Home Posts tagged #manjeshwara

ಮಂಜೇಶ್ವರ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್: ಯುವೈಕ್ಯ ವೇದಿಕೆ ಉದ್ಘಾಟನೆ

ಮಂಜೇಶ್ವರ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ ’ಯುವೈಕ್ಯ ವೇದಿಕೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಶ್ರೀಮತಿ ಅಶ್ವಿನಿ ಎಂ ಎಲ್ ರವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾಲೇಜ್ ಮ್ಯಾಗಝೀನ್ ಸ್ನೇಹ ಲತಾ ದಿವಾಕರ್ ರವರು ಬಿಡುಗಡೆ ಮಾಡಿದರು.

ಮಂಜೇಶ್ವರದ ಹೆದ್ದಾರಿಯಲ್ಲಿ ವಿದ್ಯುತ್ ಕಂಬ ಅಳವಡಿಕೆ ಅವ್ಯವಹಾರ ಆರೋಪ

ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಅಡ್ಡಲಾಗಿ ಇತ್ತೀಚೆಗೆ ಸ್ಥಾಪಿತವಾಗಿದ್ದ ವಿದ್ಯುತ್ ಕಂಬ ಅಳವಡಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಸ್ಥಳೀಯರಿಂದ ವ್ಯಾಪಕ ಆರೋಪಗಳು ಕೇಳಿ ಬರುತ್ತಿದೆ. ಸರ್ವೀಸ್ ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರ, ಈ ಪೋಸ್ಟ್‌ಗಳನ್ನು ಕಾಂಕ್ರೀಟೀಕರಣಗೊಳಿಸಿ ಅಳವಡಿಸಲಾಗುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ಸಂಜೆ ಏಳು ಗಂಟೆ ಸುಮಾರಿಗೆ ತಲಪಾಡಿಯಿಂದ ಉದ್ಯಾವರ ತನಕ

ತಲಪಾಡಿಯಿಂದ ಮಂಜೇಶ್ವರದ ತನಕದ ಹೆದ್ದಾರಿ
ಅಂತಿಮ ಹಂತಕ್ಕೆ ತಲುಪಿದ ಕಾಮಗಾರಿ

ಮಂಜೇಶ್ವರ: ಗಡಿಪ್ರದೇಶವಾದ ತಲಪಾಡಿಯಿಂದ ಮಂಜೇಶ್ವರ ತನಕದ ರಾ. ಹೆದ್ದಾರಿಯ ಇಕ್ಕಡೆಗಳಲ್ಲೂ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಸರ್ವೀಸ್ ರಸ್ತೆಯ ಇಕ್ಕೆಡೆಗಳಲ್ಲೂ ಕಾರ್ಯಾಚರಿಸುತ್ತಿರುವ ವ್ಯಾಪಾರ ಕೇಂದ್ರಗಳಿಗೆ ಮತ್ತು ಮನೆಗಳಿಗೆ ತೊಂದರೆಯಾಗುತ್ತಿದೆ. ಈ ರೀತಿಯಾಗಿ ತೊಂದರೆ ನೀಡುವ ಕಾಮಗಾರಿಯನ್ನು ನಿಲ್ಲಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಾ.ಹೆದ್ದಾರಿ ಕ್ರಿಯಾ ಸಮಿತಿ ಮನವಿ ಸಲ್ಲಿಸಿದೆ. ಉದ್ಯಾವರ 10ನೇ ಮೈಲಿನಲ್ಲಿ ವಾಸವಾಗಿರುವ ಮಹಿಳೆಗೆ

ಹೋರಾಟ ಸಮಿತಿ ಸದಸ್ಯರಿಂದ ಉರುಳು ಸೇವೆ ಮಾಡಿ ಪ್ರತಿಭಟನೆ

ಮಂಜೇಶ್ವರ: ಅಂಡರ್‌ಪಾಸ್ ನಿರ್ಮಿಸಬೇಕೆಂಬ ಜನರ ಬೇಡಿಕೆ ಈಡೇರದಿರುವುದನ್ನು ವಿರೋಧಿಸಿ ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 100ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಸದಸ್ಯರು ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನ್ಯಾಯವಾದ ಬೇಡಿಕೆಯನ್ನು ಈಡೇರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಾಗಿ

ಮಂಗಳೂರು: ಸಿಸಿಬಿ ಕಾರ್ಯಾಚರಣೆ- ಅಕ್ರಮ ಪಿಸ್ತೂಲ್ ಹೊಂದಿದ ಇಬ್ಬರ ಸೆರೆ

ಅಕ್ರಮವಾಗಿ ಪಿಸ್ತೂಲ್ ವಶದಲ್ಲಿರಿಸಿಕೊಂಡು ಕಾರಿನಲ್ಲಿ ಕುಳಿತು ಯಾವುದೋ ದುಷ್ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ‌ ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಿಸ್ತೂಲ್ ಅನ್ನು ವಶದಲ್ಲಿರಿಸಿ ಯಾವುದೋ ದುಷ್ಕೃತ್ಯಕ್ಕೆ ಸಂಚು ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ

ಮಂಜೇಶ್ವರ : ರಾ.ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – ಮೂವರ ದಾರುಣ ಅಂತ್ಯ

