ಸಾಮಾನ್ಯ ಜನರ ಕನಸುಗಳಿಗೆ ರೂಪ ಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಡ್ರೀಮ್ ಡೀಲ್ ಗ್ರೂಪ್ ದೇಶದಾದ್ಯಂತ ತನ್ನ ವಿಸ್ತರಣೆಯನ್ನು ಮುಂದುವರೆಸಿದೆ. *ಕೇವಲ ತಿಂಗಳಿಗೆ 1,೦೦೦ ರೂಪಾಯಿ ಮಾತ್ರ ಉಳಿತಾಯ ಮಾಡಿ* ಲಕ್ಷಾಂತರ ರೂಪಾಯಿ ಬೆಲೆಯ ಮನೆ, ಕಾರು, ವಿದೇಶಿ ಪಯಣ, ಚಿನ್ನದ ಆಭರಣಗಳನ್ನು ಗೆಲ್ಲುವ ಅವಕಾಶವನ್ನು ನೀಡಿದೆ. ೨೦ ಕಂತುಗಳಲ್ಲಿ ಭಾಗವಹಿಸುವ ಅವಕಾಶವಿದೆ. ಪ್ರತಿ
ಮಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಎಕ್ಕೂರು, ತೋಚಿಲ ಕಟ್ಟಪುಣಿ, ರಾಷ್ಟ್ರೀಯ ಹೆದ್ದಾರಿ ಬಳಿಯ ವೈದ್ಯನಾಥ ನಗರ, ಜಪ್ಪಿನಮೊಗರುವಿನ ಗಣೇಶ ನಗರ, ರಾಜಕಾಲುವೆ ಸೇರುವ ನೇತ್ರಾವತಿ ತೀರದ ಕಡೇಕಾರು ಪ್ರದೇಶ, ಮೊದಲಾದ ಪ್ರದೇಶಗಳ, ನೆರೆ ಪರಿಸ್ಥಿತಿಗೆ
ಸುಳ್ಯ: ಸುಳ್ಯದ ಅಡ್ಕಾರ್‌ನಲ್ಲಿ ಡಸ್ಟರ್ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ. ಕಾರು ಕೇರಳ ರಾಜ್ಯದ ನೋಂದಣಿ ಹೊಂದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬಂಟ್ವಾಳದ ಬೆಂಜನಪದವಿನಲ್ಲಿ ಕಲ್ಲು ತೆಗೆದು ನಿರ್ಮಾಣಗೊಂಡ ನೀರು ನಿಂತ ಹಳ್ಳವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಬೆಂಜನಪದವು ನಿವಾಸಿ ಸಾಗರ್(28) ಮೃತಪಟ್ಟ ಯುವಕ. ಶನಿವಾರದಿಂದ ಸಾಗರ್ ನಾಪತ್ತೆಯಾಗಿದ್ದರು. ಮನೆಮಂದಿ ಹುಡುಕಾಟ ನಡೆಸಿದ್ದರು. ಆದರೆ ಆತ ಎಲ್ಲೂ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಸಾಗರ್ ಮೃತದೇಹ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು * ಕರ್ನಾಟಕ ರಾಜ್ಯ ಪೊಲೀಸ್ ವಿಶೇಷ ಕಾರ್ಯಪಡೆ ಘಟಕದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಕರ್ನಾಟಕ ಸರಕಾರದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಗೆ ಆಗಮಿಸಿದ್ದು , ಈ ಸಂದರ್ಭದಲ್ಲಿ ಸಚಿವರಿಬ್ಬರು ಎಸ್ ಸಿಡಿಸಿಸಿ ಬ್ಯಾಂಕಿನ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸ್
ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಮತ್ತು ನಿಂತಿಕಲ್ಲು ವಲಯದ ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕದ ಸುಮಾರು 30 ಮಂದಿ ಸ್ವಯಂಸೇವಕರಿಂದ ಶ್ರಮದಾನದ ಸೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ವಲಯದಲ್ಲಿ ಮಹಾವಿಷ್ಣುಮೂರ್ತಿ ಸಂಘದ ಹಿರಿಯ ಸದಸ್ಯರು ಕಳೆದ 4 ವರ್ಷದಿಂದ ಶೌರ್ಯ ಮತ್ತು ವಿಪತ್ತು ಘಟಕದ ಸಕ್ರಿಯ ಸದಸ್ಯರಾದ ಮಠತಡ್ಕದ ಶ್ರೀ ಶೇಷಪ್ಪ ನಾಯ್ಕ ರವರ ಮನೆಗೆ ದಿನಾಂಕ 10/6/25 ರಂದು ವಿಪರೀತ ಮಳೆಯಿಂದ ಮನೆಯ
ಮಂಗಳೂರು ಕಥೋಲಿಕ್ ಕೋ ಅಪರೇಟಿವ್ (ಎಮ್.ಸಿ.ಸಿ.) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 14.06.2025ರಂದು ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಧರ್ಮ ಪ್ರಾಂತ್ಯದ ರೊಸಾರಿಯೊ ಕಾಥೆದ್ರಾಲ್ ಚರ್ಚಿನ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯ ಡಿಸೋಜ
ಪುತ್ತೂರು: ತುಂಬು ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ಚಿಕ್ಕಪುತ್ತೂರಿನಲ್ಲಿ ಜೂ. 15ರ ರಾತ್ರಿ ವರದಿಯಾಗಿದೆ. ಸುರತ್ಕಲ್ ಮೂಲದ ರೇಷ್ಮಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೂ. 15ರ ರಾತ್ರಿ ಮನೆಯಲ್ಲಿ ರೇಷ್ಮಾ
ಚಾಲಕನ ನಿಯಂತ್ರಣ ತಪ್ಪಿ ಕಾರೋಂದು ಪಲ್ಟಿಯಾಗಿ ಸರ್ವೀಸ್ ರಸ್ತೆಯಿಂದ ಪಕ್ಕದ ಕಮರಿಗೆ ಉರುಳಿದ ಘಟನೆ ಸುರತ್ಕಲ್ ಎನ್‌ಐಟಿಕೆ ಬಳಿ ನಡೆದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಪ್ರಯಾಣಿಕರಿಲ್ಲದ ಕಾರಣ ಬಹುದೊಡ್ಡ ದುರಂತ ತಪ್ಪಿ ಹೋಗಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕಾರು ಪಲ್ಟಿಯಾದ ರಭಸಕ್ಕೆ ನಜ್ಜುಗುಜ್ಜಾಗಿದೆ. ಓವರ್ ಸ್ಪೀಡ್ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಭಾರತ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ‘ಅಗ್ನಿಪಥ್ ‘ ಯೋಜನೆಯಡಿಯಲ್ಲಿ ಪ್ರತಿ ವರ್ಷ ಅಗ್ನಿವೀರರಾಗಿ ಆಯ್ಕೆ ಮಾಡಲು ನಡೆಸಲಾಗುವ ನೇಮಕಾತಿ, ಲಿಖಿತ ಮತ್ತು ದೈಹಿಕ ಸಾಧ್ಯತೆಯ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ದಿನಾಂಕ 18/06/2025 ಬುಧವಾರದಿಂದ ಆಹೋರಾತ್ರಿ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ. ತರಬೇತಿಯು ಮೂರು ವಿಭಾಗದಲ್ಲಿ