ಕೇಂದ್ರ ಸರ್ಕಾರವು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ ( ಎಸ್.ಟಿ ) ಮೀಸಲಾತಿಗೆ ಸೇರ್ಪಡೆಗೋಳಿಸಿದೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಎಸ್ .ಟಿ ಪ್ರಮಾಣ ಪತ್ರ ಕೊಡುತ್ತಿವೆ ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ಮೀಸಲಾತಿಯಿಂದ ದೂರವಿಟ್ಟು ತಳವಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಇದರಿಂದ ಶೈಕ್ಷಣಿಕ ಮತ್ತು ಸರ್ಕಾರಗಳ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ.
Month: September 2021
ಮಂಗಳೂರು ನಗರ ಪೊಲೀಸ್ ಕಮೀಷನರ್ ರೇಟ್ ವ್ಯಾಪ್ತಿಯ ಶ್ವಾನಪಡೆಗೆ ಬೆಂಗಳೂರಲ್ಲಿ ತರಬೇತಿ ಮುಗಿಸಿದ ರಾಣಿ ಬಂದಿದ್ದಾಳೆ. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಅವರು ರಾಣಿಯ ಹ್ಯಾಂಡ್ಲರ್‍ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ರು. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಶ್ವಾನದಳದಲ್ಲಿ ಇದುವರೆಗೆ ಒಂದು ಸ್ನಿಫರ್
ದೇಶದಲ್ಲಿ ಉಗ್ರರ ವಿಧ್ವಂಸಕ ಕೃತ್ಯ ಸಾಧ್ಯತೆ ಬೆನ್ನಲ್ಲೇ ಮಂಗಳೂರು ಏರ್ ಪೋರ್ಟ್ ಸುತ್ತಮುತ್ತ ಅಲರ್ಟ್ ಮಾಡಲಾಗಿದೆ. ಏರ್‍ಪೋರ್ಟ್ ಭದ್ರತೆಯ ಸಿಐಎಸ್‍ಎಫ್ ಹಾಗೂ ಬಜ್ಪೆ ಪೊಲೀಸರಿಂದ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನು ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ಮಾಹಿತಿ ನೀಡಲು ಅಧಿಕಾರಿಗಳು ಸ್ಥಳೀಯರಿಗೆ
ಪುತ್ತೂರು: 9 ತಿಂಗಳ ಹಿಂದೆ 2021 ರ ಜನವರಿ 3 ರಂದು ಪುತ್ತೂರಿನ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ 7 ಮಂದಿ ದಾರುಣ ಮೃತಪಟ್ಟಿದ್ದರು. ಇವರಿಗೆ ಈಗ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಮೃತಪಟ್ಟಿರುವ
ಕಾರ್ಕಳ: ವಿಸ್ತೃತ ಬಸ್ ನಿಲ್ದಾಣ ಹಾಗೂ ಬಂಡೀಮಠ ಬಸ್ ನಿಲ್ದಾಣಗಳೆರಡನ್ನು ಸಮಾನವಾಗಿ ಸದ್ಭಾವಕೆ ಮಾಡುವಂತೆ ರಾಜ್ಯ ಹೈಕೋರ್ಟ್ ಅದೇಶ ನೀಡಿ ವರ್ಷಗಳೆ ಕಳೆದು ಹೋಗಿದೆ. ಹೈಕೋರ್ಟ್ ಅದೇಶಕ್ಕೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಗೌರವಿಸಿಲ್ಲ. ಈ ಕುರಿತು ಅರ್ಜಿದಾರರು ಮತ್ತೇ ನ್ಯಾಯಾಲಯಕ್ಕೆ ಮೋರೆ ಹೋದರೆ ಪುರಸಭಾ ಸದಸ್ಯರು ಸಹಿತ ಅಧಿಕಾರಿಗಳು ಕಾನೂನಿನ ಕುಣಿಕೆಯಲ್ಲಿ
ಉಡುಪಿ ಮಂಗಳೂರು ಗಡಿಭಾಗ ಹೆಜಮಾಡಿ ಗ್ರಾಮಸಭೆಯಲ್ಲಿ ಶಾಂಭವಿ ಹೊಳೆಯಲ್ಲಿ ರಾಜರೋಷವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಮಟ್ಕಾದಂಧೆಯ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸಿದ್ದು, ಸಭೆಯಲ್ಲಿದ್ದ ಅಧಿಕಾರಿಗಳಲ್ಲಿ ತಕ್ಷಣವೇ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಮಾಜಿ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ವಾಮನ್
ಸತತ ಐದು ವರ್ಷದಿಂದ ಕೆ.ಹೊಸಕೋಟೆಯ ಪಶುಸಂಗೋಪನ ಆಸ್ಪತ್ರೆಯು ವೈದ್ಯರನ್ನೇ ನೋಡದ ಹೋಬಳಿ ಆಸ್ಪತ್ರೆ……ರೈತರ ಗೋಳು ಕೇಳುವವರು ಯಾರು? ಆಲೂರು :ಆಲೂರು ತಾಲೂಕು ಕೆ. ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲಿ ಒಂದು ಪಶು ಸಂಗೋಪನ ಆಸ್ಪತ್ರೆ ಕೆಲವು ವರ್ಷಗಳ ಹಿಂದೆಯೇ ನಿರ್ಮಾಣ ವಾಗಿದೆ.ಆದರೆ ಇದರ ಪರಿಸ್ಥಿತಿಯನ್ನು ನೋಡುವುದಾದರೆ ಈ
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಹಳ್ನಾಡು ಎಂಬಲ್ಲಿ ವಾಸವಾಗಿರುವ ಕಾರ್ತಿಕ್ (20) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೆ ಇತ್ತ ತಂದೆ ಮಾನಸಿಕ ಅಸ್ವಸ್ಥರು. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ತಲೆಯ ಮೇಲೆ ಹಾಕಿಕೊಂಡು, ತನ್ನ ವಿದ್ಯಾಭ್ಯಾಸವನ್ನೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಾರ್ತಿಕ್.
ಆಗ್ನೇಯ ಆಸ್ಟ್ರೇಲಿಯಾದಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ಕಟ್ಟಡಗಳು ಅಲುಗಾಡಿದ್ದು, ಗೋಡೆಗಳು ಉರುಳಿ ಬಿದ್ದವು ಹಾಗೂ ಗಾಬರಿಗೊಂಡ ನಿವಾಸಿಗಳು ಮೆಲ್ಬೋರ್ನ್‌ನ ರಸ್ತೆಗಳತ್ತ ಓಡಿದ್ದಾರೆ. ದೇಶದ ಎರಡನೇ ಅತ್ಯಂತ ದೊಡ್ಡ ನಗರ ಮೆಲ್ಬೋರ್ನ್ ಪೂರ್ವಕ್ಕೆ ಸ್ಥಳೀಯ ಸಮಯ 9.15 ಗಂಟೆ ಸಂದರ್ಭದಲ್ಲಿ ಭೂ ಕಂಪನ ಸಂಭವಿಸಿದೆ. ಅಮೆರಿಕದ ಜಿಯಾಲಾಜಿಕಲ್
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಸೆ.27ರಂದು ಭಾರತ್ ಬಂದ್‍ಗೆ ರೈತ ಸಂಘಟನೆಗಳು ಕರೆ ನೀಡಿದ್ದು, ಬಂಟ್ವಾಳದ ಬಿ.ಸಿ. ರೋಡ್‍ನ ಮಿನಿ ವಿಧಾನಸೌಧದರಿಂದ ಕಾಲ್ನಡಿಗೆಯಲ್ಲಿ ಹೊರಟು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬೃಹತ್ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ



