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಕುಂಜತ್ತೂರಿನ ವಿರುದ್ಧ ದಿಕ್ಕಿನಲ್ಲಿ ಅಮಿತ ವೇಗದಲ್ಲಿ ಸಂಚರಿಸಿದ ಆಂಬ್ಯುಲೆನ್ಸ್ ಎದುರಿನಿಂದ ಬರುತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಕೂಡಾ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕುಂಜತ್ತೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರದಂದು ಬೆಳಿಗ್ಗೆ 10-50 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.ಬೆಂಗಳೂರಿನಿಂದ ತ್ರಿಶೂರು ಭಾಗಕ್ಕೆ ಕಾರಿನಲ್ಲಿ ಸಂಚರಿಸುತಿದ್ದ

ಮಂಜೇಶ್ವರ: ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ ದರೋಡೆ

ಮಂಜೇಶ್ವರ : ಎಟಿಎಂಗೆ ಹಣ ತುಂಬಿಸಲು ಬಂದ ವಾಹನದ ಗಾಜು ಪುಡಿಗೈದು ೫೦ಲಕ್ಷ ರೂ. ದರೋಡೆಗೈದು ತಂಡ ಪರಾರಿಯಾದ ಘಟನೆ ಉಪ್ಪಳದಲ್ಲಿ ನಡೆದಿದೆ. ವಾಹನದ ಗಾಜು ಒಡೆದು ಹಣವಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ತಂಡ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಉಪ್ಪಳದಲ್ಲಿ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಹಣ ತುಂಬುತ್ತಿದ್ದಾಗ ಖಾಸಗಿ ಕಂಪನಿಯ ವಾಹನದಲ್ಲಿ ಕಳ್ಳತನ ನಡೆದಿದೆ. ಸ್ಥಳಕ್ಕಾಗಮಿಸಿದ ಉಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ

ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನ ದಾರುಣ ಅಂತ್ಯ

ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಹೊಸಂಗಡಿ ಸಮೀಪದ ಅಂಗಡಿಪದವು ನಿವಾಸಿ ದಿವಂಗತ ಅಶೋಕ್ – ಕಲಾವತಿ ದಂಪತಿಯ ಪುತ್ರ ಪ್ರಜ್ವಲ್ (19) ಸಾವನ್ನಪ್ಪಿದ ದುರ್ದೈವಿ. ಅಂಗಡಿಪದವಿನ ಅಂಗಡಿಯೊಂದರ ಮುಂಭಾಗದಲ್ಲಿ ವಿದ್ಯುತ್ ಹರಿಯುತ್ತಿದ್ದ ಕಬ್ಬಿಣದ ಗೇಟ್ ನ್ನು ತಿಳಿಯದೆ ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗುಲಿದ್ದು, ಬೊಬ್ಬೆ ಕೇಳಿದ ಸ್ಥಳೀಯರು ವಿದ್ಯುತ್ ವಯರ್ ನ್ನು ವಿಚ್ಚೆದಿಸಿ, ಕೂಡಲೇ ಉಪ್ಪಳದ ಖಾಸಗಿ

ಮಂಜೇಶ್ವರ : ರಾಗಂ ಜಂಕ್ಷನ್‌ನಲ್ಲಿ ಮುಷ್ಕರ

ಮಂಜೇಶ್ವರದ ರಾಗಂ ಜಂಕ್ಷನಿನಲ್ಲಿ ರಾ.ಹೆದ್ದಾರಿ ದಾಟಲು ಸುರಕ್ಷಿತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ. ಮಾಡು ಇಲ್ಲವೇ ಮಡಿ ಎಂಬ ಧ್ಯೇಯದಲ್ಲಿ ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಭಿತ್ತಿ ಪತ್ರ ಎಲ್ಲೆಡೆ ರಾರಾಜಿಸುತ್ತಿರುವುದು ಹೆದ್ದಾರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದೆ. ಹೆದ್ದಾರಿ ದಾಟಲು ಯಾವುದಾದರೂ ಪರ್ಯಾಯ ವ್ಯವಸ್ಥೆ

ಮಂಜೇಶ್ವರ : ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ನಿಧನ

ಮಂಜೇಶ್ವರ : ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ನಿಧನರಾದರು. ಮಂಜೇಶ್ವರ ಪಂಚಾಯತ್‌ನ ವತಿಯಿಂದ ನಡೆದ ಶುಚಿತ್ವ ಮಿಷನ್‌ನ ಸಭೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿರುವ ಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಂಜೇಶ್ವರದ ರಾಜಕೀಯ ವಲಯದಲ್ಲಿ ಬಿ.ವಿ.ರಾಜನ್ ವಿಶೇಷ ವ್ಯಕ್ತಿತ್ವದೊಂದಿಗೆ ಗುರುತಿಸಿದವರು. ಈ ಪ್ರದೇಶದಲ್ಲಿ ಸಿಪಿಐ ಚಳುವಳಿಯಲ್ಲಿ ದಿ.ಕಾಮ್ರೇಡ್ ಡಾ.ಸುಬ್ಬರಾವ್ ರವರ ಕಾಲಘಟ್ಟದಿಂದಲೇ ಮುಂಚೂಣಿಯಲ್ಲಿ