Home Posts tagged #sulya

ಕೋಲ್ಚಾರಿನಲ್ಲಿ ಕಳಪೆ ಮಟ್ಟದ ರಸ್ತೆ ಕಾಮಗಾರಿ, ಪಾದಯಾತ್ರೆ ಮೂಲಕ ಪ್ರತಿಭಟನೆ

ಆಲೆಟ್ಟಿ ಗ್ರಾಮದ ನಾರ್ಕೋಡು ಕೋಲ್ಚಾರು ಕನ್ನಡಿತೋಡು ಮೂಲಕ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಕಳೆದ 4 ವರ್ಷಗಳ ಹಿಂದೆ ಶಾಸಕ ಎಸ್.ಅಂಗಾರ ರವರು ಕೋಲ್ಚಾರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.ಅನುದಾನ ರೂ. 10.5 ಕೋಟಿ ಬಿಡುಗಡೆಗೊಂಡು ಜೆ.ಡಿ.ಸುವರ್ಣ ಎಂಬ ಗುತ್ತಿಗೆದಾರರು ಕಾಮಗಾರಿ ಕೆಲಸ

ಕಡಬದಲ್ಲಿ ಸಚಿವ ಎಸ್. ಅಂಗಾರ ಅವರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು 5.15 ಕೋಟಿ ರೂ.ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ 2.74 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.

ಸುಳ್ಯ ತಾಲೂಕು ಐವರ್ ನಾಡು ಗ್ರಾಮದ ದೇವರ ಕಾಣ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ

ಕಾರ್ಯಕ್ರಮದಲ್ಲಿ ಸಚಿವರಾದ ಎಸ್ ಅಂಗಾರ ಏ ವಿ ತೀರ್ಥರಾಮ ಬಾಲಕೃಷ್ಣ ಕೀಲಾಡಿ ನವೀನ್ ಸಾರಕೆರೆ ಮತ್ತು “”:ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನ್ ಡೆವಲಪ್ಮೆಂಟ್ ಸೊಸೈಟಿ ರಿಜಿಸ್ಟರ್ಡ್:”” ಮತ್ತು “ಶ್ರೀರಾಮ ಗೋಶಾಲೆ” ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು ಈ ಸಂಸ್ಥೆಯಿಂದ ದಿನನಿತ್ಯ ಉಚಿತ ಸಂಜೆ ಪಾಠ ಶಾಲೆ ನಡೆಸುತ್ತಿದೆ ಮತ್ತು ಈ ಸಂದರ್ಭದಲ್ಲಿ ಮಕ್ಕಳಿಗೆ 50 ಪ್ರಮಾಣ ಪತ್ರ 50

ಸುಳ್ಯ : ಲಾರಿ, ಕಾರು , ಬೈಕ್ ನಡುವೆ ಸರಣಿ ಅಪಘಾತ

ಸುಳ್ಯ ::ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ಲಾರಿ, ಕಾರು , ಬೈಕ್ ನಡುವೆ ಸರಣಿ ಅಪಘಾತವಾಗಿ ಬೈಕ್ ಸವಾರರಿಬ್ಬರು, ಹಾಗೂ ಕಾರು ಚಾಲಕ ಗಾಯಗೊಂಡು ಆಸ್ಪತ್ರೆ ಸೇರಿರುವ ಗುರುವಾರ ವರದಿಯಾಗಿದ. , ಈ ಸಂದರ್ಭದಲ್ಲಿ ಕಾರಿನ ಹಿಂದಿನಂದ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿಯಾಗಿದೆ, ಘಟನೆಯಲ್ಲಿ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು, ಪೆರಾಜೆ ಗ್ರಾಮದ ದೊಡ್ಡಡ್ಕ ದೀನರಾಜ್ ಹಾಗೂ ಕಂಜಿಪಿಲಿ ಪುರುಷೋತ್ತಮ ತೀವ್ರ ಗಾಯಗೊಂಡರೆ, ಕಾರು ..ಲಾರಿಗೆ

ಸುಳ್ಯದಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸುಳ್ಯ: ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಅವಶ್ಯಕತೆ ಇದೆ.ಮಕ್ಕಳಿಗೆ ನಾವು ಸಾಹಿತ್ಯವನ್ನು ಓದುವ ಮೂಲಕ ಸಾಹಿತ್ಯವನ್ನು ಸಾಹಿತ್ಯದ ವಿಚಾರವನ್ನು ಅವರಿಗೆ ಹೇಳಬೇಕೆಂದು ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಆರ್ ಗಂಗಾಧರ ಹೇಳಿದರು. ಅವರು ಗೂನಡ್ಕ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವಿಮರ್ಶಕ ವಿಜಯಶಂಕರ ಸಮ್ಮೇಳನವನ್ನು ಉದ್ಘಾಟಿಸಿದರು.

