Home 2021 August (Page 33)

ಟೋಕಿಯೋ ಒಲಿಂಪಿಕ್ಸ್: ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್‍ಗೆ ಕಂಚಿನ ಪದಕ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ವೆಲ್ಟರ್ ವೇಟ್ (69ಕೆಜಿ)ವಿಭಾಗದ ಸೆಮಿ ಫೈನಲ್ ನಲ್ಲಿ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೋಲನುಭವಿಸಿದರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಬುಧವಾರ ಟೋಕಿಯೊ ಒಲಿಂಪಿಕ್ಸ್ ನ ವನಿತೆಯರ 69 ಕೆಜಿ ವಿಭಾಗದಲ್ಲಿ ಬಾಕ್ಸರ್ ಲವ್ಲಿನಾ ಅವರು ತಮ್ಮ ಎದುರಾಳಿ ವಿಶ್ವಚಾಂಪಿಯನ್ ಟರ್ಕಿಯ ಬುಸೆನಾ ಸುರ್ಮೆನೆಲಿ

ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಎನ್‌ಐಎ ದಾಳಿ : ಐಸಿಸ್ ಸಂಪರ್ಕ ಶಂಕೆ

ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಇಂದು ನಸುಕಿನಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳು ಮನೆಗೆ ಬಂದು ತನಿಖೆ ಆರಂಭಿಸಿದ್ದಾರೆ. ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿದೆ. ಎನ್‌ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ

ಇಂದಿನ ನಿಮ್ಮ ರಾಶಿ ಭವಿಷ್ಯ

ಶ್ರೀ ಕ್ಷೇತ್ರ ಇಡಗುಂಜಿ ಮಹಾಗಣಪತಿ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ ಜೀವನ ಎಂದ ಮೇಲೆ ಖುಷಿ, ಸಂಕಟ, ಲಾಭ-ನಷ್ಟ ಇವೆಲ್ಲಾ ನಾಣ್ಯದ ಎರಡು ಮುಖಗಳಿದ್ದಂತೆ. ಅನೇಕ ಸವಾಲುಗಳು ಬರುತ್ತವೆ, ಅದನ್ನು ಮೆಟ್ಟಿ ನಿಂದಾಗ ಖುಷಿ, ಅದೃಷ್ಟಿ ಹಿಂಬಾಲಿಸುತ್ತದೆ. ಈ ವಾರ ನಿಮ್ಮ ಜೀವನ ಖುಷಿಯಿಂದ ಇರಲಿ ಎಂಬುವುದೇ ನಮ್ಮ ಆಶಯ.

ಗಡಿಭಾಗಕ್ಕೆ ಹೊಂದಿಕೊಂಡಿರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ಕಟ್ಟುನಿಟ್ಟಿನ ನಿರ್ಬಂಧಗಳ ನಂತರವು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಆಗಿರುವ ಹಿನ್ನಲೆಯಲ್ಲಿ ಅದರ ಕಣ್ಗಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ

ಭಾಷಾ ಬಾಂಧವ್ಯದಿಂದ ಸೌಹಾರ್ದತೆ ಸಾಧ್ಯ – ಡಾ. ತಮಿಳ್ ಸೆಲ್ವಿ

ನಾವು ನಮ್ಮದಲ್ಲದ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡರೆ ಆ ಭಾಷೆ ಬಗ್ಗೆ ಅರಿವು ಹೆಚ್ಚಾಗಿ ಸೌಹಾರ್ದತೆ ಸಾಧ್ಯವಾಗುತ್ತದೆ. ತಮಿಳು-ಕನ್ನಡದ ದೃಷ್ಟಿಯಿಂದ ಇದು ಅತೀ ಮುಖ್ಯ. ಇದರಿಂದ ರಾಜ್ಯಗಳ ನಡುವಿನ ಹಲವು ಸಮಸ್ಯೆಗಳು ಪರಿಹಾರ ಕಾಣಬಹುದು ಎಂದು ಖ್ಯಾತ ಭಾಷಾ ವಿದ್ವಾಂಸರು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ತಮಿಳ್

ರಾಜಧರ್ಮದ ಕುರಿತು ಭಾಷಣ ಮಾಡಿದ್ರೆ ಸಾಲದು, ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು: ಮಾಜಿ ಸಚಿವ ರಮಾನಾಥ ರೈ

ಬಂಟ್ವಾಳ: ಬಿಪಿಎಲ್ ಕಾರ್ಡ್ ರದ್ದುಮಾಡುವುದು, ಅದನ್ನು ಪುನರ್ ವಿಮರ್ಶೆ ಮಾಡಿ ಕೊಡಿಸುತ್ತೇವೆ ಎನ್ನುವುದು ಆಡಳಿತ ಪಕ್ಷದ ಪ್ರಚಾರದ ತಂತ್ರ ಎಂದು ಮಾಜಿ ಸಚಿವ ಬಿ. ರಮನಾಥ ರೈ ಆರೋಪಿಸಿದ್ದಾರೆ. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ರಾಜಧರ್ಮದ ಕುರಿತು ಕೇವಲ ಭಾಷಣ ಮಾಡಿದರೆ ಸಾಲದು ಅದನ್ನು ಅನುಷ್ಟಾನಕ್ಕೆ ತರಬೇಕು

ಕೂಡಲೇ ಬಿಸಿಯೂಟ ನೌಕರರ ಬಾಕಿ ವೇತನ ನೀಡಬೇಕು: ಮಾಲಿನಿ ಮೇಸ್ತಾ

ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಿಸಿಯೂಟ ನೌಕರರ ಸಮ್ಮೇಳನವು ಜರಗಿತು. ಸಮ್ಮೇಳನವನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾರವರು ಉದ್ಘಾಟಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ರಂಗಕ್ಕೆ ಆದ್ಯತೆ ನೀಡುತ್ತಿಲ್ಲ. ಖಾಸಗೀಕರಣವೇ ಸರ್ಕಾರದ ವೇದ ವಾಕ್ಯ ವಾಗಿದೆ. ಸರಕಾರದ ಕೋರೋನಾ ಲಾಕ್ ಡೌನ್

ನಾಪತ್ತೆಯಾಗಿದ್ದ ಲೆಕ್ಕಪರಿಶೋಧಕ ಬಾವಿಯಲ್ಲಿ ಶವವಾಗಿ ಪತ್ತೆ

ಉಡುಪಿ: ಕೆಲವು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ, ಲೆಕ್ಕಪರಿಶೋಧಕನ ಶವವು, ಮನೆಯ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಅಗ್ನಿಶಾಮಕ ದಳದ ಸಹಾಯದಿಂದ ಕಳೇಬರವನ್ನು ಮೇಲೆತ್ತಲಾಗಿದೆ. ವ್ಯಕ್ತಿ ಮೃತಪಟ್ಟು ಒಂದು ವಾರ ಕಳೆದಿರಬಹುದೆಂದು ಹೇಳಲಾಗುತ್ತಿದೆ. ಕಳೇಬರವನ್ನು ವೈದ್ಯಕೀಯ ಪರೀಕ್ಷೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು

ದಾಖಲೆಯತ್ತ ದಾಪುಗಾಲಿಟ್ಟ ಚೊಚ್ಚಲ ‘ಬಿಲ್ಲವಾಸ್ ಕತಾರ್ ಪ್ರತಿಭಾ ಸಪ್ತಾಹ 2021’

ಬಿಲ್ಲವಾಸ್ ಕತಾರ್ ಪ್ರತಿಭಾ ಸಪ್ತಾಹ-2021 ಎಂಬ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಆಯೋಜಿಸಿದ್ದು, ವಿಶ್ವದ ಎಲ್ಲಾ ಬಿಲ್ಲವ ಪ್ರತಿಭೆಗಳು ಅರಳುವಂತೆ ಮಾಡಿದೆ ಬಿಲ್ಲವಾಸ್ ಕತ್ತಾರ್. ಕೋವಿಡ್‌ನ ಈ ವಿಷಮ ಸ್ಥಿತಿಯಲ್ಲಿ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯಲ್ಲಿ ಬಿಲ್ಲವಾಸ್ ಕತಾರ್‌ನವರು ಕಲ್ಪಿಸಿಕೊಟ್ಟಿದ್ದಾರೆ. ಅಂತರ ಕಾಪಾಡಿ, ಅಂತರ್ಮುಖಿಯಾಗಿ, ದುಗುಡ ದುಮ್ಮಾನಗಳ

ವಿಟ್ಲದ ಕೊಡಂಗೆ ಚೆಕ್‌ಪೋಸ್ಟ್‌ಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ: ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ವಿಟ್ಲ: ಕೇರಳದಲ್ಲಿ ಕೋವಿಡ್ ಪ್ರಕರಣ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೇರಳ- ಕರ್ನಾಟಕ ಗಡಿ ಪ್ರದೇಶವಾಗಿರುವ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ಗೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಕಾನೂನು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿಯವರು ಕಟ್ಟು ನಿಟ್ಟಿನ