Home Posts tagged #moodabidre

ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಪ್ರಹ್ಲಾದ ಮೂರ್ತಿ ಆಯ್ಕೆ

ಮೂಡುಬಿದಿರೆ: ಗಣರಾಜ್ಯೋತ್ಸವ ಹಾಗೂ ಪ್ರಧಾನಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಮೂಡುಬಿದಿರೆಯ ಹತ್ತನೇ ತರಗತಿ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಕಡಂದಲೆ ಆಯ್ಕೆಯಾಗಿದ್ದಾರೆ.ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬಳಿಕ ಜನವರಿ 27ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ

ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತನ್ನಿ
ಮೂಡುಬಿದರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿಕೆ

ಮೂಡುಬಿದಿರೆ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅಭಿವೃದ್ಧಿಯ ನೆಪದಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ.ಇದನ್ನೆಲ್ಲಾ ಹೋಗಲಾಡಿಸಿ ಭ್ರಷ್ಟಚಾರ ಮುಕ್ತ ಮೂಡುಬಿದಿರೆಯನ್ನಾಗಿ ರೂಪುಗೊಳಿಸಲು ಕಾಂಗ್ರೆಸ್ ನ ಎಂಎಲ್ ಎ ಬರಬೇಕು ಎಂದು ಮಾಜಿ ಸಚಿವ, ಕೆಪಿಸಿಸಿಯ ರಾಜ್ಯ ಉಪಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಬಲಾಢ್ಯ ನಾಯಕರುಗಳು ಜನವರಿ 22 ರಂದು ಮಂಗಳೂರಿಗೆ

ಮದುವೆ ನಿಶ್ಚಯವಾಗಿದ್ದ ಯುವಕ ಆತ್ಮಹತ್ಯೆ

ಮೂಡುಬಿದಿರೆ: ಮದುವೆ ನಿಶ್ಚಯವಾಗಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಇರುವೈಲಿನಲ್ಲಿ ನಡೆದಿದೆ.ಇರುವೈಲು ಗುಂಡಾಲ ಮನೆಯ ಸದಾನಂದ ಶೆಟ್ಟಿ ಅವರ ಪುತ್ರ ಪ್ರತಾಪ್ ಶೆಟ್ಟಿ( 30)ಆತ್ಮಹತ್ಯೆ ಮಾಡಿಕೊಂಡ ಯುವಕ. ಕೃಷಿಕನಾಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಜ.22ರಂದು ಮದುವೆ ನಿಶ್ಚಯವಾಗಿತ್ತು. ಸಾಧು ಸ್ವಭಾವದ ಯುವಕನಾಗಿದ್ದ ಈತನಿಗೆ ಆರ್ಥಿಕವಾಗಿ ತೊಂದರೆ ಇರಲಿಲ್ಲ.ಆದರೆ ವಿಡಿಯೋ

ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ – ಬೊಮ್ಮಯಿ

ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ 20 ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಬ್ಬಯಿ ಯವರು ಭಾಗವಹಿಸಿ ಸುಶಾಸನ ದಿನಾಚರಣೆಯ ಅಂಗವಾಗಿ ವಾಜಿಪೇಯಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು. ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುವ ಕಂಬಳವು ಕ್ರೀಡೆ ಮಾತ್ರ ಅಲ್ಲ ಅದು

ನೈಸರ್ಗಿಕ ಕ್ರಿಸ್ಮಸ್ ನಕ್ಷತ್ರ ತಯಾರಿಕೆಗೆ ದಶಮಾನೋತ್ಸವ ಸಂಭ್ರಮ

ಮೂಡುಬಿದಿರೆ: ಸಾಸಿವೆ, ಕೊತ್ತಂಬರಿ, ಹುರುಳಿ, ರಾಗಿ ಸೇರಿದಂತೆ ಹಸಿ ಮತ್ತು ಒಣ ಅಡಿಕೆಯಿಂದ ವಿಶಿಷ್ಟ ತಿರುಗುವ ಕ್ರಿಸ್ಮಸ್ ನಕ್ಷತ್ರವನ್ನು ಶಿರ್ತಾಡಿಯ ಲೈಫ್ ಸೇವಾ ಸಂಸ್ಥೆಯವರು ನಿರ್ಮಿಸಿದ್ದಾರೆ. ನಕ್ಷತ್ರವನ್ನು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ನ ಆವರಣದಲ್ಲಿ ಕ್ರಿಸ್ಮಸ್ ಪ್ರಯುಕ್ತ ಡಿ.23 ರಿಂದ ಜ.5 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ನಕ್ಷತ್ರವು 120 ಕೆಜಿ ತೂಕ, 12 ಅಡಿ ಎತ್ತರ, 11 ಅಡಿ ಅಗಲವಿದ್ದು, ನಕ್ಷತ್ರದ ಮಧ್ಯಭಾಗದಲ್ಲಿ

ಮೂಡುಬಿದರೆಯಲ್ಲಿ ಎಳ್ಳಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ

ಮೂಡುಬಿದಿರೆ: ಎಳ್ಳಮವಾಸ್ಯೆಯ ಪ್ರಯುಕ್ತ ಹನ್ನೆರಡು ಕವಲಿನಲ್ಲಿ ಸಾವಿರಾರು ಭಕ್ತರು ತೀರ್ಥಸ್ಥಾನ ಮಾಡಿದರು. ಮೂಡುಬಿದಿರೆಯಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ತಾಕೊಡೆಯ ಬಳಿಯ ಹನ್ನೆರಡು ಕವಲಿನಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ನಂತರ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಹಣ್ಣುಕಾಯಿ ಮಾಡಿ, ಪೂಜೆ ಸಲ್ಲಿಸಿ ತದ ನಂತರ ನದಿಯ ನಡುವಿನಲ್ಲಿರುವ ಪಂಚ ಮಹಾಲಿಂಗೇಶ್ವರ ದೇವಾಲಯಕ್ಕೆ ಪೂಜೆಗೈದು ನದಿಯಲ್ಲಿ ದಾನ ಬಿಟ್ಟು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಈ

ಇಂದು ಹೋಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ

ಮೂಡುಬಿದಿರೆ : ಮಹಿಷಮರ್ಧಿನಿ ಕಂಬಳ ಸಮಿತಿ ಇದರ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಹೋಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು. ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳವನ್ನು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಕಂಬಳದ ಕರೆಯಲ್ಲಿ ದೀಪ ಬೆಳಗಿಸಿ, ತೆಂಗಿನ ಕಾಯಿ ಹೊಡೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆಧುನಿಕ ಕಾಲದಲ್ಲಿರುವ ನಾವು ಈ

ಆಳ್ವಾಸ್‍ ಜಾಂಬೂರಿ ಉತ್ಸವ : ಗದಗದಿಂದ 2 ಲಕ್ಷ ಜೋಳದ ರೊಟ್ಟಿ ಹೊರೆಕಾಣಿಕೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯೋಜನೆಯಲ್ಲಿ ಡಿ.21ರಿಂದ ನಡೆಯುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಗದಗ ಜಿಲ್ಲೆಯಿಂದ 2 ಲಕ್ಷ ಜೋಳದ ರೊಟ್ಟಿಯನ್ನು ಕಳುಹಿಸಲಾಗಿದೆ.ಉತ್ತರ ಕರ್ನಾಟಕದ ಗಟ್ಟಿ ಆಹಾರ ಎನಿಸಿಕೊಂಡಿರುವ ಜೋಳದ ರೊಟ್ಟಿ, ಶೇಂಗಾ ಚಟ್ನಿಯನ್ನು ಉಣಬಡಿಸುವ ನಿಟ್ಟಿನಲ್ಲಿ 2 ಲಕ್ಷ ಮಾಲದಂಡಿ ಜೋಳದ ರೊಟ್ಟಿಗಳನ್ನು ಕಳುಹಿಸಲಾಗುತ್ತಿರುವದು ಎಲ್ಲರ ಗಮನ ಸೆಳೆದಿದೆ. ಗದಗದಿಂದ 2 ಲಕ್ಷ ರೊಟ್ಟಿ, 2 ಕ್ವಿಂಟಲ್ ಶೇಂಗಾ ಚಟ್ನಿಯನ್ನು

ಆಟೋ- ಬೈಕ್ ಢಿಕ್ಕಿ ಆಟೋ ಚಾಲಕ ಸಾವು

ಮೂಡುಬಿದಿರೆ: ಬುಧವಾರ ರಾತ್ರಿ ಕಾರ್ಕಳದ ಕರಿಯ ಕಲ್ಲು ಎಂಬಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ಡಿಕ್ಕಿಯಾಗಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಆಟೋ ಚಾಲಕ ಅಂದೇ ರಾತ್ರಿ ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಮೂಡುಬಿದಿರೆ ತಾಲೂಕಿನ ಬೆಳುವಾಯಿಯ ಕುಕ್ಕುಡೇಲು ನಿವಾಸಿ ವಿಜಯ ಶೆಟ್ಟಿ (57 ವರ್ಷ )ಸಾವನ್ನಪ್ಪಿದ ವ್ಯಕ್ತಿ.ವಿಜಯ ಶೆಟ್ಟಿಯವರು ತನ್ನ ಆಟೋ ರಿಕ್ಷಾದಲ್ಲಿ ಬಜಗೋಳಿಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮಗುವಿನ ನಾಮಕರಣ

ಡಿ. 24,25 ರಂದು ಶೂನ್ಯ ತ್ಯಾಜ್ಯ ಪರಿಕಲ್ಪನೆಯಡಿಯಲ್ಲಿ ಕೋಟಿ-ಚೆನ್ನಯ ಕಂಬಳ

ಮೂಡುಬಿದಿರೆ ಡಿ. 24,25ರಂದು ನಡೆಯುವ ಕೋಟಿ-ಚೆನ್ನಯ ಕಂಬಳದಲ್ಲಿ ಏಕ ಬಳಕೆಯ ವಸ್ತುಗಳನ್ನು ಬಳಸದ ಮರುಬಳಕೆಯ ವಸ್ತುಗಳನ್ನು ಬಳಸುವ ಮೂಲಕ ಶೂನ್ಯ ತ್ಯಾಜ್ಯದ ಕಂಬಳವನ್ನಾಗಿ ಆಯೋಜಿಸಿ ಮಾದರಿಯಾಗುವಂತೆ ಮಾಡಲು ತಾವು ಸಂಪೂರ್ಣವಾಗಿ ಬೆಂಬಲವನ್ನು ನೀಡುತ್ತೇವೆಂದು ವ್ಯಾಪಾರಸ್ಥರ ಪರವಾಗಿ ಭರತ್ ಅವರು ಭರವಸೆಯನ್ನು ನೀಡಿದ್ದಾರೆ. ಒಂಟಿಕಟ್ಟೆಯ ರಾಣಿ ಅಬ್ಬಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ ಹೊನಲು ಬೆಳಕಿನ ಕಂಬಳವನ್ನು ಶೂನ್ಯ ತ್ಯಾಜ್ಯ ಮಾಡುವ ನಿಟ್ಟಿನಲ್ಲಿ ಕಂಬಳ