Home Posts tagged #Election

ಬ್ರಹ್ಮಾವರದಲ್ಲಿ ಬಿರುಸಿನಿಂದ ನಡೆಯಿತ್ತಿರುವ ಮತದಾನ

ಬ್ರಹ್ಮಾವರ: ನೈರುತ್ಯ ಪಧವೀಧರ ಶಿಕ್ಷಕರ ಚುನಾವಣೆಯ ಮತದಾನ ಬ್ರಹ್ಮಾವರದ ಮತಗಟ್ಟೆಗಳಲ್ಲಿ ನಡೆಯುತ್ತಿದೆ. ಮತಗಟ್ಟೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ 322 ಪುರುಷರು, 417 ಮಹಿಳೆಯರು ಮತ್ತು ಪಧವೀಧರ ಕ್ಷೇತ್ರದಿಂದ 1489 ಪುರುಷರು 1657 ಮಹಿಳೆಯರು ಮತದಾರರನ್ನು ಹೊಂದಿದೆ.

ಸಿಕ್ಕಿಂನಲ್ಲಿ ಎಸ್‌ಕೆಎಂ, ರಾಷ್ಟ್ರೀಯ ಪಕ್ಷಗಳು ಔಟ್:ಅರುಣಾಚಲ ಪ್ರದೇಶ ಮತ್ತೆ ಬಿಜೆಪಿ ಕೈವಶ

ವಿಧಾನ ಸಭಾ ಚುನಾವಣೆಯಲ್ಲಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತು ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಎರಡನೆಯ ಬಾರಿ ಅಧಿಕಾರದ ಗದ್ದುಗೆಗೆ ಏರಿವೆ. ಎಸ್‌ಕೆಎಂ- ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾವು ಎರಡನೆಯ ಬಾರಿ ಏಕೈಕ ಪಕ್ಷವಾಗಿ ಅಧಿಕಾರಕ್ಕೆ ಏರಿದೆ. ಅದು ವಿಧಾನ ಸಭೆಯ 32ರಲ್ಲಿ 31 ಸ್ಥಾನ ಗೆದ್ದುಕೊಂಡಿತು. ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕಿಂ ಮಣೆ ಹಾಕಿಲ್ಲ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯು 46 ಸ್ಥಾನಗಳಲ್ಲಿ ಗೆಲುವು ಕಂಡು ಮತ್ತೆ

ಕಾಸರಗೋಡಿನಲ್ಲಿ ಬಿಸಿಯೇರುತ್ತಿರುವ ಲೋಕ ಸಭಾ ಚುನಾವಣಾ ಕಣ : ಪ್ರಚಾರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ಮೇಲುಗೈ

ಕಾಸರಗೋಡು : ಕಾಸರಗೋಡು ಲೋಕ ಸಭಾ ಕ್ಷೇತ್ರದಲ್ಲಿ ಒಂದು ತಿಂಗಳ ಹಿಂದೆಯೇ ಪ್ರಚರಣಾ ರಂಗಕ್ಕಿಳಿದ ಸಿಪಿಎಂ ಅಭ್ಯರ್ಥಿ ಯ ಬೆನ್ನಲ್ಲೇ ಇದೀಗ ಬಿಜೆಪಿ ಯ ಮಹಿಳಾ ಅಭ್ಯರ್ಥಿ ಎಂ ಎಲ್ ಅಶ್ವಿನಿಯ ಅನಿರೀಕ್ಷಿತ ಎಂಟ್ರಿ.ಅಭ್ಯರ್ಥಿ ಯಾರೆಂದು ಈ ತನಕ ಘೋಷಣೆ ಆಗದಿದ್ದರೂ ಯು ಡಿ ಎಫ್ ಅಭ್ಯರ್ಥಿ ನಾನೇ ಎಂಬ ಸ್ವಯಂ ಘೋಷಣೆಯೊಂದಿಗೆ ಸದ್ರಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕೂಡಾ ಪ್ರಮುಖರನ್ನು ಬೇಟಿಯಾಗಿ ಪ್ರಚರಣಾ ರಂಗಕ್ಕಿಳಿದಿದ್ದಾರೆ. ಅಭ್ಯರ್ಥಿ ಯಾರೆಂದು ಘೋಷಣೆಯಾಗದ

