Home Archive by category Ujjire

ಸುಬ್ರಹ್ಮಣ್ಯ : ಚಲನಚಿತ್ರ ನಟ ಪ್ರಭುದೇವ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

ಚಲನಚಿತ್ರರಂಗದ ಖ್ಯಾತ ನಟ ಪ್ರಭುದೇವ ಕುಟುಂಬ ಸಮೇತ ಇಂದು ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಳದಲ್ಲಿ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು. ಪ್ರಭುದೇವ್ ಪತ್ನಿ ಹಾಗೂ ಕುಟುಂಬ ವರ್ಗದವರು ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಶ್ರೀ ದೇವರ ಮುಖ್ಯ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ತದನಂತರ ದೇವಳದ ಕಚೇರಿಯಲ್ಲಿ

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ

ಬೆಳ್ತಂಗಡಿ: ಕೆ. ವಸಂತ ಬಂಗೇರರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಂತಾಪ

ಬೆಳ್ತಂಗಡಿ: ಗ್ರಾಮೀಣ ಪರಿಸರದ ಓರ್ವ ವ್ಯಕ್ತಿ ಸ್ವಪ್ರಯತ್ನದಿಂದ, ಸಾಮಾಜಿಕ ಸೇವೆಯಿಂದ ಜನ ಸಂಘಟನೆಯಿಂದ ಜನಪ್ರಿಯರಾಗಿ, ರಾಜಕೀಯದ ಗಣ್ಯ ವ್ಯಕ್ತಿಯಾಗಿದ್ದ ಮಾಜಿ ಶಾಸಕ ವಸಂತ ಬಂಗೇರ ಅವರ ನಿಧನ ತೀವ್ರ ದುಃಖ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಕಂಬನಿ ಮಿಡಿದಿದ್ದಾರೆ.ಜನನಿಷ್ಠ ರಾಜಕಾರಣಿ, ಸ್ನೇಹ ಜೀವಿ, ಸಮರ್ಥ ಕೆಲಸಗಾರ, ಹೋರಾಟಗಾರ, ಶಿಕ್ಷಣ ಪ್ರೇಮಿ, ದೂರದೃಷ್ಟಿಯ ರಾಜಕಾರಣಿಯಾಗಿದ್ದ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಐದು

ಬೆಳ್ತಂಗಡಿ: ಕೆ. ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ಸಂತಾಪ

ಬೆಳ್ತಂಗಡಿ: ಹಿರಿಯ ರಾಜಕಾರಣಿ ಮಾಜಿ ಶಾಸಕ ಶ್ರೀ ಕೆ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ಮೂರು ರಾಜಕೀಯ ಪಕ್ಷಗಳಡಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದ ಜಿಲ್ಲೆಯ ಏಕೈಕ ರಾಜಕಾರಣಿ ವಸಂತ ಬಂಗೇರರಾಗಿದ್ದು, ಪಕ್ಷಾತೀತವಾಗಿ ಜನತೆ ಅವರನ್ನು ಬೆಂಬಲಿಸಿದುದರ ನಿದರ್ಶನವಾಗಿದೆ. ಪ್ರಜಾಪ್ರಭುತ್ವಕ್ಕೆ ಕರಾಳವಾಗಿ ಜಾರಿಯಾಗಿದ್ದ ತುರ್ತುಪರಿಸ್ಥಿತಿ ವಿರುದ್ಧ ವಸಂತ ಬಂಗೇರರ ಹೋರಾಟ,

ಗುಡ್ಡೆ ಹೋಟೆಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಹೆಮ್ಮುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗಾಗಿ ನೆರವು

ಬೈಂದೂರು ತಾಲೂಕುಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು. ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಎಸ್.ಎಮ್. ಡಿ .ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಜನತೆ ತಮ್ಮ

ಪತ್ರಿಕೋದ್ಯಮಕ್ಕೆ ವೃತ್ತಿ ಒಲವು ಮುಖ್ಯ

ಉಜಿರೆ ಎಸ್.ಡಿ. ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಥಮ ವರ್ಷದ ಎಂ.ಸಿ.ಜೆ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ಕ್ರೈಂ ರಿಪೋರ್ಟರ್ ಸುನಿಲ್ ಧರ್ಮಸ್ಥಳ ವೃತ್ತಿ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪೋಲಿಸ್ ಸ್ತರಗಳು ಮತ್ತು ಅದರೊಳಗಿನ ವಿಭಾಗಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಸುದ್ದಿಗಾರ ರಾಗ ಬಯಸುವವರು ಹೇಗೆ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ

ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕೆಸರುಡೊಂಜಿ ದಿನ ನೇಜಿ ನಡುವ ಸಂಭ್ರಮ.

ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕೆಸರುಡೊಂಜಿ ದಿನ ನೇಜಿ ನಡುವ ಸಂಭ್ರಮ ಮನೆಮಾತಾಗಿತ್ತು.ಮಕ್ಕಳಿಗೆ ಹಳ್ಳಿಯ ವಾತಾವರಣ ಕಲ್ಪಿಸಿಕೊಡಲಾಗಿತ್ತು.ಶಾಲಾ ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ರತ್ನಮಾನಸ ಇಲ್ಲಿನ ಮೇಲ್ವಿಚಾರಕರಾಗಿರುವ ಶ್ರೀ. ಯತೀಶ್ ಬಳಂಜ ಮಾತನಾಡುತ್ತಾ,ಪ್ರಕೃತಿಯ ವಿಸ್ಮಯ,ಅದರಿಂದಾಗುವ ಪ್ರಯೋಜನ,ಅದನ್ನು ಉಳಿಸುವ ಪ್ರಯತ್ನ ವಿದ್ಯಾರ್ಥಿಗಳು

‘ಪಾಡ್‍ಕಾಸ್ಟ್’ – ಮಾಹಿತಿ ತಂತ್ರಜ್ಞಾನದ ಹೊಸ ಆಯಾಮ

ಪಾಡ್‍ಕಾಸ್ಟ್ ಮಾಧ್ಯಮ ವೇದಿಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ವ್ಯವಸ್ಥೆಯಾಗಿ ಹೊರಹೊಮ್ಮುತ್ತಿದ್ದು, ಮಾಹಿತಿ ತಂತ್ರಜ್ಞಾನಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ ಎಂದು ಹಿರಿಯ ಪತ್ರಕರ್ತ ಶರತ್ ಹೆಗ್ಡೆ ಕಡ್ತಲ ಹೇಳಿದರು. ಇಲ್ಲಿನ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ಧ್ವನಿ ಮಾಧ್ಯಮ – ಅಂಗೈಯಲ್ಲಿ ಅವಕಾಶ’ ಮತ್ತು ‘ಅರವಿನ ಅರಮನೆ ಪಾಡ್‍ಕಾಸ್ಟ್ ಉದ್ಘಾಟನೆ’ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ

ಉಜಿರೆಯಲ್ಲಿ ವಾಹನ ತಪಾಸಣೆ ವೇಳೆ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ

ಬೆಳ್ತಂಗಡಿ ಸಂಚಾರಿ ಪೊಲೀಸರ ಅವಾಂತರದಿಂದಾಗಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕಾರಿಗೆ ಢಿಕ್ಕಿಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ಸಂಚಾರ ಠಾಣಾ ವ್ಯಾಪ್ತಿಯ ಉಜಿರೆಯ ಸಿದ್ದವನ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಏಕಾ ಏಕಿ ವಾಹನಗಳನ್ನು ತಪಾಸಣೆ ಮಾಡಲು ನಿಲ್ಲಿಸಿದ್ದರಿಂದ ಸ್ಕೂಟರ್ ಹಠಾತ್ತನೆ ಬ್ರೇಕ್ ಹಾಕಿದಾಗ ಮಳೆಯಿಂದಾಗಿ ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