ಬೆಳ್ತಂಗಡಿ: ಶಿಬಾಜೆ ಗ್ರಾಮದ ಬರ್ಗುಳದಲ್ಲಿ ವಿದ್ಯುತ್ ಶಾಕ್ ಗೆ ಯುವತಿ ಸಾವನ್ನಪ್ಪಿದ್ದು ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ತಂತಿ ಸರಿಪಡಿಸುವಂತೆ ಸಂಬಂಧ ಪಟ್ಟ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ಮನೆಯವರು ತಿಳಿಸಿದರೂ ಅವರು ನಿರ್ಲಕ್ಷಿಸಿದ್ದಾರೆ. ಅದ್ದರಿಂದ ಇವತ್ತು ಅಮಾಯಕ ಯುವತಿ
ಉಳ್ಳಾಲ ತಾಲ್ಲೂಕು ಪೆರ್ಮನ್ನೂರು ಕಲ್ಲಾಪು ನಿವಾಸಿ ಪದ್ಮನಾಭ ಮೊನೆಪು (70). ದಿನಾಂಕ 17ರಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಅತ್ಯಂತ ಸೌಮ್ಯ ಸ್ವಭಾವದ ಪದ್ಮನಾಭ ಮೊನೆಪು ಸಾಮಾಜಿಕ ಕಾರ್ಯಕರ್ತರು ಮತ್ತು ಸಿ. ಪಿ. ಎಂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಪಕ್ಷದ ವಿವಿಧ ಚಟುವಟಿಕೆಯಲ್ಲಿ ಬಾಗವಹಿಸುತ್ತಿದ್ದರು. ಸ್ಥಳೀಯ ವಿಜಯ ಮಿತ್ರ ಮಂಡಳಿ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಇವರು ಕೂಡ
ಭಾರತದ ಬಾಹ್ಯಾಕಾಶದ ಕನಸನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಕಾರಪಡಿಸಿಕೊಂಡ ಮಹಿಳೆಯರು ಎಂದರೆ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್. ಭಾರತೀಯ ಮೂಲದ ಅಮೆರಿಕದ ಪ್ರಜೆಗಳು ಇವರು. ಈಗ ಸುನಿತಾ ವಿಲಿಯಮ್ಸ್ ಅವರು ಮೂರನೆಯ ಬಾರಿಗೆ ಬಾಹ್ಯಾಕಾಶಕ್ಕೆ ನೆಗೆದಿದ್ದಾರೆ. ಕಲ್ಪನಾ ಬದುಕು ಅರ್ಧದಲ್ಲೇ ಉರಿದು ಗಗನದ ತಾರೆಯಾಯಿತು. ಇಲ್ಲದಿದ್ದರೆ ಅವರು ಕೂಡ ಮತ್ತಷ್ಟು ಬಾಹ್ಯಾಕಾಶ ಸಾಧನೆಗಳನ್ನು ಮಾಡುತ್ತಿದ್ದರು. ಕಲ್ಪನಾ ಚಾವ್ಲಾ ಭಾರತ ಮೂಲದ ಮೊದಲ ಮಹಿಳಾ
ಇತ್ತೀಚೆಗೆ ದೇಶದ ನಿಜ ಪರಂಪರೆ ಮತ್ತು ಭಾರತೀಯರ ದಿಟ ಸಂಸ್ಕøತಿಯ ಬಗೆಗೆ ಅರಿವಿಲ್ಲದವರು ಮೀನು ಮಾಂಸದ ಬಗೆಗೆ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯವರೇ ಮಾಂಸ ತಿಂದು ಹಬ್ಬ ಮಾಡಿದರು; ಮೀನು ತಿಂದು ಉತ್ಸವ ನೋಡಿದರು ಎಂದಿತ್ಯಾದಿಯಾಗಿ ಟೀಕಿಸಿದ್ದಾರೆ. ಇಡೀ ಮಾನವ ಕುಲವೇ ಆದಿ ಯುಗದಲ್ಲಿ ಎರಡೇ ಕೆಲಸ ಮಾಡುತ್ತಿದ್ದುದು. ಒಂದು ಬೇಟೆಯಾಡುವುದು, ಎರಡು ನಿಸರ್ಗದಲ್ಲಿ ಸಿಗುವುದನ್ನು ಸಂಗ್ರಹಿಸುವುದು. ಬೇಟೆಯಾಡುವುದು ಏಕೆ ಎಂದು
ಭಾರತದ ನಾಗರಿಕರಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತಾ ದೃಢ ಮನಸ್ಸಿನಿಂದ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲ ನಾಗರಿಕರಿಗೆ ಈ ಕೆಳಗಿನ ಹಕ್ಕುಗಳನ್ನು ಕಾತರಿಪಡಿಸಲಾಗುತ್ತದೆ.ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ.ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ಮತ್ತು ಅದನ್ನು ಎಲ್ಲರಿಗೂ ಹಂಚುವುದು.ಇವುಗಳನ್ನು
