ಉಳ್ಳಾಲ: ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಇಲ್ಲಿನ ಬಸ್ತಿಪಡ್ಪು ಎಂಬಲ್ಲಿ ಮನೆ ಆವರಣದಲ್ಲಿದ್ದ ತೆಂಗಿನ ಮರ ಉರುಳಿಬಿದ್ದು ಮನೆಗೆ ಹಾನಿಯುಂಟಾಗಿದೆ. ಬಸ್ತಿಪಡ್ಪುವಿನಲ್ಲಿರುವ ಯು.ಪಿ ಮಲ್ಯ ರಸ್ತೆಯಲ್ಲಿರುವ ವಿಶ್ವನಾಥ್ ತೇವುಲ ಎಂಬವರಿಗೆ ಸೇರಿದ ಮನೆಗೆ ಹಾನಿಯುಂಟಾಗಿದೆ. ಬುಧವಾರ ಸಂಜೆಯಿಂದ ಭಾರೀ ಮಳೆಯಾಗಿದ್ದು, ಜೋರಾಗಿ ಬೀಸಿದ ಗಾಳಿಯಿಂದ ಆವಾಂತರ ಉಂಟಾಗಿದೆ.
ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣ ಎಂದು ಹೇಳಲಾದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ ಘಟ ನೆ ನಡೆದಿದೆ. ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುಂಬಯಿ ಧಾರಾವಿಯ ಮುರುಗಂಡಿ ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ಇಳಿಸಿದ್ದಾರೆ. ಕೋಟೆಕಾರು ಅಜ್ಜಿನಡ್ಕ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಪೊಲೀಸರು ಸ್ಥಳ ಮಹಜರು ನಡೆಸಲು ಆರೋಪಿ ಮುರುಗಂಡಿಯನ್ನು ಕೋಟೆಕಾರಿಗೆ ಕರೆದುಕೊಂಡು ಬಂದಿದ್ದರು. ಈ ವೇಳೆ
ಉಳ್ಳಾಲ: ಶಾಲಾ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ 4ರ ಹರೆಯದ ವಿದ್ಯಾಥಿನಿ ಸಾವನ್ನಪ್ಪಿರುವ ಘಟನೆ ಬೆಳ್ಮ ಗ್ರಾಮದ ಕಲ್ಲಪಾದೆ ಎಂಬಲ್ಲಿ ಇಂದು ಸಂಭವಿಸಿದೆ. ಬಡಕಬೈಲು ಮಹಮ್ಮದ್ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (4) ಮೃತ ವಿದ್ಯಾರ್ಥಿನಿ. ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ರಿಕ್ಷಾ ಕಲ್ಲಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ
ಉಳ್ಳಾಲ : ಮದನಿನಗರ ಬಳಿ ಕಂಪೌಂಡ್ ವಾಲ್ ಬಿದ್ದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಉಳ್ಳಾಲ ನಗರಸಭಗೆ ಕೌನ್ಸಿಲರ್ ಓರ್ವರು ಅಪಾಯದಂಚಿನಲ್ಲಿರುವ ಮನೆಮಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದು, ಮನವಿಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಇಂದು ಮನೆ ಮಹಡಿ ಕುಸಿದು ಮನೆಯೊಳಗಿದ್ದ ಬಾಲಕಿ ಸೇರಿದಂತೆ ತಂದೆ ಗಾಯಗೊಂಡ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಮೇಲಂಗಡಿ ಮಸೀದಿ ಸಮೀಪ ನಡೆದಿದೆ. ಮನೆಯೊಳಗಿದ್ದ ಅಬ್ಬಾಸ್ ಹಾಗೂ ಅವರ ಪುತ್ರಿ ಮನೆ ಕುಸಿತದ ಸಂದರ್ಭ
ಉಳ್ಳಾಲ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಪ್ರಾಕೃತಿಕ ವಿಕೋಪಗಳ ಕುರಿತು ತುರ್ತು ಸಭೆ ದೇರಳಕಟ್ಟೆಯ ಬಿಸಿಸಿ ಸಭಾಂಗಣದಲ್ಲಿ ನಡೆಯಿತು. ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಫರೀದ್ ಸಭೆ ಉದ್ದೇಶಿಸಿ ಮಾತನಾಡಿ, ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಎಲ್ಲಾ ಗ್ರಾಮಗಳಿಗೆ ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಬೇಕು. ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳಿಗೆ ಇರುವ ಸಮನ್ವಯ
ಉಳ್ಳಾಲ: ಉಳ್ಳಾಲ ಖಾಝಿ ಆಗಿ ಸೇವೆಯಲ್ಲಿದ್ದ ಫಝಲ್ ಕೋಯಮ್ಮ ತಂಙಳ್ (65) ಎಟ್ಟಿಕುಳದಲ್ಲಿ ಸೋಮವಾರ ವಿಧಿವಶರಾದರು.ಅವರ ತಂದೆ ಮರ್ಹೂಂ ತಾಜುಲ್ ಉಲಮಾ ಅವರು ಉಳ್ಳಾಲ ಖಾಝಿ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ಆಗಿದ್ದ ಸಂದರ್ಭದಲ್ಲಿ ಸಹಾಯಕ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2014ರಲ್ಲಿ ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ ನಿಧನ ಹೊಂದಿದ್ದು, ಇದರ ಬಳಿಕ ಫಝಲ್ ಕೋಯಮ್ಮ ತಂಙಳ್ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮಂಗಳೂರು: ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ಮನೆಯೊಂದರ ಗಾಡ್ರೆಜ್‌ನೊಳಗಿದ್ದ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ನಿವಾಸಿಗಳಾದ ಶ್ರೇಯಸ್, ತೌಸೀಫ್ ಹಾಗೂ ಉರ್ವ ನಿವಾಸಿ ಪೃಥ್ವಿರಾಜ್ ಬಂಧಿತ ಮೂವರು ಆರೋಪಿಗಳು. ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8ರಿಂದ ಜೂ.16ರ ಮಧ್ಯಾಹ್ನ 12ರ ನಡುವೆ ನಡುವೆ 15
ಉಳ್ಳಾಲ: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್ ಆಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ ( 27) ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಫಸ್ಟ್ ನ್ಯುರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಲು ಸಹಕರಿಸಿದ ಹಿತೈಷಿಗಳ,ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.ಜೂ.28 ರಂದು ಗಣೇಶ ಪಾವೂರು
ಉಳ್ಳಾಲ: ಮಂಗಳೂರು ನಗರದಲ್ಲಿರುವಂತಹ ಸೌಕರ್ಯಗಳನ್ನು ಕ್ಷೇತ್ರದ ಅತ್ಯಂತ ಹಿಂದುಳಿದ ಪ್ರದೇಶಕ್ಕೆ ಮಾಡಿಕೊಡುವುದೇ ನನ್ನ ಕಲ್ಪನೆ , ಅದರಂತೆ ಪಾವೂರು ಗ್ರಾಮದ ಚಿತ್ರಣ ಮುಂದಿನ 10 ವರ್ಷಗಳಲ್ಲೇ ಬದಲಾವಣೆಯಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಪಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಡಾರ್ ಸೈಟ್ ಹಾಗೂ ಒಂದನೇ ವಾರ್ಡಿಗೆ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.ಪೋಡಾರು ಭಾಗದಲ್ಲಿ ಹಿಂದೆ
ಉಳ್ಳಾಲದ ಮದನಿ ನಗರದಲ್ಲಿ ಕಂಪೌoಡ್ ಕುಸಿದು ನಾಲ್ವರು ಮೃತಪಟ್ಟ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆಗೆ ಸ್ಪೀಕರ್ ಖಾದರ್ ಅವರ ಜೊತೆಗಿದ್ದರು.ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಗ್ರಾ.ಪಂ ಅಧಿಕಾರಿಗಳ ಮೂಲಕ ಅಪಾಯಕಾರಿ ಪಾಯಿಂಟ್‌ಗಳನ್ನು ಸರ್ವೇ ನಡೆಸಲು ಸೂಚಿಸಲಾಗಿದೆ. ತೀವ್ರತರದಲ್ಲಿ ಅಪಾಯ ಇರುವ ಸ್ಥಳಗಳಲ್ಲಿ ತುರ್ತು ಪರಿಹಾರ ಕ್ರಮಕ್ಕೆ ಆದೇಶಿಸಲಾಗಿದೆ.