Home 2023 August

ಮಂಗಳೂರು: ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಸಾಮೂಹಿಕ ಸಮುದ್ರ ಪೂಜೆ

ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ನಡೆಯಿತು.ಪ್ರತೀ ಗ್ರಾಮದಿಂದ ಸಂಗ್ರಹಿಸಿದ ಹಾಲು, ತೆಂಗಿನಕಾಯಿಗಳನ್ನು ಶ್ರೀ ಬ್ರಹ್ಮ ಬೊಬ್ಬರ್ಯ ದೈವಸ್ಥಾನದಲ್ಲಿರಿಸಿ, ಪ್ರಾರ್ಥನೆ ಸಲ್ಲಿಸಿ ನಂತರ ಭಜನೆಯೊಂದಿಗೆ ಕಡಲ ಕಿನಾರೆಗೆ ಆಗಮಿಸಿ ಗಂಗಾ ಮಾತೆಗೆ ಸಮರ್ಪಣೆ ಮಾಡಲಾಯಿತು. ಮುಂದಿನ ಮೀನುಗಾರಿಕೆಯ

ಸುಳ್ಯ: ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ, ಮೂವರು ಮೃತ್ಯು

ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಸುಳ್ಯದ ಅಡ್ಕಾರಿನಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರಾದ ಚಂದ್ರಪ್ಪ ರೇಗಪ್ಪ, ಮಾಂತೇಶ್ ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಹುಣಸೂರು ಕಡೆಯಿಂದ ಬಂದ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ರಸ್ತೆ ಬದಿ ನಿಂತಿದ್ದ

ಬೆಳ್ತಂಗಡಿ: ಕಬಡ್ಡಿ ಆಟಗಾರ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಪುದುವೆಟ್ಟು ಎಂಬಲ್ಲಿ ನಡೆದಿದೆ.ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24 ) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಸ್ವರಾಜ್ ಪ್ರಸುತ್ತ ಧರ್ಮಸ್ಥಳದಲ್ಲಿ ವಾಸವಾಗಿದ್ದು, ಇಂದು ಪುದುವೆಟ್ಟುವಿನಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ

ಉಪ್ಪಿನಂಗಡಿ : ಶಿರಾಡಿ ರಕ್ಷಿತಾರಣ್ಯದಲ್ಲಿ ಮರಗಳ ಮಾರಣ ಹೋಮ..!!!

ನೆಲ್ಯಾಡಿ: ಪಶ್ಚಿಮ ಘಟ್ಟದ ತಪ್ಪಲುನಲ್ಲಿರುವ ಉಪ್ಪಿನಂಗಡಿ ವಲಯ ವ್ಯಾಪ್ತಿಯಲ್ಲಿ ಬರುವ ಶಿರಾಡಿ, ಶಿಬಾಜೆ ಮೊದಲಾದ ಪ್ರದೇಶದಲ್ಲಿರುವ ರಕ್ಷಿತಾರಣ್ಯದಲ್ಲಿ ರಾಜಾರೋಷವಾಗಿ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದ್ದು, ಉತ್ತಮ ಜಾತಿಯ ಬೃಹತ್ ಮರಗಳ ಮಾರಣ ಹೋಮ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿದೆ. ಶಿರಾಡಿ ರಕ್ಷಿತಾರಣ್ಯದ ಶಿಬಾಜೆ ಸೆಕ್ಷನ್

ಸುರತ್ಕಲ್‍ || ಕಾಂಪೌಂಡ್ ಕುಸಿದು ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಕಾಂಪೌಂಡ್ ಕುಸಿದು ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ಕೃಷ್ಣಾಪುರದ ಕೆಇಬಿ ಬಳಿ ನಡೆದಿದೆ. ಬಜ್ಪೆ ಕರಂಬಾರು ನಿವಾಸಿ ಹನೀಫ್ ಮೃತಪಟ್ಟ ವ್ಯಕ್ತಿಯಾಗಿದ್ದು, ಮಣಿ ಎಂಬವರು ಗಾಯಗೊಂಡಿದ್ದಾರೆ. ಕೃಷ್ಣಾಪುರ ನಿವಾಸಿ ಶರೀಫ್ ಎಂಬವರು ರಸ್ತೆ ಬದಿ ಚರಂಡಿ ನಿರ್ಮಾಣದ ಗುತ್ತಿಗೆ ಪಡೆದುಕೊಂಡು ಕೆಲಸ

