Home Archive by category moodabidre

ಮೂಡುಬಿದಿರೆ : ವೃದ್ಧೆಯ ಕತ್ತಿನಿಂದ ಕರಿಮಣಿ ಸರ ಎಗರಿಸಿ ಪರಾರಿ

ದಾರಿ ಕೇಳುವ ನೆಪದಲ್ಲಿ ವೃದ್ಧೆಯೋವ೯ರ ಕುತ್ತಿಗೆಯಿಂದ 3-4 ಪವನಿನ ಕರಿಮಣಿ ಸರವನ್ನು ಎಗರಿಸಿದ ಘಟನೆ ಬೆಳುವಾಯಿ ಸಮೀಪ ಸೋಮವಾರ ನಡೆದಿದೆ.ಬೆಳುವಾಯಿ ಗ್ರಾಮದ ಕಾಯಿದೆ ಮನೆಯ ನಿವಾಸಿ ಎಪ್ಪತ್ತರ ಹರೆಯದ ಇಂದಿರಾ ಅವರು ಸೋಮವಾರದಂದು ತನ್ನ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಮುಗಿಸಿಕೊಂಡು ಬೆಳುವಾಯಿ- ಕರಿಯಣಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು.ಈ

ಮೂಡುಬಿದಿರೆ: ತಲೆಮರೆಸಿಕೊಂಡಿದ್ದ ಆರೋಪಿಯನ್ನು 26 ವಷ೯ಗಳ ನಂತರ ಬಂಧಿಸಿದ ಪೊಲೀಸರು

ಮೂಡುಬಿದಿರೆ: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಲ್ಲಮುಂಡ್ಕೂರು ಗ್ರಾಮದ ಮಾಣಿಲ ಮನೆಯ ರಿಚಾರ್ಡ್ ನೊರೊನ್ಹ ಎಂಬ ಆರೋಪಿಯನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. 1999 ರಲ್ಲಿ ಮಾಣಿಲ ಮನೆಯಲ್ಲಿ ನಡೆದ ಹಲ್ಲೆ ಹಾಗೂ ಕೊಲೆ ಬೆದರಿಕೆಗೆ ಸಂಬಂಧಿಸಿ ತೆರೆಸಾ ಸಿಕ್ವೇರಾ ಅವರು ರಿಚಾರ್ಡ್ ಸಹಿತ ನಾಲ್ಕು ಮಂದಿಯ ವಿರುದ್ಧ ಮೂಡುಬಿದಿರೆ ಠಾಣೆಗೆ ದೂರು

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಶ್ರೀರಾಮ್ ಗೆ ಬಿ. ಸಿ. ಎ. ವಿಭಾಗದಲ್ಲಿ 9ನೇ ರ್‍ಯಾಂಕ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯ ಬಿ.ಸಿ.ಎ. ವಿಭಾಗದಲ್ಲಿ ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಶ್ರೀರಾಮ್ ಇವರು 9ನೇ ರ್‍ಯಾಂಕ್ ಗಳಿಸಿರುತ್ತಾರೆ.ಇವರ ಸಾಧನೆಗೆ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಮತ್ತು ಸರ್ವ ಸದಸ್ಯರು, ಪ್ರಾಂಶುಪಾಲರು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಮೂಡುಬಿದಿರೆ: ಲಾಡಿ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿದ ಬ್ಯಾನರ್ ಗೆ ಹಾನಿ – ಇಬ್ಬರ ಬಂಧನ

ಮೂಡುಬಿದಿರೆ: ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಅಳವಡಿಸಿರುವ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಪುರಸಭಾ ಸದಸ್ಯ ಇಕ್ಬಾಲ್ ಕರೀಂ ಅವರು ಲಾಡಿ ಶ್ರೀ ಚತುಮು೯ಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಹಾಕಿರುವ ಬ್ಯಾನರ್ ನ್ನು ಹರಿದು ಹಾನಿಗೊಳಿಸಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಕರೀಂ ಅವರು ದೂರು

ಮೂಡುಬಿದಿರೆ: 25 ಗೂಡಂಗಡಿಗಳಿಂದ ಕಳವು ಗೈದ ಆರೋಪಿಗಳನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

ಮೂಡುಬಿದಿರೆ: ಕಳೆದ 3 ವರುಷಗಳಿಂದ ವಿವಿಧ ಕಡೆಗಳಲ್ಲಿರುವ 25 ಗೂಡಂಗಡಿಗಳಿಂದ ಅಂದಾಜು 3,55,000/- ಮೌಲ್ಯದ ವಸ್ತುಗಳನ್ನು ಕಳವುಗೈದಿರುವ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ನಿಡ್ಡೋಡಿಯ ನೀರುಡೆ ನಿವಾಸಿ ರೋಶನ್ ವಿಲ್ಸನ್ ಕ್ವಾಡ್ರಸ್, ಕೊಂಪದವು ನೆಲ್ಲಿ ತೀರ್ಥದ ನಿವಾಸಿ ನಿಶಾಂಕ್ ಪೂಜಾರಿ, ತೆಂಕು ಎಕ್ಕಾರು ಗ್ರಾಮದ ನಿವಾಸಿ ರೋಹಿತ್ ಮಸ್ಕರೇನಸ್ ಬಂಧಿತ ಕಳ್ಳರು. ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾಂ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ನಿಧನ

