Home 2021 (Page 4)

ಪುತ್ತೂರು: ಬನ್ನೂರಿನ ದೈವಸೇವಕಾರ್ಯದ ಮಧ್ಯಸ್ಥ ಭರತ್ ಭಂಡಾರಿ ವಿಧಿವಶ

ಪುತ್ತೂರು: ದೈವ ಸೇವಾಕಾರ್ಯದಲ್ಲಿ ಮಧ್ಯಸ್ಥರಾಗಿ ಸೇವೆ ಮಾಡುತ್ತಿದ್ದ ಬನ್ನೂರು ನಿವಾಸಿ ಭರತ್ ಭಂಡಾರಿ ಅನಾರೋಗ್ಯದಿಂದ ನ.29ರ ನಸುಕಿನ ಜಾವ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿಯವರ ಪುತ್ರ ಭರತ್ ಭಂಡಾರಿ ಅವರು ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥರಾಗಿ ತೊಡಗಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇತ್ತೀಚೆಗೆ

ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಂಪನ್ನ

ತುಳುನಾಡಿನ ಐತಿಹಾಸಿಕ ಹಿನ್ನೆಲೆಯಿರುವ 26 ನೇ ವರ್ಷದ ಸುಪ್ರಸಿದ್ಧ ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಕಂಬಳವು ಭಾನುವಾರ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನೆರವೇರಿತು.ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಸಾಂಪ್ರದಾಯಿಕ ಕಂಬಳೊತ್ಸವವನ್ನು ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರು

ಗ್ರಂಥಾಲಯದಲ್ಲೇ ತ್ಯಾಜ್ಯಗಳ ರಾಶಿ..

ಗ್ರಾಮದಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನ ವಿಲೇವಾರಿ ಮಾಡೋ ಬದಲು ಗ್ರಾಮ ಪಂಚಾಯಿತಿನ ಗ್ರಂಥಾಲಯದಲ್ಲಿ ತುಂಬಿಸಿಟ್ಟಿದ್ದಾರೆ.ಇಲ್ಲಿ ಗ್ರಾಮಸ್ಥರು ಪುಸ್ತಕಗಳನ್ನು ದಿನಪತ್ರಿಕೆಗಳನ್ನ ಓದಬೇಕಾದರೆ ಈ ಕಸದ ರಾಶಿಗಳ ಮಧ್ಯೆ ಹಾಕಿರುವ ಟೇಬಲ್ ನಲ್ಲಿ ಮೂಗುಮುಚ್ಚಿಕೊಂಡು ಓದಬೇಕಾದ ಪರಿಸ್ಥಿತಿ ನಿರ್ಮಿಸಿದೆ. ಇದು ಅಂಬಲಪಾಡಿ ಗ್ರಾಮ ಪಂಚಯತ್ ವ್ಯಾಪ್ತಿಯ ಅವ್ಯವಸ್ಥೆ.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜೈನಮಿಲನ್ ’ಸಂಮಿಲನ್ 2021

ಮೂಡುಬಿದಿರೆ: ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ ’ಸಂಮಿಲನ್ ‘2021’ಕ್ರೀಡಾಕೂಟವು ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕ್ಯಾಂಪಸ್‌ನಲ್ಲಿ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ವೀರಸಾಗರ ಸಭಾಂಗಣದಲ್ಲಿ ಸಂಮಿಲನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೈನ

ತುಳು, ಕನ್ನಡ ರಂಗಭೂಮಿ ನಟಿ ಸುಮಿತ್ರಾ ರೈ ಇನ್ನಿಲ್ಲ

ತುಳು ಕನ್ನಡ ರಂಗಭೂಮಿಯ ಹಿರಿಯ ರಂಗಕಲಾವಿದ , ಶ್ರೀ ನಂದಿಕೇಶ್ವರ ನಾಟಕ ಸಂಘದ ರೂವಾರಿ ದಿ. ಪಿ.ಬಿ ರೈ ಯವರ ಧರ್ಮ ಪತ್ನಿ, ನಾಟಕ ಕಲಾವಿದೆ ಶ್ರೀಮತಿ ಬೇಬಿ ಯಾನೆ ಸುಮಿತ್ರ ರೈ (76 )ಇಂದು ಮಂಜೇಶ್ವರ ಸಮೀಪದ ಕುಂಜತ್ತೂರಿನ ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು. ದಿವಂಗತರು ಖ್ಯಾತ ಗುಬ್ಬಿ ವೀರಣ್ಣ ನಾಟಕ ಕಂಪನಿ, ಬಸವರಾಜ ಬಡಿಗೇರ ಮತ್ತು ತಮ್ಮ ಪತಿಯವರು ಕಟ್ಟಿ

ಮಂಡ್ಯದಲ್ಲಿ ದಿನೇಶ್ ಗೂಳಿ ಗೌಡ ಪರ ಪ್ರಚಾರದ ಅಖಾಡಕ್ಕಿಳಿದ ಯುವ ಕಾಂಗ್ರೆಸ್

ನಾಗಮಂಗಲ, ನ 25; ಡಿಸೆಂಬರ್ 10 ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ದಿನೇಶ್ ಗೂಳಿ ಗೌಡ ಪರ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಚಾರದ ಅಖಾಡಕ್ಕೆ ಇಳಿದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಸಚಿವರಾದ ಚಲುವರಾಯ ಸ್ವಾಮಿ, ನರೇಂದ್ರ ಸ್ವಾಮಿ ಮತ್ತಿತರ

ಆಕಸ್ಮಿಕ ಬೆಂಕಿ : ಸುಟ್ಟು ಹೋದ ಕಾರು

ಕಡಬ : ಆಲ್ಟೋ ಕಾರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟು ಹೋದ ಘಟನೆ ಬುಧವಾರ ಸಂಜೆ ವೇಳೆ ಬಳ್ಪ ಸಮೀಪ ಸಂಭವಿಸಿದೆ. ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಬಳ್ಪ ಎಂಬಲ್ಲಿಯ ಪಾದೆ ಬಳಿ ಘಟನೆ ಸಂಭವಿಸಿದೆ. ಪಂಜದ ಕೃಷ್ಣನಗರ ಕೇಶವ ಆಚಾರಿ ಎಂಬವರು ತಮ್ಮ ಕಾರಿನಲ್ಲಿ ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿರುವಾಗ ಪಾದೆ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಮನೆಗೆ ಎಸಿಬಿ ದಾಳಿ || KS Linge gowda

ಬೆಂಗಳೂರು, ನ.24: ಮಂಗಳೂರು ಸ್ಮಾರ್ಟ್ ಸಿಟಿ ಎಕ್ಸಿಕ್ಯುಟಿವ್ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಎಸ್

ಮುಂಬಯಿ ಪತ್ರಕರ್ತ ಪಾಲೆತ್ತಾಡಿ ಅವರಿಗೆ V4 ಸುದ್ದಿವಾಹಿನಿಯ ವತಿಯಿಂದ ಅಭಿನಂದನೆ

ಮಂಗಳೂರು: ನವಂಬರ್ 1ರಂದು ಬೆಂಗಳೂರಿನಲ್ಲಿ ಜರಗಿದ ರಾಜ್ಯೋತ್ಸವ ಸಮಾರಂಭದಲ್ಲಿ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಹೊರನಾಡ ಕನ್ನಡಿಗ, ಮುಂಬಯಿ ‘ಕರ್ನಾಟಕ ಮಲ್ಲ’ ಕನ್ನಡ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಮಂಗಳೂರಿನಲ್ಲಿV4 ನ್ಯೂಸ್ ಕರ್ನಾಟಕ ಸುದ್ದಿವಾಹಿನಿಯ ಕಾರ್ಯಾಲಯದಲ್ಲಿಅಭಿನಂದಿಸಲಾಯಿತು.

ನಟಿ ಕಂಗನಾ ರಣಾವತ್ ಹಾಗೂ ಪತ್ರಕರ್ತ ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹ ದೂರು ದಾಖಲಿಸಿದ ಕೆಪಿವೈಸಿಸಿ

ಮೋದಿ ಸರ್ಕಾರ ಬೇಕಿದ್ದರೆ ಕಂಗನಾ ಅವರನ್ನು ಆಜಾದಿ ಕಾ ಅಮೃತ್ ಮಹೋತ್ಸವ್ ರಾಯಭಾರಿಯಾಗಿ ನೇಮಿಸಿಕೊಳ್ಳಲಿ – ಎಂ.ಎಸ್. ರಕ್ಷಾ ರಾಮಯ್ಯ ಬೆಂಗಳೂರು, ನ, 23; ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳ ವಿರುದ್ಧ ಕ್ರೂರ ಮತ್ತು ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹತ್ಮಾ ಗಾಂಧೀಜಿ – ಪಂಡಿತ್ ಜವಾಹರ್ ಲಾಲ್ ನೆಹರು ವಿರುದ್ಧ