚನಗಿರಿಯಲ್ಲಿ ಸಹ ಕುಲಪತಿಗಳಾಗಿ ಕಾರ್ಯನಿರ್ವ

ಕಾರ್ಕಳ: ಬಸ್ ತಂಗುದಾಣದಲ್ಲಿ ಸತ್ತ ನಾಯಿಯ ದಫನ: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಇರುವ ಬಸ್ ತಂಗುದಾಣದಲ್ಲಿ ಬೀದಿನಾಯೊಂದು ಸತ್ತು ಬಿದ್ದಿದ್ದು ಅದನ್ನು ತೆರವುಗೊಳಿಸಲು ಮುಂದಾಗದ ನಂದಳಿಕೆ ಗ್ರಾಮ ಪಂಚಾಯತ್ ಒಂದು ಲೋಡ್ ಮಣ್ಣು ತಂದು ಅದರ ಮೇಲೆ‌ ಸುರಿದು ಘನಕಾರ್ಯ ನಡೆಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸತ್ತ ನಾಯಿಯ ದಫನ ಕ್ರಿಯೆ‌ಮಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ

ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ, ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ದ ಹಾಗೂ ಜನರಿಗೆ ರಕ್ಷಣೆ ನೀಡಲು ಆಗ್ರಹಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಮಹಾನಗರ ಪಾಲಿಕೆಯ ಎದುರಿನ ಲಾಲ್‍ಬಾಗ್ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ

ಮಣಿಪುರದ ಹಿಂಸಾಚಾರ ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನೆ

ಪುತ್ತೂರು: ಮಣಿಪುರ ರಾಜ್ಯದಲ್ಲಿ ಎರಡು ಜನಾಂಗಗಳ ಮಧ್ಯೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್‍ನಿಂದ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯ ಬಳಿ ಮೊಂಬತ್ತಿ ಉರಿಸಿ, ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಮಣಿಪುರದ ಘಟನೆ

ಶ್ರೀ ಮಹಾಲಕ್ಷ್ಮಿ ದೇವಸ್ಥಾನ : ಉಚ್ಚಿಲ ದಸರಾ-2023 ಅದ್ಧೂರಿಯಾಗಿ ನಡೆಸಲು ತೀರ್ಮಾನ

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚ್ಚಿಲ ದಸರಾ 2023 ಪೂರ್ವಭಾವಿ ಸಭೆಯು ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಿತು. ಅಕ್ಟೋಬರ್ 15ರಿಂದ ಅ. 24ರ ವರೆಗೆ ವೈಭವದ ಉಚ್ಚಿಲ ದಸರಾ ನಡೆಯಲಿದೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ನೇತೃತ್ವದಲ್ಲಿ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ಹಾಗೂ ಸಹೃದಯಿ