Home Posts tagged #kadaba

ಕಡಬ: ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಪರಿಶೀಲನೆ

ಕಡಬದ ಮರ್ದಾಳ ಸಮೀಪ ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಐತ್ತೂರು ಕೋಕಲಾ ಸ್ಥಳವನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ನಂತರ ತುಳಿತಕ್ಕೊಳಗಾದ ನೇಲ್ಯಡ್ಕ ನಿವಾಸಿ ಚೋಮ ರವರ ಮನೆಗೆ ಸುಳ್ಯ ಶಾಸಕಿರವರು ಭೇಟಿ ನೀಡಿದರು. ಮನೆಯಲ್ಲಿ ಚೋಮ ರವರ

ಕಡಬ : ವ್ಯಕ್ತಿಯ ಮೇಲೆ ಕಾಡಾನೆ ದಾಳಿ- ಗಂಭೀರ ಗಾಯ

ಕಡಬ: ಐತ್ತೂರು ಗ್ರಾಮದ ನೇಲ್ಯಡ್ಕ ಎಂಬಲ್ಲಿ ಕಾಡಾನೆಯೊಂದು ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿದ್ದು, ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ.ಐತ್ತೂರು ಗ್ರಾಮದ ಗೇರ್ತಿಲ ನಿವಾಸಿ ಚೋಮ ಎಂಬವರು ಮರ್ದಾಳದಿಂದ ಕೊಣಾಜೆ ಮಾರ್ಗವಾಗಿ ಮನೆ ಕಡೆಗೆ ಹೋಗುತ್ತಿದ್ದ ವೇಳೆ ಸುಳ್ಯ ಎಂಬಲ್ಲಿ ಕಾಡಾನೆ ದಾಳಿ ನಡೆಸಿದೆ.

ಕಡಬ: ಮಸೀದಿ ಆವರಣದೊಳಗೆ ಜೈಶ್ರೀರಾಮ್ ಘೋಷಣೆ ಕೂಗಿದ ಆರೋಪಿಗಳ ಬಂಧನ

ಕಡಬ: ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಒಳಗೆ ಜೈಶ್ರೀರಾಮ್ ಘೋಷಣೆ ಕೂಗಿದ ಆರೋಪಿಗಳಿಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್(25) ಹಾಗೂ ಕೈಕಂಬ ನಡ್ತೋಟ ನಿವಾಸಿ ಸಚಿನ್ (26) ಎಂದು ಗುರುತಿಸಲಾಗಿದೆ. ಆರೋಪಿಗಳು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮಸೀದಿಯ ಕಾಂಪೌಂಡ್ ಒಳಗೆ ಬೈಕಿನಲ್ಲಿ ಆಗಮಿಸಿ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎನ್ನಲಾಗಿದ್ದು, ಮಸೀದಿಯಲ್ಲಿದ್ದ ಧರ್ಮಗುರುಗಳನ್ನು ಕಂಡು

ಕಡಬ : ಬಸ್ಸಿನಿಂದ ಎಸೆಯಲ್ಪಟ್ಟು ವ್ಯಕ್ತಿ ಸಾವು

ಕಡಬ, ಸೆ. 24: ಚಲಿಸುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ಸಿನಿಂದ ವ್ಯಕ್ತಿಯೊಬ್ಬರು ಕೆಳಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಕಡಬ ಪೇಟೆಯ ಅಂಚೆ ಕಛೇರಿ ಬಳಿ ರವಿವಾರ ಸಂಜೆ ನಡೆದಿದೆ. ಕಡಬ ಸಮೀಪದ ಕಳಾರ ಕುದ್ಕೊಳಿ ನಿವಾಸಿ ಅಚ್ಚುತ ಗೌಡ (63) ಮೃತ ಪಟ್ಟವರು. ಕಡಬದಿಂದ ಮಂಗಳೂರಿನಿಂದ ತೆರಳುತ್ತಿದ್ದ ಬಸ್ಸು ಏರಿ ಮನೆಯ ಕಡೆ ಹೊರಟ ಬಸ್ಸು ಕಡಬ ಅಂಚೆ ಕಛೇರಿ ಬಳಿ ತಲುಪುತ್ತಿದ್ದoತೆಯೇ ತಿರುವಿನಲ್ಲಿ ಆಯತಪ್ಪಿ ಕೆಳಕ್ಕೆ ಎಸೆಯಲ್ಪಟ್ಟಿದ್ದಾರೆ. ಅವರೊಂದಿಗೆ ಬಲ್ಯದ ದೇರಾಜೆ

ಕಡಬ : ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಲು ಸುಳ್ಯ ಬ್ಲಾಕ್‍ನಿಂದ ಶಿಫಾರಸ್ಸು ಮಾಡಿಲ್ಲ, ಮಮತಾ ಗಟ್ಟಿ

ಸುಳ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಮೇಲೆ ಕೆಲವರನ್ನು ಉಚ್ಛಟಿಸಲಾಗಿದೆ ಎನ್ನುವ ಸುದ್ದಿ ಯಾವುದೋ ಕಾರಣಕ್ಕೆ ಹರಡಿತ್ತು. ಆದರೆ ಸುಳ್ಯ ಬ್ಲಾಕ್ ಕಾಂಗ್ರೆಸ್‍ನಿಂದ ಉಚ್ಛಾಟನೆಗೆ ಯಾವುದೇ ಶಿಫಾರಸ್ಸು ಹೋಗಿಲ್ಲ ಎಂದು ಕೆ.ಪಿ.ಸಿ.ಸಿ ಉಸ್ತುವಾರಿ ಮಮತಾ ಗಟ್ಟಿ ಸ್ಪಷ್ಟಪಡಿಸಿದರು. ಅವರು ಕಡಬ ಅನುಗ್ರಹ ಸಭಾಭವನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಕ್ಷ

ಕಡಬ: ಪಂಚಾಯತ್ ಸಂಪರ್ಕ ರಸ್ತೆ ಬಂದ್ ಮಾಡಿ ದಿಗ್ಬಂಧನ: ತಹಶೀಲ್ದಾರರಿಂದ ತೆರವು

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬದನೆ ಎಂಬಲ್ಲಿ ಪಂಚಾಯತ್ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ವೆಂಕಪ್ಪ ಪೂಜಾರಿ ಮತ್ತು ರೂಪೇಶ್ ಕುಮಾರ್ ಅವರು ಬಂದ್ ಮಾಡಿರುವ ಬಗ್ಗೆ ಇಚ್ಲಂಪಾಡಿ ಗ್ರಾಮದ ಬದನೆ ನಿವಾಸಿ ಶ್ರೀನಿವಾಸ್ ಪೂಜಾರಿಯವರು, ಪುತ್ತೂರು ಸಹಾಯಕ ಆಯುಕ್ತರು, ಕಡಬ ತಹಶೀಲ್ದಾರರು, ಗ್ರಾಮ ಪಂಚಾಯತ್ ಹಾಗೂ ಪೋಲಿಸ್ ಇಲಾಖೆಗೆ ದೂರು ನೀಡಿದ್ದಾರೆ. ಕಡಬ ತಹಶೀಲ್ದಾರರಾದ ಪ್ರಭಾಕರ ಕಜುರೆ, ಕಂದಾಯ ನಿರೀಕ್ಷಕರಾದ ಪೃಥ್ವಿರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ

ಕಡಬ ಪೇಟೆಯಲ್ಲಿ ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಿದ ಪವರ್‍ಮ್ಯಾನ್ ಪಿ.ಜೆ ಗುರುಮೂರ್ತಿ