ಪುಂಜಾಲಕಟ್ಟೆ: ಹೃದಯಾಘಾತದಿಂದ ಯುವತಿ ಸಾವು

ಯುವತಿಯೋರ್ವಳು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆಯ ಮಧ್ವಗುತ್ತು ಎಂಬಲ್ಲಿ ಸಂಭವಿಸಿದೆ. ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ-ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (19) ಮೃತಪಟ್ಟವರಾಗಿದ್ದಾರೆ. ಮೂಲತ: ಕಾವಳಮೂಡೂರು ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದು, ಪ್ರಸ್ತುತ

ಮೂಡುಬಿದಿರೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ: ಬೆಳುವಾಯಿ ಬರಕಲ ಗುತ್ತು ಮನೆಯ ರಾಮಣ್ಣ ಎಂಬವರ ಪುತ್ರ ಸಂತೋಷ್ ಪೂಜಾರಿ (42) ತಮ್ಮ ಪಕ್ಕದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಗೆ ಆಧಾರ ಸ್ತಂಭವಾಗಿದ್ದ ಸಂತೋಷ್ ಅವರು ಮೂಡುಬಿದಿರೆಯಲ್ಲಿ ಎಲೆಕ್ಟ್ರೋ ವಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಪತ್ನಿ ಮತ್ತು ಸಣ್ಣ ವಯಸ್ಸಿನ ಇಬ್ಬರು ಅವಳಿ

ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿಯಿಂದ ಸ್ಪೀಕರ್ ಯುಟಿ ಖಾದರ್‍ಗೆ ಸನ್ಮಾನ

ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿ ದೇರಳಕಟ್ಟೆ ಆಶ್ರಯದಲ್ಲಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವು ದೇರಳಕಟ್ಟೆ ಸಿಟಿ ಗ್ರೌಂಡ್‍ನಲ್ಲಿ ನಡೆಯಿತು. ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಶಾಂತರಾಂ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಒಬ್ಬ ಶಾಸಕನಾಗಿ, ಮಂತ್ರಿ ಆಗಿ ಜನರ ಒಳಿತಿಗಾಗಿ ಏನನ್ನು ಮಾಡಲು ಸಾಧ್ಯ ಎಂಬುದು ಖಾದರ್ ಅವರ ಮೂಲಕ

ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ವಿ.ಎಮ್.ಎಸ್ ಆ್ಯಪ್ ಅಳವಡಿಕೆ : ಸ್ಪೀಕರ್ ಯು.ಟಿ. ಖಾದರ್ ಅವರಿಂದ ಉದ್ಘಾಟನೆ

ತಲಪಾಡಿಯಲ್ಲಿರುವ ಸೂರಜ್ ಕಾಲೇಜು ಮತ್ತು ಜ್ಞಾನ ದೀಪ ಶಾಲೆ ಮುಡಿಪು ವತಿಯಿಂದ ಶಾಲೆಯಲ್ಲಿ ಮಕ್ಕಳ ಚಲನವಲನಗಳ ನಿಗಾವಹಿಸುವ ವಿ.ಎಮ್.ಎಸ್ ಆ್ಯಪ್ ಅಳವಡಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್ ಅವರು ವಿ.ಎಮ್.ಎಸ್ ಆ್ಯಪ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಜುನಾಥ್ ರೇವಣ್ಕರ್ ಅವರು ಸೂರಜ್ ಸಿಕ್ಷಣ ಸಂಸ್ಥೆಯ ಮೂಲಕ ಗ್ರಾಮೀಣ

ಬೆಳ್ತಂಗಡಿ: ಮೇಲಂತಬೆಟ್ಟು ಬೈಕ್ ಮುಖಾಮುಖಿ ಢಿಕ್ಕಿ: ನಾಲ್ವರು ಗಂಭೀರ..!

ಬೆಳ್ತಂಗಡಿ: ಮೇಲಂತಬೆಟ್ಟು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ಬೈಕ್‍ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಬೆಳ್ತಂಗಡಿ ಪೇಟೆಯಿಂದ ಸವಣಾಲು ಕಡೆಗೆ ತೆರಳುತಿದ್ದ ಬೈಕ್ ಹಾಗೂ ಸವಣಾಲು ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್‍ಗಳ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಒಂದು ಬೈಕ್‍ನಲ್ಲಿದ್ದ 2.5