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿರುವ ಹರಿಪ್ರಸಾದ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಹೊಸಂಗಡಿ ನಿವಾಸಿಯಾಗಿರುವ ಅವರು ಹರಿಯಣ್ಣ ಎಂದೇ ಚಿರಪರಿಚಿತರಾಗಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ. ಪೆರಾಡಿ ಸೊಸೈಟಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಹಲವಾರು ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ

ಮೂಡುಬಿದಿರೆ: ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆಗೆ ನೆರವು

ಮೂಡುಬಿದಿರೆ: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ವ್ಯಕ್ತಿಯೋವ೯ರ ಚಿಕಿತ್ಸೆ ಗೆ ಪಡುಮಾನಾ೯ಡು ಅಮನ ಬೆಟ್ಟುವಿನ ಸಾಯಿ ಮಾನಾ೯ಡ್ ಸೇವಾ ಸಂಘ ಟ್ರಸ್ಟ್ (ರಿ) ನೆರವು ನೀಡಿದೆ.ಪಡುಮಾರ್ನಾಡು ಗ್ರಾಮದ ಅಬ್ದುಲ್ ಗಫೂರ್ ಎಂಬವರು ಕೆಲವು ವರುಷಗಳಿಂದ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದುಕೊಳ್ಳುತಿದ್ದರು. ಆದರೆ ಇದೀಗ ತಪಾಸಣೆ ನಡೆಸಿದ ವೈದ್ಯರು ಗಫೂರ್ ಅವರು ಕ್ಯಾನ್ಸರ್ ಗೆ ತುತ್ತಾಗಿದ್ದಾರೆಂದು ಅದು ನಾಲ್ಕನೇ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.ಗಫೂರ್

ಮೂಡುಬಿದಿರೆ:ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಮೂಡುಬಿದಿರೆ: ‘ಆಧುನಿಕ ಜಗತ್ತಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಗತ್ಯ’ ಎಂದು ಭಾರತ ಸರ್ಕಾರದ ಆಯುಷ್ ಸಚಿವಾಲಯದ ನಿರ್ದೇಶಕ ಡಾ. ರಾಘವೇಂದ್ರ ರಾವ್ ಹೇಳಿದರು.ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.ಕಳೆದ ಹಲವು ದಶಕಗಳಿಂದ ಅಸಾಂಕ್ರಾಮಿಕ ರೋಗಗಳು ಇಡೀ ಜಗತ್ತಿನಲ್ಲಿ

ಮೂಡುಬಿದಿರೆ : ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ

ಮೂಡುಬಿದಿರೆ : ‘ಸರ್ಟಿಫಿಕೆಟ್‌ಗಿಂತ ಸಂಸ್ಕಾರ ಮುಖ್ಯ. ಶಿಕ್ಷಣವು ಸಂಸ್ಕಾರಭರಿತ ಮನಸ್ಸನ್ನು ಕಟ್ಟುವ ಪ್ರಕ್ರಿಯೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದರು.ಆಳ್ವಾಸ್ ಮುಂಡ್ರೆದೆಗುತ್ತು ಕೆ ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾವಂತರಾದವರೇ

ಡಾ.ರಾಮಕೃಷ್ಣ ಶಿರೂರುಗೆ ಸ್ವಾಮಿ ವಿವೇಕಾನಂದ ರಾಷ್ಟ್ರ ಪ್ರಶಸ್ತಿ

ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಅವರು ಸ್ವಾಮಿ ವಿವೇಕಾನಂದ ರಾಷ್ಟ್ರ ಪ್ರಶಸ್ತಿ- 2025ಕ್ಕೆಆಯ್ಕೆ ಆಯ್ಕೆಯಾಗಿರುತ್ತಾರೆ ಎಂದು ಸ್ನೇಹಜೀವಿ ಫೌಂಡೇಶನ್ ಮಹಾರಾಷ್ಟ್ರಮತ್ತು ಅಕ್ಷರ ದೀಪ ಫೌಂಡೇಶನ್ ಕರ್ನಾಟಕ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಕನ್ಯಾಳ ಅವರು ತಿಳಿಸಿರುತ್ತಾರೆ.2025 ಜನವರಿ12 ರಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು