ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಕ್ಯಾ | ಪ್ರಾಂಜಲ್ ಹೆಸರು ಚಿರಸ್ಥಾಯಿಯಾಗಲು ಸುರತ್ಕಲ್ ವೃತ್ತ ಹಾಗೂ ಗಣೇಶಪುರ – ಸುರತ್ಕಲ್ ರಸ್ತೆಗೆ ಅವರ ಹೆಸರಿಡಬೇಕು ಮತ್ತು ಅವರ ಪುತ್ತಳಿ ಸ್ಥಾಪಿಸಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸತ್ಯಜಿತ್ ಸುರತ್ಕಲ್ ಸರಕಾರವನ್ನು ಆಗ್ರಹಿಸಿದರು. ಕಾಶ್ಮೀರದ ರಜರಿಯಲ್ಲಿ ಸೇನಾಪಡೆಗಳು ಉಗ್ರರ ವಿರುದ್ಧ
ಭತ್ತ ಅನ್ನಕ್ಕೆಂದು ಪಿಡಿದರೆ ಬಾಳೆ ಹಣ್ಣದು ಆಯ್ತು ದೈವವೆ! ಮಂಗಳೂರಿನಲ್ಲಿ ಒಂದು ಬಾಳೆ ಬಯ್ಲು (ಬಯಲು) ಇದೆ. ಈ ಭತ್ತ ಬೆಳೆಯುವ ತುಳು ಜಾಗದ ನೆಲದ ಹೆಸರು ಬದಲಾದುದು ಬರೇ ಶತಮಾನದ ಕತೆ. ಬಾರ ಬಯ್ಲ್ ಎಂದರೆ ಭತ್ತದ ಬಯಲು. ರಾಷ್ಟ್ರೀಯ ಹೆದ್ದಾರಿ ಮಾಜೀ 17 ಹಾಲಿ 66 ಇದರ ನಡುವೆ ಹೋಗಿ, ಈಗ ಇಲ್ಲಿ ಕಟ್ಟಡಗಳು ಬೆಳೆದಿವೆ. ತುಳು ಕನ್ನಡದಲ್ಲಿ ರ ಳ ಲ ಬದಲಾವಣೆ ಬಹಳ ಇವೆ. ತುಳು ಶಬ್ದಗಳಾದ ಕೋರಿ, ಕೆರು, ತರೆ, […]
ಡಿಸೆಂಬರ್ 9ರಂದು ದೇಶದಾದ್ಯಂತ ನಡೆಯಲಿರುವ ರಾಷ್ಟೀಯ ಲೋಕ ಅದಾಲತ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ವಿಚಾರಣೆಗೆ ಬಾಕಿಯಿರುವ ಹಳೆಯ ಪ್ರಕರಣಗಳನ್ನು ಎರಡೂ ಕಕ್ಷಿದಾರರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸದವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶರ್ಮಿಳಾ ಸಿ ಎಸ್ ಹೇಳಿದರು. ಅವರು ಈ ಕುರಿತು
ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡುವಲ್ಲಿ ವಿಫಲವಾದ ಬೇಸರದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಪುತ್ತೂರಿನ ಖಾಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ(17) ಮೃತಪಟ್ಟವರು. ಎರಡು ವಾರಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ನಿಶಾ ರನ್ನಿಂಗ್ ರೇಸ್ನಲ್ಲಿ
ರಾಜ್ಯದ ಪ್ರಮುಖ ಭಾಷೆಯಾದ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ ‘ಬೆಂಗಳೂರು ಕಂಬಳನಮ್ಮ ಕಂಬಳ’ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪುರಾತನ ಕಾಲದಿಂದ ಬಂದಿರುವ ಕಂಬಳವು ಕರಾವಳಿಯ ಜಾನಪದ ಕಲೆ. ಅದು ಬೆಂಗಳೂರಿನಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಕರಾವಳಿಯ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ಈ
ಬೋರ್ ವೆಲ್ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿ ೩೩ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಇಂದು ಮುಂಜಾನೆ ಸಂಭವಿಸಿದೆ. ಮೃತರನ್ನು ಬಜ್ಪೆ ಮೂಲದ ಕಿಶೋರ್ ಶೆಟ್ಟಿ(35) ಮತ್ತು ಫಿಲೀಪ್ ಮೇರಿ ಲೋಬೋ (34) ಎಂದು ಗುರುತಿಸಲಾಗಿದೆ.ನಿತೀಶ್ ಭಡಾರಿ(35), ಪ್ರೀತಿ ಲೋಬೋ(29) ಮತ್ತು ಹರೀಶ್(62)
ಮಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಅತ್ಯಂತ ಮಹತ್ವದ ಪಾತ್ರವಿದೆ. ವಸ್ತು ನಿಷ್ಠ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ಜನತೆಗೆ ತಿಳಿಸುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4 ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ದ.ಕ. ಜಿಲ್ಲೆಯ ಪತ್ರಕರ್ತರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ
ಮಂಗಳೂರು: ನ.16ರಿಂದ 26ರ ವರೆಗೆ ಸಿಟಿಗೋಲ್ಡ್ನಲ್ಲಿ ಆಂಟಿಕ್ ಜ್ಯುವೆಲ್ಲರಿ ಎಕ್ಸಿವಿಷನ್ಗೆ ಚಾಲನೆ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸಿಟಿ ಗೋಲ್ಡ್ ರಜತ ಸಂಭ್ರಮದಲ್ಲಿದ್ದು, ನ.16ರಿಂದ 26ರ ವರೆಗೆ ಆಂಟಿಕ್ ಜ್ಯುವೆಲ್ಲರಿ ಎಕ್ಸಿವಿಷನ್ನ್ನು ಮಂಗಳೂರಿನ ಶಾಖೆಯಲ್ಲಿ ಆಯೋಜಿಸಿದ್ದಾರೆ. ಬಿಗ್ಬಾಸ್ ವಿನ್ನರ್, ನಟ ರಾಕ್ಸ್ಟಾರ್ ರೂಪೇಶ್ ಶೆಟ್ಟಿ ಅವರು ಆಂಟಿಕ್ ಜ್ಯುವೆಲ್ಲರಿ ಎಕ್ಸಿವಿಷನ್ನ್ನು ಉದ್ಘಾಟಿಸಿದ್ದಾರೆ. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸಯ್ಯದ್ ಮದನಿ
ಕೇರಳ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಸ್ಪೋಟ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಗಡಿಭಾಗದಲ್ಲಿ ಅಲರ್ಟ್ ಇರುವಂತೆ ಡಿಜಿ, ಐಜಿಯವರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕೇರಳ ಗಡಿ ಭಾಗದಲ್ಲಿ ಭದ್ರತೆ, ನಿಗಾ ಹೆಚ್ಚಿಸಲಾಗುವುದು ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ದಸರಾ ಸಂದರ್ಭದಲ್ಲಿ ಮೈಸೂರು, ಕೊಡಗು
ಬಜ್ಪೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಿಥುನ್ ರೈ, ಡಿಐಜಿ ಡಾ. ಚಂದ್ರಗುಪ್ತ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ದಿನೇಶ್ ಕುಮಾರ್, ಮನೋಜ್ ಕುಮಾರ್, ನಿರೀಕ್ಷಕ ಸಂದೀಪ್ ಮತ್ತಿತರರು