Home Archive by category KARKALA

ಕಾರ್ಕಳ : ಹೆರಿಗೆಯ ಸಮಯ ಮಗು ಮೃತಪಟ್ಟ ಪ್ರಕರಣ : ವೈದ್ಯರ ನಿರ್ಲಕ್ಷ ಆರೋಪ

ಬಡ ರೋಗಿಗಳಿಗೆ ಅನುಕೂಲವಾಗಲೆಂದು ಸುಮಾರು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿ ಬಂದಿದೆ. ತುಂಬು ಗರ್ಭಿಣಿಯೊಬ್ಬರು ಸರಕಾರಿ ಆಸ್ಪತ್ರೆಗೆ ಬಂದರು ಸಕಾಲದಲ್ಲಿ ವೈದ್ಯರ ನೆರವು ಸಿಗದೆ ಮಂಗಳೂರಿನಲ್ಲಿ ಮೃತಪಟ್ಟಿದ್ದು ಇದಕ್ಕೆ ಕಾರ್ಕಳ ವೈದ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ಕರ್ತವ್ಯ

ಕಾರ್ಕಳ : ಮೇಣದ ಬತ್ತಿ ತಯಾರಿಕಾ ಘಟಕ ಬೆಂಕಿಗಾಹುತಿ

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆ ಎಂಬಲ್ಲಿನ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಿಂದ ಮೇಣದ ಬತ್ತಿ ತಯಾರಿಕಾ ಘಟಕ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಸುಮಾರು 25 ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಅತ್ತೂರು ಚರ್ಚಿಗೆ ಸೇರಿದ್ದ ಪರ್ಪಲೆ ಗುಡ್ಡದಲ್ಲಿರುವ ಮೇಣದ ಬತ್ತಿ ತಯಾರಿಕಾ ಘಟಕದ ಇಡೀ ಕಟ್ಟಡ, ಯಂತ್ರೋಪಕರಣಗಳು ಹಾಗೂ ಮೇಣದ ಬತ್ತಿ ತಯಾರಿಕೆಗೆ ದಾಸ್ತಾನು

ಕಾರ್ಕಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಬಡಿದು ಪ್ರಯಾಣಿಕರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಬಡಿದು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನೀರೆ ಗುಡ್ಡೆಯಂಗಡಿ ಬಳಿಯಲ್ಲಿ ಮಂಗಳವಾರ ನಡೆದಿದೆ. ಪ್ರಯಾಣಿಕರು ಪುತ್ತೂರು ಮೂಲದವರೆಂದು ತಿಳಿದು ಬಂದಿದೆ.ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಕಳದಲ್ಲಿ ನಡೆದ ಪಂಜಿನ ಪೊಲೀಸ್ ಕವಾಯತು

ಕಾರ್ಕಳ: ರಾಜ್ಯದ ಪ್ರಮುಖ ನಗರವಾದ ಮೈಸೂರು ಹಾಗೂ ಬೆಂಗಳೂರಿಗೆ ಸೀಮಿತವಾಗಿದ್ದ ಪೊಲೀಸ್ ಕವಾಯತು ಕಾರ್ಕಳದಲ್ಲಿ ನಡೆಯುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು . ಅವರು ಸ್ವರಾಜ್ ಮೈದಾನದಲ್ಲಿ ನಡೆದ ವಿಶ್ವವಿಖ್ಯಾತ ಬೈಲೂರಿನ ಪರಶುರಾಮ ಧಿಂ ಪಾರ್ಕ್ ಲೋಕಾರ್ಪಣೆಗೆ ಪ್ರಯುಕ್ತ ಪೊಲೀಸ್ ಇಲಾಖೆ ಶ್ರೀ ಭುವನೇಂದ್ರ ಕಾಲೇಜು ಇವರ ಸಹಯೋಗದಲ್ಲಿ ನಡೆದ ಆಕರ್ಷಕ ಪಂಜಿನ ಕವಾಯತು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಸಾಂಸ್ಕೃತಿಕತೆ ಜನತೆಗೆ ಎಲ್ಲ ಆಯಾಮಗಳಲ್ಲಿನ

ಕಾರ್ಕಳ : ಪರಶುರಾಮ ದೌಡು ಮಹಾ ಮ್ಯಾರಥಾನ್‍ಗೆ ಚಾಲನೆ

ಪರಶುರಾಮ ಅಸಾಧ್ಯ ಎನಿಸಿದ್ದನ್ನು ಸಾಧಿಸಿದ ತ್ರಿಲೋತ್ತಮ. ಆತನ ಸಂದೇಶ ಸಮಾಜ ವಿರೋಧಿ ಕೃತ್ಯ ಮಾಡುವವರಿಗೆ ಪಾಠ. ಯುವ ಸಮೂಹ ಸಮಾಜದ ಕೆಡುಕುಗಳ ವಿರುದ್ಧ ದನಿಯತ್ತಲು ಪರುಶುರಾಮ ಧ್ಯೇಯ ಅನುಕರಣೆಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ದೇಶಭಕ್ತ ಯುವ ಸಂಘಟನೆ ಉಡುಪಿಯ ಟೀ ನ್ಯಾಷನಲ್ ಟ್ರಸ್ಟ್ ಇದರ ನೇತೃತ್ವದಲ್ಲಿ ಸ್ಥಳೀಯ ಶಿಕ್ಷಣ ಹಾಗೂ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಕಾರ್ಕಳದಲ್ಲಿ ನಡೆದ ಪರಶುರಾಮ ದೌಡು ಮಹಾ ಮ್ಯಾರಥಾನ್‍ಗೆ ಸಾರ್ವಜನಿಕ ಬಸ್

ತಿರುಪತಿಯ ಖ್ಯಾತಿಯ ವೆಂಕಟರಮಣ ದೇವಸ್ಥಾನ :ಲಕ್ಷದೀಪೋತ್ಸವ ಸಮಾಪನ

ಕಾರ್ಕಳ ತಿರುಪತಿ ಖ್ಯಾತಿಯ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ದೀಪುತ್ಸವ ನಡೆದು ಮಂಗಳವಾರ ಉತ್ಸವ ಭಕ್ತಿ ಭಾವಗಳಿಂದ ನಡೆದು ಲಕ್ಷ ದೀಪೋತ್ಸವ ಸಮಾಪನ ಗೊಂಡಿತು. ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ವೆಂಕಟರಮಣ ಮತ್ತು ಶ್ರೀನಿವಾಸ್ ದೇವರುಗಳನ್ನು ವಜ್ರತಟ್ಟೆಯಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಜಲಾವಗಹನಕ್ಕೆ ರಾಮಸಮುದ್ರಕ್ಕೆ ಕುಂಡಯ್ಯಲಾಯಿತು. ಅವಭೃಧೂತೃವಕೆ ತೆರಳುವ ಮುನ್ನ ರಸ್ತೆ

ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ

ಕಾರ್ಕಳ: ಕಾಂಗ್ರೆಸ್‍ನ ಕುಟಿಲ ರಾಜಕೀಯದ ಪರಮಾವಧಿಯೆ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳೆ ಹಿಂದೂ ಶಬ್ದದ ಅವಹೇಳನಕಾರಿ ಹೇಳಿಕೆ. ಕಾಂಗ್ರೆಸ್‍ನ ಹೀನ ರಾಜಕಾರಣದ ಬಗ್ಗೆ ಪ್ರತಿ ಹಿಂದೂವಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು ಹಿಂದುತ್ವ ಪ್ರತಿ ಹಿಂದೂ ಜೀವ ತ್ಯಾಗಕ್ಕೂ ಸಿದ್ಧರಿರಬೇಕಿದೆ ಎಂದು ಗೆರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮನಿರಾಜ ಶೆಟ್ಟಿ ಹೇಳಿದರು. ಬಿಜೆಪಿ ಕಾರ್ಕಳ ಇದರ ವತಿಯಿಂದ ಕಾಂಗ್ರೆಸ್ ಸತೀಶ್ ಜಾರಕಿಹೊಳಿ ವಿರುದ್ಧ ಬಸ್