ಲೋಕ ಸಭಾ ಚುನಾವಣೆಗೆ ಉಡುಪಿ ಜಿಲ್ಲೆಯ ಮತದಾರರ ಪಟ್ಟಿ ಪ್ರಕಟ

ಲೋಕ ಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದ ಕೋರಿಕೆಯಂತೆ ಉಡುಪಿ ಜಿಲ್ಲೆಯ ಸದ್ಯದ ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪ್ರಕಟಿಸಿದರು. ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರಗಳು ಸೇರಿ 10,45,296 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 5,40,833 ಮಹಿಳೆಯರು, 5,04,448 ಗಂಡಸರು ಹಾಗೂ 15 ಮಂದಿ ತೃತೀಯ ಲಿಂಗಿಗಳಾಗಿದ್ದಾರೆ. ಹೊಸದಾಗಿ ಮತದಾರ ಪಟ್ಟಿಗೆ ಸೇರಿದ ಯುವ ಸಮುದಾಯದ ಸಂಖ್ಯೆ 10,245 ಆಗಿದೆ. ಯಥಾಪ್ರಕಾರ ಮತದಾರರ

ಮಿಜೋರಾಂನಲ್ಲಿ ಮುಖ್ಯಮಂತ್ರಿಗಳಿಗೆ ಸೋಲು, ಜೆಡ್‌ಪಿಎಂ ಅಧಿಕಾರಕ್ಕೆ

ಮುಖ್ಯಮಂತ್ರಿ ಜೋರಮ್ ತಂಗ, ಉಪ ಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳ ಸೋಲಿನೊಂದಿಗೆ ಮಿಜೋರಾಂ ನ್ಯಾಶನಲ್ ಫ್ರಂಟ್ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸಹ ಈ ಸರಕಾರದ ಭಾಗವಾಗಿತ್ತು. ಜೆಡ್‌ಪಿಎಂ ಮೈತ್ರಿ ಕೂಟವು 40 ಸದಸ್ಯ ಬಲದ ಮಿಜೋರಾಂನಲ್ಲಿ 27 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಎಂಎನ್ಎಫ್ ಬರೇ 10 ಕಡೆ ಗೆದ್ದಿದೆ. ಬಿಜೆಪಿ 2, ಕಾಂಗ್ರೆಸ್ 1 ಸ್ಥಾನ ಪಡೆದಿವೆ.

ಬಿಜೆಪಿಗೆ ನಾಲ್ಕರಲ್ಲಿ ಮೂರು ಎರಡು ಲಾಭ, ಹೇಗೆ? ಭಾರತ, ಇಂಡಿಯಾಕ್ಕೆ ಸೋಲು, ಎಲ್ಲಿ?

ನಾಲ್ಕು ರಾಜ್ಯಗಳ‌ ಚುನಾವಣೆಯ ಫಲಿತಾಂಶ ಬಿಜೆಪಿಗೆ ಲಾಭ ನೀಡಿದೆ. ಕಾಂಗ್ರೆಸ್ ಬಲ ನಿಂತ ನೀರಾಗಿದೆ. ಭಾರತ, ಇಂಡಿಯಾಗಳು ಸೋತು ಹೋಗಿವೆ. ಬಿಜೆಪಿಯಯ 142 ಹೆಚ್ಚು ಶಾಸಕರನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಮತ ಭಾರ ಭಾರೀ ಇಳಿಯದಿದ್ದರೂ ಒಟ್ಟು 66 ಶಾಸಕರನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ ಮಾತ್ರ ಅದು ತನ್ನ ಶಾಸಕ ಸಂಖ್ಯೆ ಹೆಚ್ಚಿಸಿಕೊಂಡು ಮೂರು ರಾಜ್ಯಗಳ ಕೊರತೆಯನ್ನು ಸ್ವಲ್ಪ ಭರ್ತಿ

