ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಏಳು ಜನ ಮನೆಗಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್ ತಿಳಿಸಿದ್ದಾರೆ. ರಮೇಶ ಕಾಳೆ, ಸುರೇಶ ಚವ್ಹಾಣ, ಪರಶುರಾಮ ಕಾಳೆ, ಕಿರಣ ಬೇಡಕೇರ, ದೇವದಾಸ್ ಚವ್ಹಾಣ , ತನ್ವೀರ್
ವಿಜಯಪುರ ನಗರದಲ್ಲಿ ಶನಿವಾರ ರಾತ್ರಿ 11-47 ಮತ್ತು 11-48ಕ್ಕೆ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಜಲನಗರ, ಕೀರ್ತಿ ನಗರ, ಟ್ರಜರಿ ಕಾಲೊನಿ, ಗಣೇಶ ನಗರ, ನವಭಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಾಗೂ ಜಿಲ್ಲೆಯ ಕೂಡಗಿ, ಮುಳವಾಡ, ಬಬಲೇಶ್ವರ ಇನ್ನು ಹಲವೆಡೆ ಎರಡು ಬಾರಿ ದೊಡ್ಡದಾಗಿ ಶಬ್ಧವಾಗಿದೆ. ಜೊತೆಗೆ ಭೂಮಿಯೂ ಕಂಪಿಸಿದೆ. ಇನ್ನೂ ಕೂಡಗಿ ಗ್ರಾಮದ ಅಬ್ದುಲ್ ಖಾದ್ರೀ ಜಾಗೀರದ್ದಾರ ಎಂಬುವವರು ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್
ಕರ್ನಾಟಕ ರಾಜ್ಯ ಸರ್ಕಾರ ಶ್ರೀ ಗಜಾನನ ಉತ್ಸವ ಆಚರಣೆ ನಿರ್ಭಂಧ ವಿಧಿಸುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಶ್ರೀ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಾರ್ವಜನಿಕ ಗಣೇಶೋತ್ಸವವನ್ನು ಕೋವಿಡ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ , ಸಾಮಾಜಿಕ ಅಂತರ , ಸ್ಯಾನಿಟೃಸರು,ಮಾಸ್ಕ್ ಬಳಿಸಿ ಅತ್ಯಂತ ಸರಳವಾಗಿ ಆಚರಿಸುವುವ ಕಾರಣ ಸಾರ್ವಜನಿಕ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕೆಂದು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ HP ಪೆಟ್ರೋಲ್ ಪಂಪ್ ಹತ್ತಿರ ಪ್ರತಿಭಟನೆ ಮಾಡಲಾಯಿತು. ತಿಕೋಟಾ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿರೇಶ ಸಿಂಧೂರ ಮಾತನಾಡಿ,ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ವ್ಯಾಪ್ತಿಗೆ ತರಬೇಕು
ವಿಜಯಪುರ: ಕೇಂದ್ರ ಸರಕಾರ ನಿರಂತರವಾಗಿ ತೈಲ ಬೆಲೆ ಏರಿಸುವ ಮೂಲಕ ಬಡವರನ್ನು ಸಂಕಷ್ಟಕ್ಕೆ ದೂಡಿದೆ ಎಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಬಿ ಪ್ರಕಾಲಿ ಅವರು ಆರೋಪಿಸಿದ್ದಾರೆ. ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಕಡಿಮೆ ಇದ್ದರು ಕೂಡ ಸರಕಾರ ಬೆಲೆಯನ್ನು ಗಗನಕ್ಕೆ ಏರಿಸುವ ಮೂಲಕ ಜನರ ಹಿತ
ವಿಜಯಪುರ ಜಿಲ್ಲೆಯ ಕನ್ನೊಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಯಕರ್ನಾಟಕ ಸಂಘಟನೆ ವಾಹನ ಚಾಲಕರ ಘಟಕದ ಸಹಯೋಗದಲ್ಲಿ ಸತತವಾಗಿ ನಾಲ್ಕು ದಿನಗಳಿಂದ ಉಪಹಾರ ಸೇವೆ ಮಾಡುತ್ತಿದ್ದಾರೆ. ಕಾಶಿನಾಥ ಬಿರಾದಾರ ಎನ್ನುವರು ವಾಹನದ ಚಾಲಕನಾಗಿದ್ದು ಕಳೆದ ವಾರ ವಾಹನ ಚಲಾಯಿಸುವಾಗ ಊಟ ಸಿಗದೆ ಪರದಾಡಿ ತುಂಬಾ ಸಂಕಷ್ಟ ಅನುಭವಿಸಿದ್ದರು. ಆದರಿಂದ ಚಾಲಕರ ತೊಂದರೆಗೆ ಸ್ಪಂದಿಸುವ ಮನಸ್ಸಿಂದ ತಮಗಾದ ಊಟದ ತೊಂದರೆ ಬೇರೆ ಚಾಲಕರು ಅನುಭವಿಸಬಾರದು ಎಂದು ಸತತವಾಗಿ ನಾಲ್ಕು ದಿನದಿಂದ ತಮ್ಮ