ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ (81) ಅವರು ಮಾ.15ರ ಶನಿವಾರ ನಿಧನ ಹೊಂದಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಹೆಸರಾಂತ ಜಾನಪದ
ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಶಿಯೇಶನ್ ಸಂಸ್ಥೆಯು ಕರ್ನಾಟಕದ ಜಾದೂ ಕಲಾವಿದ ಕುದ್ರೋಳಿ ಗಣೇಶ್ ರವರಿಗೆ ಪ್ರತಿಷ್ಟಿತ ” ಗೋಲ್ಡನ್ ಮ್ಯಾಜಿಷಿಯನ್ ” ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ಕುದ್ರೋಳಿ ಗಣೇಶ್ ರವರು ಜಾದೂ ರಂಗದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿಯ ಸಾಧನೆಗಾಗಿ ಈ ಪ್ರಶಸ್ತಿ ಸಂದಾಯವಾಗಿದೆ. ಆಂಧ್ರಪದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆಯ ನೆನಪಿಗಾಗಿ ನಡೆದ ಅದ್ದೂರಿ
ಕಳೆದ ಕೆಲ ದಶಕಗಳಿಂದ ತುಳು ರಂಗಭೂಮಿಯಲ್ಲದೆ, ತುಳು ಚಿತ್ರರಂಗದಲ್ಲೂ ಕಲಾರಸಿಕರನ್ನ ತನ್ನ ಕುಬ್ಜ ದೇಹದಿಂದಲೇ ರಂಜಿಸುತ್ತಿದ್ದ ವಿವೇಕ್ ಮಾಡೂರು(52) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಅವರನ್ನು ಇಂದು ಬೆಳಿಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತ ವಿವೇಕ್ ಅವರು ಪತ್ನಿ ವೇದಾವತಿ ಜೊತೆ ಮಾಡೂರಿನ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಈ ಹಿಂದೆ
ಅಲ್ಲೊಂದು ಸುಂದರ ಫ್ಯಾಷನ್ ಜಗತ್ತು ಅನಾವರಣಗೊಂಡಿತು. ಇನ್ನು ಕಲರ್ ಕಲರ್ ಬಟ್ಟೆಗಳಿಂದ ಯುವಕ-ಯುವತಿಯರಿಂದ ರ್‍ಯಾಂಪ್ ವಾಕ್ ಕೂಡ ಎಲ್ಲರ್ ಗಮನ ಸೆಳೆಯಿತು. ಎನ್‌ಬಿ ಗ್ರೂಫ್ ಅರ್ಪಿಸುವ ಅಸ್ತ್ರ ಮಿಸ್ಟರ್, ಮಿಸ್, ಮಿಸ್ ಟೀನ್, ಮಿಸೆಸ್ ತುಳುನಾಡು ಸೀಸನ್ – 4ರ ಗ್ರ್ಯಾಂಡ್ ಫಿನಾಲೆ ಮಂಗಳೂರಿನ ಉಚ್ಚಿಲದ ಕಿಯಾಂಜಾ ಗಾರ್ಡನ್ ನ ವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು. ದೇಶಿ ಮತ್ತು ವೆಸ್ಟರ್ನ್ ಕಲ್ಚರ್ ಬಟ್ಟೆಗಳನ್ನು ಧರಿಸಿ, ಯುವಕ – ಯುವತಿಯರ
113 ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುತ್ತಿದ್ದು 2023-24ನೇ ವಿತ್ತೀಯ ವರ್ಷದಲ್ಲಿ ಶೇಕಡಾ 10% ಲಾಭಾಂಶ ಘೋಷಿಸಿರುತ್ತದೆ. ಬ್ಯಾಂಕ್ ಸತತವಾಗಿ ಲಾಭ ಗಳಿಸುತ್ತಿದ್ದು. 2023-24ನೇ ವಿತ್ತೀಯ ವರ್ಷದಲ್ಲಿ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭವು ರೂ.10.45 ಕೋಟಿಯಾಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭವಾಗಿರುತ್ತದೆ. ಕಳೆದ
ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ದಕ್ಷಿಣ ಕನ್ನಡದಲ್ಲಿ ಪ್ರಥಮ ಬಾರಿಗೆ ಅಪರೂಪದ ಮತ್ತು ಸುಧಾರಿತ PET-CT ಸ್ಕ್ಯಾನ್ (Gallium-68 Trivehexin) ಯಶಸ್ವಿಯಾಗಿ ನಡೆಸಿರುವುದನ್ನು ಘೋಷಿಸುತ್ತದೆ. ಇದು ನಿರ್ಧಾರಾತ್ಮಕ ಇಮೇಜಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. Gallium-68 Trivehexin ಸ್ಕ್ಯಾನ್ ಅನ್ನು ಪ್ರಾಥಮಿಕ ಹೈಪರ್‌ಪ್ಯಾರಾಥೈರಾಯಿಡಿಸಂ (PHPT) ಕಾಯಿಲೆಯಿಂದ ಪೀಡಿತ ರೋಗಿಗಳಲ್ಲಿ ಹೈಪರ್‌ಫಂಕ್ಷನಿಂಗ್
ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ನಲವತ್ತೇಳನೇ ವರ್ಷದ ವಾರ್ಷಿಕ ವಿಶೇಷ ಶಿಬಿರವು ಫೆ. 22ನೇ ಶನಿವಾರದಿಂದ ಫೆ. 28 ಶುಕ್ರವಾರದವರೆಗೆ ಮಂಡೆಕೋಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನದಲ್ಲಿ ನಡೆಯುತ್ತಿದ್ದು ಈ ಶಿಬಿರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ| ರುದ್ರಕುಮಾರ್ ಎಂ. ಎಂ.,
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, v4 ನ್ಯೂಸ್ ಹಾಗೂ ಎಂ.ಬಿ. ಫೌಂಡೇಶನ್ ಸಹಯೋಗದಲ್ಲಿ ಅರೆಭಾಷೆ ಕಾಮಿಡಿ ಇದರ ಮೊದಲ ಆಡಿಷನ್ ನ ಉದ್ಘಾಟನಾ ಕಾರ್ಯಕ್ರಮವು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರೆಭಾಷೆಯ ಸಂಸ್ಕೃತಿ ಆಚಾರ
ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದು ಬಳಿಕ ಎಡ ಭಾಗದಿಂದ ಸಾಗುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಆಡಂಕುದ್ರು ಎಂಬಲ್ಲಿ ಘಟನೆ ನಡೆದಿದೆ. ಸ್ಕೂಟರ್ ಸವಾರರಿಬ್ಬರೂ ಗಾಯಗೊಂಡಿದ್ದಾರೆ. ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ ಚಲಿಸುತ್ತಿದ್ದ ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆ ನಡೆಸಿದ ಜೀಪ್ ಚಾಲಕ ನಿಯಂತ್ರಣ ತಪ್ಪಿ ಢಿಕ್ಕಿ
ಮಂಗಳೂರು : ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರದ ರಜತಮಹೋತ್ಸವದ ಪ್ರಯುಕ್ತ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಪುನಃಪ್ರತಿಷ್ಠೆ ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಬಾಲಾಲಯ ಪ್ರತಿಷ್ಠೆಯು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾತಃಕಾಲ ಬ್ರಹ್ಮಶ್ರೀ ಕದ್ರಿ ಕೃಷ್ಣ ಅಡಿಗರ ನೇತೃತ್ವದಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ ನಡೆದು, ಸಾನಿಧ್ಯದಲ್ಲಿ ಸಂಕೋಚದ ವಿಧಿ ವಿಧಾನಗಳನ್ನು ನಡೆಸಿ ಶ್ರೀ ಕೃಷ್ಣದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