ಕಡಬ ಪೇಟೆಯಲ್ಲಿ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವೊಂದನ್ನು ಕಡಬ ಸಿಟಿ ಫೀಡರ್ ಪವರ್‍ಮ್ಯಾನ್ ಆಗಿರುವ ಪಿ.ಜೆ ಗುರುಮೂರ್ತಿ ಅವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಡಬ ಪೇಟೆಯಲ್ಲಿ ಪಾರಿವಾಳವೊಂದರ ಕಾಲಿಗೆ ಪ್ಲಾಸ್ಟಿಕ್ ಹಗ್ಗವೊಂದು ತಗುಲಿ ನಂತರದಲ್ಲಿ ಆ ಪಾರಿವಾಳ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿತ್ತು. ತಕ್ಷಣ ಸ್ಥಳೀಯರು ಪವರ್ ಮ್ಯಾನ್ ಗಮನಕ್ಕೆ ತಂದಿದ್ದು ಪವರ್‍ಮ್ಯಾನ್ ಗುರುಮೂರ್ತಿ ತಕ್ಷಣ

ಕಡಬ: ಕಾಡು ಪ್ರಾಣಿಗಳ ಬೇಟೆ- ಮೂವರ ಬಂಧನ

ಬಲ್ಯ ರಕ್ಷಿತಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಕಡಬ ಪೋಲೀಸರು ಕುಂತೂರು ಬಳಿ ಬಂಧಿಸಿದ್ದಾರೆ. ಬಂಧಿತರನ್ನು ನೆಲ್ಯಾಡಿ ಮೂಲದ ಬಿನು, ದಿನೇಶ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಕಡಬ ಎಸ್‍ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಕುಂತೂರು ಬಳಿ ಬಂದಾಗ ಇನ್ನೋವ ಕಾರು ಅನುಮಾನಾಸ್ಪದವಾಗಿ ಚಲಾಯಿಸುತ್ತಿರುವುದು ಕಂಡು ವಾಹನ ನಿಲ್ಲಿಸಿ ತಪಾಸನೆ ಮಾಡಿದಾಗ ಕಾರಿನಲ್ಲಿ ಬೇಟೆಯಾಡಿದ ಪ್ರಾಣಿಗಳು ಕಂಡು ಬಂದಿದೆ. ಒಂದು ಮುಳ್ಳು

ಕುಕ್ಕೆ: ಇಸ್ರೋದ ಚಂದ್ರಯಾನ 3 ಯಶಸ್ಸಿಗೆ ಕುಕ್ಕೆ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಣೆ

ಸುಬ್ರಹ್ಮಣ್ಯ: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಆಡಳಿದ ಮಂಡಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಿತು. ಭಾರತದ ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿಯ ಚಂದ್ರಯಾನ 3 ನೌಕೆಯು ಚಂದ್ರನ

ಕಡಬ: ರಿಯಾದ್‌ನಲ್ಲಿ ಹ್ಯಾಕರ್‌ ಗಳ ಕುಕೃತ್ಯದಿಂದ ಜೈಲುಪಾಲಾದ ಕಡಬದ ಚಂದ್ರಶೇಖರ್‌

ಹ್ಯಾಕರ್ ಗಳ ಕೈಗೆ ಸಿಲುಕಿ ವಿದೇಶದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರೋ ಮಂಗಳೂರಿನ ವ್ಯಕ್ತಿಯನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆಗೊಳಿಸುವಂತೆ ದ‌.ಕ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ದ.ಕ ಜಿಲ್ಲೆಯ ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ದಿ.ಕೆಂಚಪ್ಪ ಗೌಡ ಮತ್ತು ಹೇಮಾವತಿ ದಂಪತಿ ಪುತ್ರ ಚಂದ್ರಶೇಖರ ಎಮ್.ಕೆ ರಿಯಾದ್ ನಲ್ಲಿರುವ ಅಲ್ಮಾನರ್ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಯಾವುದೋ ಹ್ಯಾಕರ್ ಗಳ