ಕುಂದಾಪುರ: ದಲಿತ ಸಮುದಾಯದ ಮನೆಗಳೇ ಇಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗಿದ್ದು, ದಲಿತರು ಭವನವನ್ನು ಬಳಸಬಾರದು ಎನ್ನುವ ದೃಷ್ಠಿಯಲ್ಲಿ ನಿರ್ಮಿಸಿದಂತಿದೆ. ಅಂಬೇಡ್ಕರ್ ಭವನ ನಿರ್ಮಾಣದ ಹಿಂದಿನ ಉದ್ದೇಶವೇನು? ಯಾರ ಲಾಭಕ್ಕಾಗಿ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನುವುದರ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ದಸಂಸ ಮುಖಂಡ ರಾಜು
ದಲಿತರಿಗಾಗಿಯೇ ಆಳುವ ಸರ್ಕಾರಗಳು ತರುತ್ತಿರುವ ಹೊಸ-ಹೊಸ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ ಎಂಬ ಆರೋಪಗಳು ಆಗಾಗೆ ಕೇಳಿ ಬರುತ್ತಲೇ ಇವೆ. ಗೋಪಾಡಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಈ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಕುರಿತಾದ ಸ್ಪೆಶಲ್ ರಿಪೋರ್ಟ್ ನೋಡಿ. ದಲಿತರ ಸಬಲೀಕರಣಕ್ಕಾಗಿ ಸರ್ಕಾರ ನಾನಾ ಯೋಜನೆಗಳನ್ನು ಹೊರತರುತ್ತಿದೆ. ಅತ್ಯಂತ ತೀರ ಹಿಂದುಳಿದ ದಲಿತ ಸಮಾಜದ ಕಾರ್ಯ ಚಟುವಟಿಕೆಗಳಿಗೆ ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ
ಉಡುಪಿ:ಉದ್ಯಮಿಗೆ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರುಬಹುಕೋಟಿ ರೂಪಾಯಿ ವಂಚನೆ ನಡೆಸಿರು ಹಿಂದೂ ಭಾಷಣಕಾರ್ತಿ ಚೈತ್ರ ಕುಂದಾಪುರ ಸಿಸಿಬಿ ಉಡುಪಿ ಪೊಲೀಸರು ಶ್ರೀ ಕೃಷ್ಣ ಮಠದ ಬಳಿ ಮಿಂಚಿನ ಕಾರ್ಯಚರಣೆ ನಡೆಸಿ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ವಂಚನೆ ಅರೋಪದಲ್ಲಿ ತಲೆಮರೆಸಿಕೊಂಡಿದ್ದ ಶ್ರೀಕಾಂತ್ ನಾಯಕ್ ಪೆಲತ್ತೂರು ಮತ್ತು ಚೈತ್ರ ಕುಂದಾಪುರನನ್ನು ವಶಕ್ಕೆ ಪಡೆದಿದ್ದಾರೆ. ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉಡುಪಿ ಜಿಲ್ಲೆಯ,
ಕುಂದಾಪುರ: ಕೊರಗರಿಗೆ ಕೃಷಿ ಭೂಮಿ ಇಲ್ಲದಿರುವುದರಿಂದ ಅವರು ಕೃಷಿಕರಾಗದೇ ಇಂದಿಗೂ ದಯನೀಯ ಸ್ಥಿತಿಯಲ್ಲಿ ಇದ್ದಾರೆ. ಹಲವು ಸರ್ಕಾರಗಳು ನಾನಾ ಯೋಜನೆಗಳನ್ನು ತಂದರೂ ಕೊರಗರಿಗೆ ಕೃಷಿ ಮಾಡಿಕೊಳ್ಳಲು ತುಂಡು ಭೂಮಿಯನ್ನೂ ಕೊಟ್ಟಿಲ್ಲ. ಕೊರಗ ಸಮುದಾಯದ ಮನವಿಗಳು ಕೇವಲ ಕುಂದು ಕೊರತೆ ಸಭೆಗೆ ಮಾತ್ರವೇ ಸೀಮಿತವಾಗಬಾರದು. ಅದು ಕಾರ್ಯರೂಪಕ್ಕೂ ಬರಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಹೇಳಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ
ಕುಂದಾಪುರ: ಅರಶಿನಗುಂಡಿ ಜಲಪಾತ ವೀಕ್ಷಿಸುತ್ತಿದ್ದ ವೇಳೆ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಬೆನ್ನಲ್ಲೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಿಶ್ವಪ್ರಸಿದ್ದ ತ್ರಾಸಿ-ಮರವಂತೆ ಬೀಚ್ ಗೆ ಪ್ರವಾಸಿಗರು ಇಳಿಯದಂತೆ ಮುಂಜಾಗ್ರತ ಕ್ರಮವಾಗಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಕೆಂಪು ಬಣ್ಣದ ರಿಬ್ಬನ್ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ. ಅಲ್ಲದೇ ಬೀಚ್
ಕುಂದಾಪುರ; ಬೈಂದೂರಿನ ಬಾರ್‍ವೂಂದರ ಮುಂಭಾಗದಲ್ಲಿ ಕಂಠಪೂರ್ತಿ ಕುಡಿದು ಪುಡಿ ರೌಡಿಗಳ ತಂಡ ಅಟ್ಟಹಾಸ ಮೆರೆದಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ವಾಹನ ಅಡ್ಡ ಬಂದ ಕಾರಣ ಆರಂಭವಾದ ವಾಗ್ವಾದ, ಪರಸ್ಪರ ಹಲ್ಲೆ ನಡೆಸಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ರಮೇಶ್ ದೇವಾಡಿಗ ಹಾಗೂ ರವಿ ಪೂಜಾರಿ ಮೇಲೆ ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ ಪಾರ್ಕಿಂಗ್ ನಿಲ್ಲಿಸಿದ ವಾಹನದ ಗಾಜನ್ನು ಹೆಲ್ಮೆಟ್ ಮತ್ತು ಸೋಡಾ ಬಾಟಲಿಗಳಿಂದ ಜಖಂಗೊಳಿಸಿದ್ದಾರೆ. ಪ್ರಕರಣದ ದೃಶ್ಯಾವಳಿ
ಕುಂದಾಪುರದ ನಾಗರಾಜ್ ಅರೆಹೊಳೆ ನಿರ್ದೇಶನದ ಅಮ್ಮ ಟಾಕೀಸ್ ಬಾಗಲಕೋಟ ಸಂಸ್ಥೆಯಡಿ ರತ್ನಮಾಲಾ ಬಾದರದಿನ್ನಿ ನಿರ್ಮಿಸುತ್ತಿರುವ “90 ಬಿಡಿ ಮನೀಗ್ ನಡಿ” ಚಿತ್ರ ಜೂನ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ವಿಭಿನ್ನ ಗೆಟಪ್‍ಗಳ ಮೂಲಕ ಈಗಾಗಲೇ ಸುದ್ದಿಯಲ್ಲಿದ್ದಾರೆ. ಕ್ರೈಂ ವರದಿಗಾರರಾಗಿ ಪತ್ರಿಕೆ ಮತ್ತು ವಾಹಿನಿಗಳಲ್ಲಿ ಕೆಲಸ ಮಾಡಿರುವ ಕುಂದಾಪುರ ಮೂಲದ
ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೊರಗರ ಭೂಮಿ ಸಮಸ್ಯೆ ಹಾಗೂ ವಿವಿಧ ಬೇಡಿಕೆಗೆ ಸಂಬಂಧಪಟ್ಟಂತೆ ನಾಡ ಗ್ರಾಪಂ ಮುಂಭಾಗ ಧರಣಿ ನಡೆಸುತ್ತಿದ್ದು, ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ. ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಸೂಚನೆಯಂತೆ ಸ್ಥಳಕ್ಕೆ ಆಗಮಿಸಿದ ಕುದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಧರಣಿ ನಿರತರಿಗೆ ತಿಳುವಳಿಕೆ ಪತ್ರವನ್ನು ನೀಡಿದರು. ಕೊರಗರ ವಿವಿಧ ಬೇಡಿಕೆಗಳ
ಉಡುಪಿ : ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿ ಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೋಟ್ ಮೂಲಕ ತೆರಳಿ ನದಿ ನಡುವೆ ಬೆಳೆಸಿದ ಕಾಂಡ್ಲಾ ವನಗಳ ವೀಕ್ಷಣೆ ಮಾಡಿದ ಬಳಿಕ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಶೇ.20 ಅರಣ್ಯ
ಕುಂದಾಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಮಕುಮಾರ್ ಅವರು ಎ.23ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಬೈಂದೂರಿನಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿಸಲಾದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಪರ ಅಲೆ ಇದ್ದು, ಡಿಕೆಶಿ ಅವರ ಕಾರ್ಯಕ್ರಮದಲ್ಲಿಯೇ ಬಿಜೆಪಿಯ ಹಲವು ಮುಖಂಡರು ಹಾಗೂ