Home 2022 June

ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ : ತೀವ್ರ ನಿಗಾ ಘಟಕದಲ್ಲಿರುವ ಚಿಕಿತ್ಸೆ ಪಡೆಯುತ್ತಿರುವ ಜೀವನ್

ಕಳೆದ 16 ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಪಡುಬಿದ್ರಿಯ ಜೀವನ ಕುಮಾರ್ ಎಂಬವರು ಬಳಲುತ್ತಿದ್ದು, ವಾರಕ್ಕೆ ಎರಡು ಬಾರಿಯಂತೆ ಡಯಾಲೀಸಿಸ್ ಮಾಡುತ್ತಾ ಬರುತ್ತಿದ್ದರು. ಇದೀಗ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೆಪ್ರೋಲಾಜಿ ವಿಭಾಗದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಅಧಿಕ ವೆಚ್ಚ ತಗುಲಲಿದ್ದು, ಸಹಾಯ ಮಾಡುವ

ರಾಜಸ್ಥಾನದಲ್ಲಿ ಟೈಲರ್ ಹತ್ಯೆ ಖಂಡಿಸಿ : ಪುತ್ತೂರಿನಲ್ಲಿ ಹಿಂಜಾವೆಯಿಂದ ದೊಂದಿ ಹಿಡಿದು ಪ್ರತಿಭಟನೆ

ಪುತ್ತೂರು: ನೂಪುರ್ ಶರ್ಮಾ ಬೆಂಬಲಿಗ ರಾಜಸ್ಥಾನದ ಟೈಲರ್ ಕನ್ನಯ್ಯಾ ಲಾಲ್ ಅವರ ಹತ್ಯೆ ಯನ್ನು ಖಂಡಿಸಿ ಹಿಂದು ಜಾಗರಣ ವೇದಿಕೆಯಿಂದ ದರ್ಬೆಯಲ್ಲಿ ರಸ್ತೆಗೆ ಅಡ್ಡವಾಗಿ ಕುಳಿತು ಪ್ರತಿಭಟನೆ ನಡೆಸಿದರು. ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ , ಅಜಿತ್ ರೈ ಹೊಸಮನೆ, ಚಿನ್ಮಯ್ ಈಶ್ವರಮಂಗಲ, ನರಸಿಂಹ

ಆಲೂರಿನ ಪ.ಪಂ. ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ : ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪರದಾಟ

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಪಟ್ಟಣದ ಕೊನೆ ಪೇಟೆಯಿಂದ ಕೆಇಬಿ ಸರ್ಕಲ್ ತನಕ ರಸ್ತೆಯ ಎರಡೂ ಬದಿಗಳಲ್ಲಿ ದ್ವಿಚಕ್ರ ವಾಹನ ಹಾಗೂ 4 ಚಕ್ರದ ಲಘು ವಾಹನಗಳಿಗೆ ನಿಗದಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಸಾರ್ವಜನಿಕರು ಹಾಗೂ ಪ್ರತಿನಿತ್ಯ ವಿವಿಧ ಇಲಾಖೆಗಳಿಗೆ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ವಾಹನ ಪಾರ್ಕಿಂಗ್ ಸಮಸ್ಯೆ

ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಬೀದಿ ಬದಿಗಳಲ್ಲಿ ಮೀನು ವ್ಯಾಪಾರ ನಿಷೇಧಿಸಬೇಕು : ಪುರಸಭೆ ಅಧ್ಯಕ್ಷೆ ಸುಮಕೇಶವ್ ಹೇಳಿಕೆ

ಕಾರ್ಕಳ: ಬೀದಿ ಬದಿಗಳಲ್ಲಿ ಮೀನು ವ್ಯಾಪಾರವನ್ನು ನಿಷೇಧಿಸಬೇಕು, ಇಲ್ಲವೆ ಆಯ್ದ ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶ ಇದೆ ಎಂದು ಪುರಸಭೆ ಅಧ್ಯಕ್ಷೆ ಸುಮಕೇಶವ್ ಹೇಳಿದ್ದರೆ.ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ, ಮೀನು ಮಾರಾಟ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ ಎಂದರು. ಪ್ರತಿಮಾ ರಾಣೆ ಮಾತನಾಡಿ, ಈ ಬಗ್ಗೆ ಅನೇಕ

ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ರಾಷ್ಟೀಯ ಮಟ್ಟದ ತಾಂತ್ರಿಕ ಸಮ್ಮೇಳನ”

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ “ಸಿವಿಲ್ ಇಂಜಿನಿಯರಿಂಗ್ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಪ್ರಗತಿಗಳು” ಹಾಗೂ “ಮೆಕ್ಯಾನಿಕಲ್ ಇಂಜಿನಿಯರಿಂಗ್, ರೊಬೊಟಿಕ್ಸ್ ಮತ್ತು ಆಟೊಮೇಷನ್ ತಂತ್ರಜ್ಞಾನದಲ್ಲಿ ಇತ್ತೀಚಿನ

ಮೂಡುಬಿದರೆ: ಬಸ್ ಚಾಲಕನ ನಿರ್ಲಕ್ಷ್ಯ: ಬಸ್‍ನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ: ಅಪಾಯದಿಂದ ಪಾರು

