ಪುತ್ತೂರು :ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ವಿದ್ಯಾಮಾತಾದ 23 ಅಭ್ಯರ್ಥಿಗಳು ಉತ್ತೀರ್ಣ. ದಿನಾಂಕ 29/09/2024 ಮತ್ತು 26/10/2024 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27/10/2024 ರಂದು ನಡೆದ ನೇಮಕಾತಿ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಅಕಾಡೆಮಿಯ 23 ಅಭ್ಯರ್ಥಿಗಳು ಉತ್ತೀರ್ಣರಾಗಿ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿರುತ್ತಾರೆ.
ಕಲ್ಮಕಾರು : ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಅಯ್ಯಪ್ಪ ಮಾಲೆಧಾರಿ ಯುವಕ,ಸ್ನಾನಕ್ಕೆ ತೆರಳಿದ ಅಯ್ಯಪ್ಪ ಮಾಲೆಧಾರಿಯೊಬ್ಬರ ಮೇಲೆ ಇಂದು ಮುಂಜಾನೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕಲ್ಮಕಾರು ಗ್ರಾಮದ ಚರಿತ್ ಎಂಬವರು ಆನೆ ದಾಳಿಗೆ ಒಳಗಾದ ಯುವಕ. ಡಿ.17 ರ ಮುಂಜಾನೆ ಸ್ನಾನದ ಬಳಿಕ ನೀರಿನ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ಘಟನೆ ನಡೆದಿದೆ.ಅಯ್ಯಪ್ಪ ವೃತಧಾರಿಗಳು ತಂಗುವ ಟೆಂಟ್
ಮೂಡುಬಿದಿರೆ ತಾಲೂಕಿನ ಪಡುಕೊಣಾಜೆ ಗ್ರಾಮದಲ್ಲಿ ಸುಮಾರು 45 ಎಕ್ರೆ ಜಾಗವನ್ನು ಸರಕಾರ ವಕ್ಫ್ ಗೆ ಮೀಸಲಿಟ್ಟಿದೆ ಎಂದು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹಬ್ಬಿಸಿ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ ಎಂದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಆರೋಪಿಸಿದ್ದಾರೆ. ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಸುದ್ಧಿಯ
ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ
ಮೂಡುಬಿದಿರೆ: ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಹಲವು ಬಾರಿ ಸೋತವರೂ ತಾವು ಮುಖ್ಯಮಂತ್ರಿ ಪದವಿಗೆ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿರುವುದರಿಂದ ರಾಜಕೀಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.’ಪ್ರಾಸಿಕ್ಯೂಷನ್ ಆದೇಶದ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರ ಬೆಂಬಲಕ್ಕೆ
ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಅನ್ನು ‘ಕುರ್ಚಿ ಉಳಿಸಿ ಬಜೆಟ್’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ‘ಈ ಬಜೆಟ್ ಇತರೆ ರಾಜ್ಯಗಳ ವೆಚ್ಚದಲ್ಲಿ ಬಿಜೆಪಿ ಮಿತ್ರಪಕ್ಷಗಳಿಗೆ ‘ಪೊಳ್ಳು ಭರವಸೆ’ಗಳನ್ನು ನೀಡಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ‘2024ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆ ಹಾಗೂ ಹಿಂದಿನ ಬಜೆಟ್‌ಗಳ
ಬುಧವಾರ ದಿಲ್ಲಿಯಲ್ಲಿ ಇಂಡಿಯಾ ಮೈತ್ರಿ ಕೂಟ ಮತ್ತು ಎನ್‌ಡಿಎ ಮೈತ್ರಿ ಕೂಟ ಎರಡೂ ಕುಟಗಳು ತಮ್ಮ ರಾಜಕೀಯ ತಂತ್ರಗಾರಿಕೆಯ ಬಗೆಗೆ ಸಭೆ ನಡೆಸಿದವು. ಪಾಟ್ನಾದಿಂದ ಬೆಳಿಗ್ಗೆ ಹತ್ತೂವರೆ ಗಂಟೆಯ ಹೊತ್ತಿಗೆ ಹೊರಟ ವಿಸ್ತಾರ್ ವಿಮಾನದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮತ್ತು ಮಾಜೀ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ದಿಲ್ಲಿಗೆ ಹೊರಟದ್ದು ಭಾರೀ ಗಾಳಿ ಸುದ್ದಿಗಳಿಗೆ ಕಾರಣವಾಗಿತ್ತು. ಕೊನೆಗೆ ನಿತೀಶ್ ಕುಮಾರ್ ಅವರು ಎನ್‌ಡಿಎ ಕೂಟದ ಸಭೆಯಲ್ಲಿ ಭಾಗವಹಿಸಿದರೆ,
ಚುನಾವಣಾ ಸಮೀಕ್ಷೆಗಳು ಕಾಸಿಗೆ ತಕ್ಕ ಕಜ್ಜಾಯವನ್ನು ಪಕ್ಷಗಳಿಗೆ ನೀಡಿವೆ. ಇದು ಈ ಬಾರಿಯ ಕೆಲವು ಗೇಲಿ ಗೆಲುವು ಸಂಖ್ಯೆಗಳಾಗಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ಸು 9 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಆದರೆ 13ರಿಂದ 15 ಸ್ಥಾನ ಗೆಲ್ಲುವುದಾಗಿ ಆಜ್ ತಕ್ ಹೇಳಿದೆ. ರಾಜಸ್ತಾನದಲ್ಲಿನ ಲೋಕಸಭಾ ಸ್ಥಾನಗಳ ಸಂಖ್ಯೆ 25 ಮಾತ್ರ. ಚಾಣಕ್ಯ ಮತಗಟ್ಟೆ ಸಮೀಕ್ಷೆಯಂತೆ ಬಿಜೆಪಿ ಅಲ್ಲಿ 33 ಸ್ಥಾನ ಗೆಲ್ಲುತ್ತದಂತೆ. ಆಜ್ ತಕ್ ಪ್ರಕಾರ ಜಾರ್ಖಂಡ್‌ನಲ್ಲಿ ಸಿಪಿಐಎಂಎಲ್ ಪಕ್ಷವು
ಪ್ರಚಾರ ನಡೆಸಬಾರದ 48 ಗಂಟೆಗಳ ಕಾಲ ಧ್ಯಾನ ಮಾಡುವ ಮೋದಿಯವರ ಕಾರ್ಯವು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಜೂನ್ 1ರಂದು ಮೋದಿಯವರ ವಾರಣಾಸಿ ಕ್ಷೇತ್ರಕ್ಕೂ ಸೇರಿ ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಅದರಲ್ಲಿ ಲಾಭ ಪಡೆಯಲು ಪ್ರಧಾನಿ ಮೋದಿಯವರು ಪ್ರಚಾರ ಮಾಡಬಾರದ 48 ಗಂಟೆಗಳ ಸದ್ದಿಲ್ಲದ ಕಾಲವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಮತದಾರರ ಮೇಲೆ ಧಾರ್ಮಿಕ
ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಭಾವಚಿತ್ರದ ಬದಲು ಬಿಜೆಪಿ ಮುಖಂಡನ ಭಾವಚಿತ್ರ ಮುದ್ರಿಸಲ್ಪಟ್ಟಿದೆ! ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಕೆ.ಕೆ.ಮಂಜುನಾಥ್ ಕುಮಾರ್ ಅವರ ಚುನಾವಣಾ ಪ್ರಚಾರ ಪತ್ರದಲ್ಲಿ ಈ ಎಡವಟ್ಟು ಕಂಡು ಬಂದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿಯ ಬದಲು ಬಿಜೆಪಿ