ಸಕಲೇಶಪುರ : ಶಾಸಕ ಸಿಮೆಂಟ್ ಮಂಜುಗೆ ಕಾರ್ಯಕರ್ತರಿಂದ ಅಭಿನಂದನೆಗಳ ಮಹಾಪೂರ

ಸಕಲೇಶಪುರ ಕ್ಷೇತ್ರದ ನೂತನ ಶಾಸಕ ಸಿಮೆಂಟ್ ಮಂಜುನಾಥ್ ಅವರಿಗೆ ಸಕಲೇಶಪುರ ಕ್ಷೇತ್ರದ ಕಟ್ಟಾಯ ಹೋಬಳಿ ಕೇಂದ್ರದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸಿಮೆಂಟ್ ಮಂಜು ರವರ ಮನೆಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡುತ್ತಿದ್ದಾರೆ. ಬಿ.ಬಿ ಶಿವಪ್ಪನವರು ಬಳಸುತ್ತಿದ್ದ ಶಾಲು ಮತ್ತು ಪೆನ್ ಅನ್ನು ಉಡುಗೊರೆಯಾಗಿ ಸಿಮೆಂಟ್ ಮಂಜುನಾಥ್ ಪಡೆದರು.

ಬೆಳ್ತಂಗಡಿ : ಬಿಜೆಪಿ ವಿಜಯೋತ್ಸವ ಸಂದರ್ಭದಲ್ಲಿ ಹಲ್ಲೆ

ಬೆಳ್ತಂಗಡಿಯ ಪೆರಾಡಿಯಲ್ಲಿ ಬಿಜೆಪಿಯ ವಿಜಯೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ದಯಾನಂದ ಪೂಜಾರಿಯವರ ಮೇಲೆ ಹಲ್ಲೆ ನಡೆದಿದ್ದು. ಹಲ್ಲೆಗೆ ಒಳಗಾದ ದಯಾನಂದ ಪೂಜಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕರಾದ ಕೆ ವಸಂತ ಬಂಗೇರ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರು ಭೇಟಿ ಮಾಡಿ ಧೈರ್ಯ ತುಂಬಿದರು. ತಾಲೂಕಿನಲ್ಲಿ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಕಾಂಗ್ರೆಸ್

ರಾಜ್ಯದಲ್ಲಿ ಬಹತೇಕ ಶಾಂತಿಯುತವಾಗಿ ನಡೆದ ಮತದಾನ : ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ವಿಧಾನಸಭೆ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಸರಾಸರಿ ಶೇ. 72.67 ಮತದಾನ ದಾಖಲಾಗಿದೆ. ಇದರೊಂದಿಗೆ 2,615 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದಂತಾಗಿದೆ. 224 ಕ್ಷೇತ್ರಗಳ 58,545 ಮತಗಟ್ಟೆಗಳಲ್ಲೂ ಮತದಾನ ಮುಗಿದಿದೆ. ಈ ಬಾರಿ ಎಲ್ಲೂ ಮರು ಮತದಾನ ಇಲ್ಲದಿರುವುದು ವಿಶೇಷ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.75.87 ಮತದಾನ ದಾಖಲಾಗಿದ್ದು ಅಭ್ಯರ್ಥಿಗಳ

ಅಪ್ರಾಪ್ತ ಬಾಲಕನಿಂದ ನಕಲಿ ಮತದಾನ : ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ನಡುವೆ ವಾಗ್ವಾದ

ಕಾರ್ಕಳ: ಅಪ್ರಾಪ್ತ ಬಾಲಕನೋರ್ವ ನಕಲಿ ಮತದಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆ ಬುಧವಾರ ರಾತ್ರಿ ನಡೆದಿದೆ. ಈ ಬಗ್ಗೆ ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿ ಸಂಚರಿಸಬೆಕಾಗಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪೊಲೀಸರ