Home 2021 September (Page 23)

ಹರೇಕಳದಲ್ಲಿ DYFI ಯುವಜನರ ಗ್ರಾಮ ಸಮಾವೇಶ

ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ ಹರೇಕಳ ಗ್ರಾಮದಲ್ಲಿ ಯುವಜರ ಸಮಾವೇಶ ನಡೆಯಿತು. ಸಮಾವೇಶದ ಉಧ್ಘಾಟನೆಯನ್ನು ಮಾಡಿ ಮಾತನಾಡಿದ ಮಾಜಿ DYFI ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಯುವಜನತೆಯನ್ನ ಗಂಭೀರವಾಗಿ ಕಾಡುತ್ತಿರುವ ನಿರದ್ಯೋಗ ಸಮಸ್ಯೆಯ

ಮಂಗಳೂರಲ್ಲಿ ಹಾಡುಹಗಲೇ ಮಹಿಳೆಯ ಸರಕಳ್ಳತನ: ವೀಡಿಯೋ ವೈರಲ್

 ಮಂಗಳೂರಿನ ಶಿವಭಾಗ್ ಬಳಿಯ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆಗಂತುಕರು ಆಕೆಯ ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾದ ಘಟನೆ ನಡೆದಿದೆ. ರಿಟ್ಸ್ ಕಾರಿನಲ್ಲಿ ಬಂದ ಮೂವರು ನಗರದ ಆಗ್ನೆಸ್ ಕಾಲೇಜಿನ ಎದುರುಗಡೆಯಿಂದ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಕುತ್ತಿಗೆಯಿಂದ

ಕಕ್ಕುಂದೂರಿನಲ್ಲಿರುವ ಕ್ರೈಸ್ತ ಪ್ರಾರ್ಥನಾಲಯಕ್ಕೆ ಹಿಂದೂ ಸಂಘಟನೆಯಿಂದ ದಾಳಿ

ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನ ಕಕ್ಕುಂದೂರು ಗ್ರಾಮದಲ್ಲಿರುವ ಪ್ರಗತಿ ಕ್ರೈಸ್ತ ಪ್ರಾರ್ಥನಾಲಯದಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ, ಬಿಜೆಪಿ ಬೆಂಬಲಿತ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾರ್ಥನೆಯ ಸಮಯದಲ್ಲಿ ಸುಮಾರು 25 ಜನರು ಬಂದು ಹಲ್ಲೆ

ಉದನೆಯಲ್ಲಿ ಗಣಪತಿ ಕಟ್ಟೆ ಧ್ವಂಸ ಪ್ರಕರಣ: ಆರೋಪಿಯ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಉದನೆ ಎಂಬಲ್ಲಿರುವ ಗಣೇಶ ಕಟ್ಟೆಗೆ ಕಲ್ಲು ಎತ್ತಿ ಹಾಕಿ ಹಾನಿಗೊಳಿಸಿರುವ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರದ ಬಾಗಲ್ ಪುರ ಜಿಲ್ಲೆಯ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ನಿವಾಸಿ ರವೀಂದ್ರ ಕುಮಾರ್ (25) ಎಂದು ತಿಳಿದುಬಂದಿದೆ.ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ

ಹೊಯ್ಗೆ ಬಜಾರ್‌ ಸಮುದ್ರ ದಡದಲ್ಲಿ ಯುವತಿಯ ಮೃತದೇಹ ಪತ್ತೆ

ಯುವತಿ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ತೇಲಿಬಂದಿದ್ದು, ಉಳ್ಳಾಲದ ಮೀನುಗಾರರು ಮೃತದೇಹ ಸಮುದ್ರ ಸೇರುವುದನ್ನು ತಪ್ಪಿಸಿ ಹೊಯ್ಗೆಬಜಾರ್ ತೀರಕ್ಕೆ ತಲುಪಿಸಿದ್ದಾರೆ. ಸುಮಾರು 20-35 ರ ಒಳಗಿನ ಯುವತಿ ಮೃತದೇಹ ಇದಾಗಿದೆ. ಪ್ಯಾಂಟ್ ಹಾಗೂ ಟೀಶಟ್೯ ಧರಿಸಿದ್ದಳು. ಆತ್ಮಹತ್ಯೆಯೋ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದೋ ಅನ್ನುವುದು ಪೊಲೀಸ್ ತನಿಖೆಯಿಂದ

ಸೌಪರ್ಣಿಕಾ ನದಿಗೆ ಕಾಲು ಜಾರಿ ಬಿದ್ದು ತಾಯಿ, ಮಗು ಸಾವು

ಕುಂದಾಪುರ: ನದಿದಂಡೆಯಲ್ಲಿ ವಾಯು ವಿಹಾರ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಮಗ ಕಾಲು ಜಾರಿ ನದಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲೆಂದು ನದಿಗೆ ಹಾರಿದ ತಾಯಿ ಹಾಗೂ ಮಗ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ಶನಿವಾರ ನಾಡ ಗ್ರಾಮದ ಚುಂಗಿಗುಡ್ಡೆಯಲ್ಲಿ ಸಂಭವಿಸಿದೆ. ನಾಡ ಗ್ರಾಮದ ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಅವರ ಪತ್ನಿ ರೋಸಿರಿಯಾ (34) ಹಾಗೂ

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಮುಸ್ಲಿಮ್ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದು, 2020ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು

ಪಣಂಬೂರು ಬೀಚ್‍ನಲ್ಲಿ ಮೀನುಗಾರಿಕಾ ಬೋಟ್ ಅವಘಡ: ಓರ್ವ ಸಮುದ್ರಪಾಲು:ನಾಲ್ವರ ರಕ್ಷಣೆ

ಮಂಗಳೂರು: ನಗರದ ಪಣಂಬೂರು ಬೀಚ್ ಬಳಿ ಮೀನುಗಾರಿಕೆಗೆಂದು ತೆರಳಿದ್ದ ಬೋಟ್ ಇಂದು ಬೆಳಗ್ಗೆ ದುರಂತಕ್ಕೀಡಾಗಿದೆ. ಪರಿಣಾಮ ಓರ್ವ ಮೀನುಗಾರ ನಾಪತ್ತೆಯಾಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ. ಮೀನುಗಾರಿಕೆಗೆ ತೆರಳಿರುವ ಶರೀಫ್ ನಾಪತ್ತೆಯಾದವರು. ಮೀನುಗಾರಿಕೆ ನಡೆಸಲು ಅಝರ್ ಎಂಬವರ ಮಾಲಕತ್ವದ ಎಫ್.ಎನ್.ಚಿಲ್ಡ್ರನ್ಸ್ ಗಿಲ್ ನೆಟ್ ದೋಣಿಯು ಸಮುದ್ರಕ್ಕೆ ತೆರಳಿತ್ತು.

ನಿರರ್ಥಕ ಜಯಕ್ಕಿಂತ ಸಾರ್ಥಕ ಅಪಜಯ ಶ್ರೇಷ್ಠ: ಪ್ರೊ.ರಾಜಾರಾಮ ತೋಳ್ಪಾಡಿ

ಸಂಶೋಧನೆ ಎಂಬ ಜಟಿಲ ಮತ್ತು ಸಂಕೀರ್ಣವಾದ ಪರಿಕಲ್ಪನೆಯನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಾಡುವ ಮತ್ತು ಸಂಶೋಧನೆ ಅಂದರೆ ಏನು, ಸಂಶೋಧನೆಯನ್ನು ಉನ್ನತ ಶಿಕ್ಷಣವೆಂದು ಯಾಕೆ ಕರೆಯುತ್ತಾರೆ ಎಂಬುದನ್ನು ತಾತ್ವಿಕವಾಗಿ ವಿವೇಚನೆಗೆ ಒಳಪಡಿಸುವ ‘ಮಾರ್ಗಾನ್ವೇಷಣೆ’ ಪುಸ್ತಕವು ಒಂದು ಸಾಹಸೀ ಪ್ರಯೋಗವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ

ಆನೆಗುಡ್ಡೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಹಸ್ರ ನಾರಿಕೇಳ ಗಣಯಾಗ

ಕುಂದಾಪುರ: ಕೊರೋನಾ ಭೀತಿಯ ನಡುವೆಯೂ ಗಣೇಶ ಚತುರ್ಥಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ, ಸಂಭ್ರಮದಿಂದ ನಡೆದಿದ್ದು, ಭಕ್ತರು ಸಂಕಷ್ಟಹರ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡರು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರ ದಂಡು ಕಂಡುಬಂದಿತ್ತು. ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