ಮೂಡುಬಿದಿರೆ: ಬಸ್ ಚಾಲಕ ಮತ್ತು ನಿರ್ವಾಹಕ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿನಿಯೋರ್ವಳು ಬಸ್ ನಿಂದ ಕೆಳಗೆ ಜಾರಿ ಬಿದ್ದ ಘಟನೆ ನಿನ್ನೆ ಸಂಜೆ ಮೂಡುಬಿದಿರೆಯ ವಿದ್ಯಾಗಿರಿ ಬಳಿ ನಡೆದಿದೆ. ವಿದ್ಯಾರ್ಥಿನಿ ಸಂಜೆ ಕಾಲೇಜು ಬಿಟ್ಟು ಮನೆಗೆ ತೆರಳುವ ಸಂದರ್ಭ ವಿದ್ಯಾಗಿರಿಯಲ್ಲಿ ಜೀವನ್ ಟ್ರಾವೆಲ್ಸ್ ಎಂಬ ಹೆಸರಿನ ಖಾಸಗಿ ಬಸ್ಸ್ ಗೆ ಹತ್ತಿದ್ದಾಳೆ. ಈಕೆಯಲ್ಲದೆ ಇನ್ನೂ

ಮಾಡರ್ನ್ ಕಿಚನ್ ನ ಪಾಲುದಾರರಾಗಿರುವ ಅಣ್ಣಪ್ಪ ಪೈ(74) ನಿಧನ

ಖ್ಯಾತ ಸಂಸ್ಥೆ ಮಾಡರ್ನ್ ಕಿಚನ್ ಇದರ ಪಾಲುದಾರರಾಗಿರುವ ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಅಣ್ಣಪ್ಪ ಪೈ(74) ಅವರು ಬೆಂಗಳೂರಿನಲ್ಲಿ ಬುಧವಾರ ನಿಧನರಾದರು ಅವರು ಪತ್ನಿ ಇಬ್ಬರು ಪುತ್ರರಾದ ಒರೇಕಲ್ ಕಂಪನಿಯ ಅರವಿಂದ ಪೈ, ಡೆಲಿವರಿ ಲಾಜಿಸ್ಟಿಕ್ ನಿರ್ದೇಶಕ ಅಜಿತ್ ಪೈ ಹಾಗೂ ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ ಗುರುವಾರ ಮಧ್ಯಾಹ್ನ

ಕರಾವಳಿಯಲ್ಲಿ ಭಾರೀ ಮಳೆ – ರೆಡ್ ಅಲರ್ಟ್

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆಯಾಗಿದೆ. ಮಂಗಳೂರು ನಗರದ ಹಲವೆಡೆ ರಸ್ತೆಗಳಲ್ಲಿ ಕೃತಕ ನೆರೆ ಉಂಟಾಗಿದೆ. ಕೊಟ್ಟಾರದಲ್ಲಿ ರಾಷ್ಟ್ರೀಯ ಹೆದ್ದಾರಿಗೂ ನೀರು ಬಂದಿದೆ. ಕೊಟ್ಟಾರ ಪ್ರದೇಶದ ಮಾಲೆಮಾರ್, ಕೋಡಿಕಲ್ ಏರಿಯಾದಲ್ಲಿ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಹರಿದಿದ್ದು ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿದೆ. ನೀರುಮಾರ್ಗದ ಬಳಿಯ ಬದಿನಡಿ

ಮಂಗಳೂರು : ವಿಚಾರಣೆಗೆ ಹಾಜರಾದ ನಟಿ ಅನುಷ್ಕಾ ಶೆಟ್ಟಿ ಸೋದರ ಗುಣರಂಜನ್

ಕೊಲೆಗೆ ಸ್ಕೆಚ್ ಹಾಕಿದ್ದಾರೆಂದು ಸುದ್ದಿಯಾಗಿದ್ದ ಬೆಂಗಳೂರಿನ ಉದ್ಯಮಿ, ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸೋದರ ಗುಣರಂಜನ್ ಶೆಟ್ಟಿ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಕೊಲೆಗೆ ಸ್ಕೆಚ್ ವಿಚಾರದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಗೃಹ ಇಲಾಖೆಯಿಂದ ಹೊಣೆ ನೀಡಲಾಗಿದೆ.

ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯಿಂದ ದೇಶಕ್ಕೆ ಮಾರಕವಾಗಿರಲಿಲ್ಲ : ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿಕೆ

ಪುತ್ತೂರು: ದೇಶದಲ್ಲಿ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿ ಜನತೆಗೆ ಕರಾಳವಾಗಿರಲಿಲ್ಲ ಎಂದು ಕಾಂಗ್ರೇಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು.ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿರೋಧ ಪಕ್ಷವಾದ ಬಿಜೆಪಿ ದೇಶದ ಉಕ್ಕಿನ ಮಹಿಳೆ ಎಂದೇ ಕರೆಯಲ್ಪಡುವ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯನ್ನು ಕರಾಳದಿನ