ದ. ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜನವರಿ 11ರಂದು ಮಧ್ಯಾಹ್ನ ಸುಮಾರು ೧-೦೦ ಗಂಟೆಯ ಸಮಯಕ್ಕೆ ಮಹಿಳೆಯೊಬ್ಬರಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಗ್ಗೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪತ್ತೆಯ ಬಗ್ಗೆ ರಚಿಸಲಾದ ವಿಶೇಷ ತನಿಖಾ ತಂಡವು ಸುಲಿಗೆ ಮಾಡಿದ ನೌಶಾದ್ ಬಿ ಎ ನರಿಮೊಗರು, ಸುಲಿಗೆಗೆ ಸಹಕರಿಸಿದ ಚಂದ್ರಮೋಹನ್ ಉದ್ಯಾವರ, ಎಂಬವರನ್ನು
ಪಡುಬಿದ್ರಿ ಸಮೀಪದ ಯುಪಿಸಿಎಲ್ ಕಂಪನಿಯಿಂದ ಕೇರಳಕ್ಕೆ ವಿದ್ಯುತ್ ಸರಬರಾಜು ನಡೆಸಲು ಟವರ್ ನಿರ್ಮಾಣಕ್ಕೆ ಜಿಲ್ಲಾಡಳಿತದ ನಿರ್ದೇಶನದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಆಗಮಿಸಿದ ಅಧಿಕಾರಿಗಳ ತಂಡವನ್ನು ಗ್ರಾಮಸ್ಥರು ವಾಪಾಸು ಕಳುಹಿಸಿದ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ಇನ್ನಾ ಗ್ರಾ.ಪಂ.ಸದಸ್ಯ ದೀಪಕ್ ಕೋಟ್ಯಾನ್, ಜನರ ವಿರೋಧದ ನಡುವೆಯೂ ಜನರಿಗೆ ಯಾವುದೇ ಮಾಹಿತಿ ನೀಡದೆ ಇನ್ನಾ ಪ್ರೌಢಶಾಲಾ ಬಳಿ ಯುಪಿಸಿಎಲ್ ನಿಂದ ಕೇರಳಕ್ಕೆ ವಿದ್ಯುತ್
ಬೈಂದೂರು ತಾಲೂಕಿನ ಗಂಗೊಳ್ಳಿ, ಮ್ಯಾಂಗನೀಸ್ ರೋಡ್ ಬಳಿ ಲಕ್ಷಾಂತರ ರೂಪಾಯಿ ಸೀಸ ಕಳ್ಳತನ ಮಾಡಿದ ಘಟನೆ ನಡೆದಿದೆ. ಅಕ್ಷಯ ಖಾರ್ವಿ ಎಂಬವರಿಗೆ ಸೇರಿದ ಅಂಗಡಿಯಾಗಿದ್ದು, ಕಳ್ಳಲು ನುಗ್ಗಿ ಲಕ್ಷಾಂತ ರೂಪಾಯಿ ಮೌಲ್ಯದ ಸೀಸ ಎಗರಿಸಿ ಪರಾರಿಯಾಗಿದ್ದರು. ಕಳ್ಳರ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಪೊಲೀಸ್ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಕಳ್ಳತನದಲ್ಲಿ ಭಾಗಿಯಾಗಿದ್ದ ಅಶ್ಫಕ್ ನನ್ನು ಗಂಗೊಳ್ಳಿ ಪೋಲಿಸರು
ರಥ ಯಾತ್ರೆಯ ಮೂಲಕ ಬಿಜೆಪಿಯನ್ನು ರಾಷ್ಟ್ರ ಮಟ್ಟಕ್ಕೆ ಏರಿಸಿದ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಸಲ್ಲುತ್ತಿರುವುದಾಗಿ ಇಂದು ಪ್ರಧಾನಿ ಮೋದಿಯವರು ಅಡ್ವಾಣಿಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ತಿಳಿಸಿದರು.ರಾಮ ಮಂದಿರ ಹೋರಾಟದ ಮುಖ್ಯ ರೂವಾರಿಯಾಗಿದ್ದರು ಅಡ್ವಾಣಿ. 1977ರ ಜನತಾ ಸರಕಾರದಲ್ಲಿ ಮತ್ತು ವಾಜಪೇಯಿಯವರ ಸಂಪುಟದಲ್ಲಿ ಅಡ್ವಾಣಿಯವರು ಸಚಿವರಾಗಿದ್ದರು; ಉಪ ಪ್ರಧಾನಿ ಆಗಿದ್ದರು. ಆಗ ಮುಂದಿನ ಪ್ರಧಾನಿ ಅಡ್ವಾಣಿಯವರು ಎಂದು
ಬಜಪೆ: ಗುರುಪುರ ಫಲ್ಗುಣಿ ನದಿಯ ಸೇತುವೆ ಸಮೀಪದಿಂದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಳಲಿ ಮಟ್ಟಿ ತಿಮ್ಮೊಟ್ಟು ನಿವಾಸಿ ಚೇತನ್ ಪೂಜಾರಿ ( 27) ಎಂದು ತಿಳಿದು ಬಂದಿದೆ. ಗುರುವಾರ ಸಂಜೆಯಿಂದ ಗುರುಪುರ ಫಲ್ಗುಣಿ ನದಿ ಸೇತುವೆಯಲ್ಲಿ ಬೈಕ್ ವೊಂದು ನಿಲ್ಲಿಸಿವ ಕುರಿತು ಬಜ್ಪೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೈಕ್ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದಾಗ