ಸದ್ಯ ಉಡುಪಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಸಂಪೂರ್ಣ ಬಂದ್ ಆಗಿದ್ದು, ಅಧಿಕೃತ ಮರಳು ಗಣಿಗಳು ಮಾತ್ರ ಕಾರ್ಯಚರಣೆ ಮಾಡುತ್ತಿವೆ. ಇಂತಹ ಸಂದರ್ಭದಲ್ಲೂ ಕೂಡ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಕುಂದಾಪುರ ತಾಲೂಕು ಬೇಳೂರು ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ ಸಕ್ರಮ ಮರುಳುಗಾರಿಕೆಯನ್ನ ದುರುಪಯೋಗ ಪಡಿಸಿಕೊಂಡ ಕೆಲ
ರಾಜ್ಯ ಸರ್ಕಾರದ ವಿರುದ್ಧ ಧೋರಣೆಗಳನ್ನು ಖಂಡಿಸಿ ಲಾರಿ ಮತ್ತು ಟೆಂಪೋ ಚಾಲಕರು ಮುಷ್ಕರ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ನೂರಾರು ಲಾರಿ ಹಾಗೂ ಟೆಂಪೊಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅನಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಬ್ರಹ್ಮಾವರ ಭಾಗದಲ್ಲಿ ಐನೂರಕ್ಕೂ ಹೆಚ್ಚು ಲಾರಿ, ಟೆಂಪೋಗಳನ್ನು ರಸ್ತೆ ಬದಿ ಸಾಲಾಗಿ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದಾರೆ.
ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ. ಯಾರೂ ಕೂಡ ಶಾಂತಿ ಕದಡುವ ಕೆಲಸ ಮಾಡಬೇಡಿ ಎಂದು ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ಹೇಳಿದರು. ಅವರು ಕಾರ್ಕಳ ನಗರ ಠಾಣೆ ಮತ್ತು ಗ್ರಾಮಾಂತರ ಠಾಣೆ ವ್ಯಾಪ್ತಿಯ ಎಲ್ಲಾ ಮಸೀದಿಯ ಧರ್ಮಗುರುಗಳು ಮತ್ತು ಮಸೀದಿಯ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು. ಈದ್ ಮಿಲಾದ್ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣವಾದ ಭದ್ರತೆಯನ್ನು ಕೊಡುತ್ತೇವೆ. ಸಮಯದೊಳಗಡೆ ಸಭೆ, ಸಮಾರಂಭಗಳನ್ನು ಮುಕ್ತಾಯಗೊಳಿಸಬೇಕು ಎಂದರು. ಈ ಸಂದರ್ಭ
ಭಾರತೀಯ ಸೇನೆಗೆ ಸೇರಬಯಸುವ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ ಉಡುಪಿಯಲ್ಲಿ ಆಯೋಜಿಸಲಾಗಿದೆ. ಉಡುಪಿ ಸಮೀಪದ ಉದ್ಯಾವರದ ಹಿನ್ನೀರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸೀ ಸೈಲಿಂಗ್ ತರಬೇತಿ ಕಾರ್ಯಾಗಾರದಲ್ಲಿ ಹೊರರಾಜ್ಯದ ಕೆಡೆಟ್ ಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ನೂತನ ಕೆಡೆಟ್ಗಳ ನೌಕಯಾನದ ಎಕ್ಸ್ಪೀರಿಯನ್ಸ್ ಹೇಗಿತ್ತು ಅಂತೀರಾ… ಈ ಸ್ಟೋರಿ ನೋಡಿ ಭಾರತೀಯ ನೌಕಾದಳಕ್ಕೆ ಸೇರಬಯಸುವ ಎನ್‍ಸಿಸಿ ಕೆಡೆಟ್‍ಗಳು
ಮನೆಯಿಂದ ಹೊರಗೆ ತೆರಳಿದ ಯುವಕನೋರ್ವ ವಾರಗಳ ಬಳಿಕ ನಾಯಿಯ ಸಹಾಯದಿಂದ ಮನೆಗೆ ಮರಳಿದ ಘಟನೆ ಉಡುಪಿಯ ಅಮವಾಸೆ ಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಮಟ್ಟಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಅವರ ಮಗ ವಿವೇಕಾನಂದ (28) ನಾಪತ್ತೆಯಾಗಿದ್ದ ಯುವಕ. ವಿವೇಕಾನಂದ ಸೆಪ್ಟೆಂಬರ್ 16 ರಂದು ಮನೆಯಿಂದಲೇ ನಾಪತ್ತೆಯಾಗಿದ್ದ. ಮನೆಯಿಂದ ಹೊರಡುವಾಗ ಮನೆಯ ನಾಯಿ ಕೂಡು ವಿವೇಕಾನಂದ ಅವರ ಜೊತೆ ತೆರಳಿತ್ತು. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ
ಕಾರ್ಕಳ: ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಹೇಳಿದರು. ಅವರು ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. 1993 ರಲ್ಲಿಯೆ ಮಹಿಳೆಯರಿಗೆ ಮೀಸಲಾತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ನಲ್ಲಿ 50% ಮೀಸಲಾತಿ ಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿತ್ತು. ಅಂದಿನ
ಕಳೆದ ಎಂಟುದಿನಗಳ ಹಿಂದೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ ಯುವಕ ಇಂದು ತೊಂಬಟ್ಟು ಸಮೀಪದ ಕಬ್ಬಿನಾಲೆ ಕಾಡಂಚಿನಲ್ಲಿ ಪತ್ತೆಯಾಗಿದ್ದಾನೆ. ಇರ್ಕಿಗದ್ದೆಯ ಶೀನಪ್ಪ ನಾಯ್ಕ್ ಎನ್ನುವವರ ಪುತ್ರ ಇಪ್ಪತ್ತೆಂಟು ವರ್ಷದ ವಿವೇಕನಂದ ಮನೆಯಿಂದ ಹೊರ ಹೋಗಿದ್ದ ,ಆ ಬಳಿಕ ನಾಪತ್ತೆಯಾಗಿದ್ದ ,ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಬ್ಬಿನಾಲೆ ಸಮೀಪ ಯುವಕ ಪತ್ತೆಯಾಗಿದ್ದು ಕಳೆದ ಎಂಟು ದಿನಗಳಿಂದ ನೀರು ಆಹಾರವಿಲ್ಲದೇ ಕಾಡಲ್ಲಿಯೇ ಅಲೆದಾಡಿದ್ದ
ಪಡುಕುತ್ಯಾರಿನಲ್ಲಿ ಚಾತುರ್ಮಾಸ್ಯ ವ್ರತಾನುಷ್ಠರಾಗಿರುವ ಜಗದ್ಗುರುಗಳವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಲು ಸೆ. 22ರಂದು 2 ಗಂಟೆಗೆ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಗಮಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮಹಾಸಂಸ್ಥಾನಕ್ಕೆ ಪ್ರಥಮಬಾರಿ ಆಗಮಿಸಲಿರುವ ಸಚಿವರನ್ನು, ಮಹಾ ಸಂಸ್ಥಾನದ ಸಹ
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ.ಗೆ ಮಂಜುನಾಥ ಖಾರ್ವಿ ಅವರು ನೀಡಿದ ಮೂರು ಚೆಕ್‌ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಒಟ್ಟು 88 ಲ.ರೂ. ಪಾವತಿಸುವಂತೆ ನ್ಯಾಯಾಲಯದ ತೀರ್ಪಿನಂತೆ ಹಣ ಮರುಪಾವತಿ ಮಾಡಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ 5ನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸೆಪ್ಟೆಂಬರ್ 20 ರಂದು ಹಾಜರು ಪಡಿಸಿದ
ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಕನ್ನಡ ಬಾಷೆಯಲ್ಲಿ ಪರಿಚಯಿಸಿ ಕೆವೈಸಿ ಲಿಂಕ್ ಆಗಿಲ್ಲ ಒಟಿಪಿ ನೀಡಿ ಎಂದು ಹೇಳಿ, ಒಟಿಪಿ ನೀಡುತ್ತಿದಂತೆ ಮೂರು ಬಾರಿ ಖಾತೆಯಿಂದ ಹಣ ಡ್ರಾ ಆಗಿದ್ದು ಮೂರು ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ತೆಂಕ ಎರ್ಮಾಳಿನಲ್ಲಿ ನಡೆದಿದೆ. ಎರ್ಮಾಳು ತೆಂಕ ಕಿನಾರ ಶಾಲೆಯ ಬಳಿಯ ನಿವಾಸಿ ಶಂಕರ್ ಎಂಬವರೇ ಹಣ ಕಳೆದುಕೊಂಡವರು. ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದ ಇವರು ರಾತ್ರಿ ಹಗಲೆನ್ನದೆ, ಬಿಸಿಲು ಮಳೆಗೆ ಮೀನುಗಾರಿಕೆ ನಡೆಸಿ ಕೂಡಿಟ್ಟ ಹಣ