ಕಾರ್ಕಳ: ಚಂದ್ರ ಗ್ರಹಣ ಭಾಗಶಃ ಗೋಚರ

ಕಾರ್ಕಳ: ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಚಂದ್ರ ಗ್ರಹಣದ ಭಾಗಶಃ ಗೋಚರವಾಯಿತು . ಚಂದ್ರಗ್ರಹಣ ಮೋಕ್ಷಕಾಲದ ಬಳಿಕ ಕಾರ್ಕಳದ ಪ್ರಮುಖ ದೇವಾಲಯಗಳಲ್ಲಿಗರ್ಭಗುಡಿ ಸ್ವಚ್ಚ ಗೊಳಿಸಿ ಪೂಜಾ ವಿಧಿವಿಧಾನಗಳು ನಡೆದವು. ಕಾರ್ಕಳ ತಾಲೂಕಿನ ಪ್ರಸಿದ್ದ ವೆಂಕಟರಮಣ ದೇವಾಲಯ , ಅನಂತ ಶಯನ ದೇವಾಲಯ, ಮುಖ್ಯಪ್ರಾಣ ದೇವಾಲಯ, ಹಿರ್ಗಾನ ಮಹಾಲಕ್ಷ್ಮಿ ದೇವಸ್ಥಾನ , ಹೆಬ್ರಿಯ ಅನಂತ ಪದ್ಮನಾಭ ದೇವಾಲಯ , ಅಜೆಕಾರು ವಿಷ್ಣುಮೂರ್ತಿ ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆದು ದೇವರಿಗೆ

ಕಾರ್ಕಳ : 18 ಸೆನ್ಸ್ ಜಾಗದಲ್ಲಿ ಅನಂತ ಕೃಷ್ಣ ಟ್ರಸ್ಟ್ ಗೋಶಾಲೆ ನಿರ್ಮಾಣ

ಕಾರ್ಕಳ ತಾಲೂಕಿನಲ್ಲಿ ಗೋಪ್ರೇಮಿ ಕುಟುಂಬವೊAದು ಇದ್ದು, ಒಂದೇ ಸೂರಿನಡಿ 116 ದನ ಕರುಗಳನ್ನು ಸಾಕಿ ಸಲುಹುತ್ತಿದ್ದಾರೆ. 18 ಸೆನ್ಸ್ ಜಾಗದಲ್ಲಿ ಅನಂತ ಕೃಷ್ಣ ಟ್ರಸ್ಟ್ ಎಂಬ ಗೋಶಾಲೆಯನ್ನು ನಿರ್ಮಿಸಿ ದನಕರುಗಳ ಪೋಷಣೆ ಮಾಡುತ್ತಿದ್ದಾರೆ. ಆದರೆ ಜಾಗದ ಕೊರತೆಯಿಂದ ದನಕರುಗಳನ್ನು ಸಾಕಲು ತೊಂದರೆ ಅನುಭವಿಸುತ್ತಿದ್ದಾರೆ. ರಾಮ, ಭೀಮ, ಸುಂದರ ಸೀತಾ, ಗೀತಾ ಎಂಬ ಹಲವಾರು ಹೆಸರುಗಳಿರುವ 116 ದನ ಕರುಗಳು ಕೇವಲ 18 ಸೆನ್ಸ್ ಜಾಗದಲ್ಲಿ ಅತಿ ಜಾಗರೂಕತೆಯಿಂದ ಸಾಕುತ್ತಿರುವ

ಕಡಂದಲೆ ಪಾಲಡ್ಕದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

ಮೂಡುಬಿದಿರೆ : ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆಯಲ್ಲಿ 400/320 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ 400 ಕೆ.ವಿ. ಬಹುಮಂಡಲ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಲಡ್ಕ ಪೂಪಾಡಿಕಲ್ಲು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಪಾಲಡ್ಕ ಗ್ರಾ.ಪಂ. ವಿಶೇಷ ಗ್ರಾಮಸಭೆಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧವಿದೆ ಎಂದು ಪಂಚಾಯತ್ ನಿರ್ಣಯ ದಾಖಲಿಸಿದೆ.