ಸುಳ್ಯ: ಪತ್ರಕರ್ತರ ಸಮುದಾಯ ಭವನದ ಉದ್ಘಾಟನೆ

ಅತಿಥಿ ಗೃಹ ಉದ್ಘಾಟಿಸಿದ ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ಪತ್ರಕರ್ತರು ಏನು ಬರೆಯಬೇಕು ಎಂದು ಆಲೋಚಿಸದಂತೆ ಏನು ಬರೆಯಬಾರದು ಎಂಬುದನ್ನು ತಿಳಿದಿರಬೇಕು. ಹಿರಿಯ ಪತ್ರಕರ್ತರು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕಿದೆ ಎಂದರು. ಜಿಲ್ಲಾ ಕೇಂದ್ರದ ವ್ಯವಸ್ಥೆ: ಸುಳ್ಯ ಕ್ಷೇತ್ರ ಈಗಾಗಲೇ ಹಲವಾರು ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ಮುಂದಕ್ಕೆ ಸುಳ್ಯಕ್ಕೆ ಜಿಲ್ಲಾ ಕೇಂದ್ರದ ಅವಶ್ಯಕತೆಯನ್ನು ನಾವು ಮಾಡಿಯೇ ಮಾಡುತ್ತೇವೆ. ನನ್ನದು

ಪೆರುವಾಜೆ : ಗ್ರಾಮವಾಸ್ತವ್ಯ ಕಾರ್ಯಕ್ರಮ

ಸುಳ್ಯ ತಾಲೂಕು ಆಡಳಿತ ವತಿಯಿಂದ ಮತ್ತು ಸುಳ್ಯ ತಾಲೂಕು ವಿವಿಧ ಇಲಾಖಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಪೆರುವಾಜೆಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮ ವಾಸ್ತವ್ಯದ ಅಧ್ಯಕ್ಷತೆಯನ್ನು ಜಗನಾಥ ಪೂಜಾರಿ ವಹಿಸಿದ್ದರು. ತಹಸೀಲ್ದಾರ್ ರಾದ ಶ್ರೀ. ಅನಿತಲಕ್ಷ್ಮಿ ದೀಪಬೆಳಗಿಸುವ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಿದ್ದರು . ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಇಒ ಭಾವನಿಶಂಕರ್ ಕೇತ್ರ ಶಿಕ್ಷಣಧಿಕಾರಿ ಮಹದೇವ್ ತಾಲೂಕು ಹೆಲ್ತ್ ಆಫೀಸರ್ ನಂದಕುಮಾರ್,

ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಚಾಲಕ ಕುಸಿದು ಬಿದ್ದು ಗಂಭೀರ

ಸುಳ್ಯ: ಆಟೋ ಚಾಲಕರೊಬ್ಬರು ಇದ್ದಕಿದ್ದಂತೆ ಪಾಶ್ರ್ವವಾಯುಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ನಗರದಲ್ಲಿ ನಡೆದಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಹೇಮನಾಥ್ ಆರ್.ಬಿ.(32) ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ಚಾಲಕ. ಇವರು ಸುಳ್ಯ ತಾಲೂಕಿನ ದೊಡ್ಡಡ್ಕದ ರಾಜರಾಂಪುರದ ನಿವಾಸಿಯಾಗಿದ್ದಾರೆ. ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಸಂಪಾಜೆಯಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ತಮ್ಮ ಆಟೋದಲ್ಲಿ ಕರೆದುಕೊಂಡು

ಕೊಲ್ಲಮೊಗ್ರದಲ್ಲಿ ಮದ್ಯಮುಕ್ತ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಕೊಲ್ಲಮೊಗ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಅಕ್ರಮ ಮದ್ಯದಂಗಡಿ ತೆರೆದಿರುವ ಬಗ್ಗೆ ಪ್ರತಿಭಟನಾ ಸಭೆಯು ಕೊಲ್ಲಮೊಗ್ರದ ಮಯೂರ ಕಲಾ ಮಂದಿರದಲ್ಲಿ ನಡೆಯಿತು. ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ

ಸುಳ್ಯ:ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯು ಇಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನಂದ ಕುಮಾರ್, ಸುಳ್ಯ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕರುಣಾಕರ, ಆರೋಗ್ಯ ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಶ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುನಿಲ್