ಕುಂದಾಪುರ: ವಾರದ ಹಿಂದೆ ಮಹಿಳೆಯ ತಲೆಗೆ ರಾಡ್ನಿಂದ ಹಲ್ಲೆ ನಡೆಸಿ ಬಳಿಕ ಚಿನ್ನಾಭರಣಗಳನ್ನು ಎಗರಿಸಿದ ಆರೋಪಿಯನ್ನು ತ್ರಾಸಿಯ ಬಳಿ ಕುಂದಾಪುರ ಗ್ರಾಮಾಂತರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ತ್ರಾಸಿಯ ಭರತ್ನಗರ ನಿವಾಸಿ ಪ್ರವೀಣ್ (24) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಬೈಕ್, ಚಿನ್ನದ ಉಂಗುರ ಮತ್ತು
ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಶಾಲೆಯಿಂದ ಮನೆಗೆ ವಾಪಾಸಾಗುವ ವೇಳೆ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಯತಪ್ಪಿ ಹರಿಯುವ ನದಿಗೆ ಬಿದ್ದು ನೀರುಪಾಲಾದ ಕಾಲ್ತೋಡು ಗ್ರಾಮದ ಮಕ್ಕಿಮನೆ ನಿವಾಸಿ ಪ್ರದೀಪ್ ಪೂಜಾರಿಯವರ ಪುತ್ರಿ, 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ ಕೊನೆಗೂ 48 ಗಂಟೆಯ ಸತತ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದೆ. ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು ನಿರಂತರವಾಗಿ ಶೋಧ ಕಾರ್ಯ ನಡೆಸಲಾಗಿತ್ತು.
ಎರಡು ದಿನಗಳಿಂದ ಭಾರಿ ಮಳೆ ಹಿನ್ನೆಲೆ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡದ ಅಂಚಿನಲ್ಲಿರುವ ಶಿರೂರು ಬೈಂದೂರು ಕಳುಹಿತ್ಲು ಕಲ್ಮಕ್ಕಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಯಾವುದೇ ಸಂಪರ್ಕವಿಲ್ಲದೆ ಜನ ಕಂಗೆಟ್ಟಿದ್ದಾರೆ ಭಾರೀ ಮಳೆಯಿಂದಾದ್ದು ರಾತ್ರಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ ,ರಾಜ್ಯ ಹೆದ್ದಾರಿ ಸಂಪೂರ್ಣ , ಕೆಲವು ಶಾಲೆಯ ಎದುರುಗಡೆ ಮುಳುಗಡೆಯಾಗಿದೆ ಯಾವುದೇ ವಾಹನ ಸಂಚಾರ ಇಲ್ಲದೆ ಸ್ಥಗಿತಗೊಂಡಿದೆ. ಹಲವಾರು ಮನೆಗಳು ರಸ್ತೆ ಸಂಪರ್ಕವನ್ನೇ
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಕುಂದಾಪುರದ ವೇಟ್ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪುರುಷರ 61 ಕೆ.ಜಿ. ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ 269 ಕೆಜಿ ಭಾರ ಎತ್ತುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಎರಡನೇ ಬಾರಿ ಭಾರತಕ್ಕೆ ಪದಕ
ಬೈಂದೂರು: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಪರೀತ ರಕ್ಕಸ ಅಲೆಗಳ ಕಡಲ್ಕೊರೆತ ಸೌಪರ್ಣಿಕಾ ನದಿಯ ನೆರೆಹಾವಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗಿ ಸಾಕಷ್ಟು ಮುಗ್ಧ ಜೀವಗಳು ಮತ್ತು ಜಾನುವಾರುಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿವೆ. ಅಪಘಾತಗಳು ಹೆಚ್ಚುತ್ತಿರುವುದರಿಂದ ಜನರು ಭೀತರಾಗಿದ್ದು ಸಂಕಷ್ಟದ ನಿವಾರಣೆಗೆ ಜುಲೈ 28ರಂದು ನಡೆಯುವ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಮಾರಸ್ವಾಮಿ ವರಾಹ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದರ
ಜೆಸಿಐನ ವಲಯ ಎಕ್ಸ್ವಿ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವು ವಿಟ್ಲದಲ್ಲಿ ನಡೆದಿದ್ದು,ಜೇಸಿಐ ಕುಂದಾಪುರ ಸಿಟಿ ಘಟಕವು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಗೆ ಭಾಜನವಾಗಿದೆ. ಮಾತ್ರವಲ್ಲದೆ ಸುಮಾರು ಒಂದೂವರೆ ಲಕ್ಷದಷ್ಟು ದೇಣಿಗೆಯನ್ನು ಜೇಸಿಐ ಇಂಡಿಯಾ ಫೌಂಡೇಶನ್ ಗೆ ನೀಡುವುದರ ಮೂಲಕ,ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಲಯದಲ್ಲೇ ಟಾಪ್ ಒನ್ ಘಟಕವಾಗಿ ಮೂಡಿಬಂದಿದೆ. ಈ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ
ಬೈಂದೂರು: ಬೈಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಬಸ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. ಕಾರು ಕುಂದಾಪುರದಿಂದ ಭಟ್ಕಳ ಕಡೆಗೆ ಸಾಗುತ್ತಿತ್ತು. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿ.ಎಸ್.ಐ ಪವನ್
ತುಳುನಾಡಿನ ಐತಿಹಾಸಿಕ ಹಿನ್ನೆಲೆಯಿರುವ 26 ನೇ ವರ್ಷದ ಸುಪ್ರಸಿದ್ಧ ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಕಂಬಳವು ಭಾನುವಾರ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನೆರವೇರಿತು.ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಸಾಂಪ್ರದಾಯಿಕ ಕಂಬಳೊತ್ಸವವನ್ನು ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರು ಗುತ್ತು ಪ್ರಫುಲ್ಲ ಶೆಟ್ಟಿಯವರು ಉದ್ಘಾಟಿಸಿದರು. ಬೆಳಿಗ್ಗೆ ಸಾಂಪ್ರದಾಯಿಕವಾಗಿ ನಡೆದ ಬಂಟ ಕೋಲದ ಬಳಿಕ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಯಿನಾಥ ಶೇಟ್ ಅವರನ್ನು ದೈವಜ್ಞ ಬ್ರಾಹ್ಮಣ ಸಮಾಜ ಕುಂದಾಪುರ ವತಿಯಿಂದ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಸ್ವಾತಿ ಜಿ ಶೇಟ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾತ್ವಿಕ್ ಕೋಟೇಶ್ವರ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜ್ಯುವೆಲ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಸತೀಶ್ ಶೇಟ್ ನಾಡ, ಅನುಗ್ರಹ
ಕುಂದಾಪುರ: ಅಕ್ರಮವಾಗಿ ಗಾಂಜಾ ಹೊಂದಿದ್ದ ವ್ಯಕ್ತಿಯೋರ್ವನನ್ನು ಕುಂದಾಪುರ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರವಾರ ಬಿಣಗಾ ನಿವಾಸಿ ಜಾಫರ್ ಗುಡುಮಿಯಾ (28) ಬಂಧಿತ ಆರೋಪಿ. ಆರೋಪಿಯಿಂದ ಸುಮಾರು 4೦,೦೦೦ ರೂ ಮೌಲ್ಯದ ೧ಕೆಜಿ 810 ಗ್ರಾಂ ತೂಕದ ಗಾಂಜಾ, 1೦,೦೦೦ ಮೌಲ್ಯದ 1ಗ್ರಾಂ ತೂಕದ ಬ್ರೌನ್ ಶುಗರ್, 2 ಮೊಬೈಲ್ 1,5೦೦ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರು ಸಿಬ್ಬಂದಿಗಳೊಂದಿಗೆ