ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ನಡೆಯಲಿದೆ ಉಚಿತ ಮೂತ್ರಪಿಂಡದ ಖಾಯಿಲೆಗಳ ತಪಾಸಣಾ ಶಿಬಿರ

ವಿಶ್ವ ಮೂತ್ರಪಿಂಡ ಖಾಯಿಲೆಗಳ ದಿನದ ಪ್ರಯುಕ್ತ ಮಾರ್ಚ್ 09, 2023 ರ ಗುರುವಾರದಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೂತ್ರಪಿಂಡ ಖಾಯಿಲೆಗಳ ತಜ್ಞ ವೈದ್ಯರಾದ ಡಾ. ಮೇಘಾ ಪೈ ರವರ ನೇತೃತ್ವದಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗಾಗಿ ಬೃಹತ್ ಉಚಿತ ಮೂತ್ರಪಿಂಡದ ಖಾಯಿಲೆಗಳ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ರಕ್ತದ ಸಾಮಾನ್ಯ ಪರೀಕ್ಷೆಗಳು (CBC), ರಕ್ತದ ಸಕ್ಕರೆ ಅಂಶದ ಪರೀಕ್ಷೆ (RBS), ಮೂತ್ರಪಿಂಡ ಫಂಕ್ಷನ್ ಪರೀಕ್ಷೆ, ರಕ್ತದಲ್ಲಿನ ಸೋಡಿಯಂ ಮತ್ತು ಪೊಟ್ಯಾಸಿಯಂ, ಲಿವರ್ ಫಂಕ್ಷನ್ ತಪಾಸಣೆ, ಕ್ಯಾಲ್ಸಿಯಂ/ಪ್ರೋಸ್ಪರಸ್, ಯುರಿಕ್ ಆಸಿಡ್, ಇಸಿಜಿ ಹಾಗೂ ಹೃದಯದ ಸ್ಕ್ಯಾನಿಂಗ್ (ECHO), ಹೆಚ್.ಐ.ವಿ., ಹೆಚ್.ಬಿ.ಯಸ್.ಎ.ಜಿ, ಹೆಚ್.ಸಿ.ವಿ. ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳು ಅಧಿಕ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.

Related Posts

Leave a Reply

Your email address will not be published.