Home 2025 August (Page 14)

ಸುಳ್ಯ:ಸ್ನೇಹದಲ್ಲಿ ಶ್ರೀ ಕೃಷ್ಣ ಲೀಲೋತ್ಸವ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ದಿನಾಂಕ 12.8.2025 ನೇ ಮಂಗಳವಾರದಂದು ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮವು ಜರಗಿತು. ಪುಟಾಣಿ ಮಕ್ಕಳು ಕೃಷ್ಣನ ಬಾಲ ಲೀಲೆಗಳು ಮತ್ತು ಗೋಪಿಕೆಯರ ನ್ರುತ್ಯಗಳನ್ನು ಲವಲವಿಕೆಯಿಂದ ಮಾಡಿ ರಂಜಿಸಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ,

ಅಡ್ಯಾರು: ಕುಸಿದುಬಿದ್ದು ಬಸ್‌ ನಿರ್ವಾಹಕ ಸಾವು

ಅಡ್ಯಾರು: ಕಾಲೇಜು ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕ ಕರ್ತವ್ಯದಲ್ಲಿದ್ದಾಗಲೇ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಅಡ್ಯಾರ್‌ ಸಮೀಪ ಇಂದು ಬೆಳಗ್ಗಿನ ವೇಳೆ ಸಂಭವಿಸಿದೆ.ಕುತ್ತಾರು ನಿವಾಸಿ ಸಂತೋಷ್‌ (40) ಮೃತರು. ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯಕ್ಕೆ ಸೇರಿದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಬೆಳಗ್ಗಿನ ವೇಳೆ

ಉಳ್ಳಾಲ : ಸೋಮೇಶ್ವರ ಸ್ಕೂಟರ್ ಅಪಘಾತ – ಸವಾರ ಸಾವು

ಉಳ್ಳಾಲ : ಸ್ಕಿಡ್ ಆಗಿ ನಿಯಂತ್ರಣ ತಪ್ಪಿದ ಸ್ಕೂಟರೊಂದು ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್

ಕುಂದಾಪುರ : ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿತ್ರಾಸಿ-ಮರವಂತೆ ಗ್ರಾಮದ ಗಡಿ ಗುರುತು

ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಬೈಂದೂರು ತಾಲೂಕಿನ ಮರವಂತೆ ಈ ಎರಡು ಸ್ಥಳಗಳ ಮಧ್ಯಭಾಗದ ಗಡಿ ಗುರುತು ಮಾಡುವ ಕಾರ್ಯ ರಾಷ್ಟ್ರೀಯ ಹೆದ್ದಾರಿಯ 66 ಬಳಿ ನಡೆದಿದೆ.ತ್ರಾಸಿ ಮತ್ತು ಮರವಂತೆ ಮಧ್ಯ ಭಾಗದ ನಡುವೆ ತ್ರಾಸಿ ಗ್ರಾಮದ ಗಡಿ ಗುರುತು ಮಾಡಿಕೊಡುವಂತೆ ತ್ರಾಸಿ ಗ್ರಾಮ ಪಂಚಾಯತ್ ಮನವಿ ಮೇರೆಗೆ ಕುಂದಾಪುರ ತಹಶೀಲ್ದಾರ್ ಅವರು ರಾಷ್ಟ್ರೀಯ ಯ ಹೆದ್ದಾರಿ 66ರ ಬಳಿ

ಮೂಡುಬಿದಿರೆ : ಸ್ವಣೋ೯ದ್ಯಮಿ ಶ್ರೀಧರ್ ಆಚಾಯ೯ ನಿಧನ

ಮೂಡುಬಿದಿರೆ : ಸ್ವಣೋ೯ದ್ಯಮಿ ಮೂಡುಬಿದಿರೆಯ ಸುಧಾ ಜ್ಯುವೆಲ್ಲರ್ಸ್ ನ ಮಾಲಕ ಶ್ರೀಧರ ಆಚಾರ್ಯ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನ ಹೊಂದಿದರು.ಅವರು ಮೂಡುಬಿದಿರೆಯಲ್ಲಿ ಸುಧಾ ಜ್ಯುವೆಲ್ಲರ್ಸ್, ಲಕ್ಷ್ಮೀ ಜ್ಯುವೆಲ್ಲರ್ಸ್ ನ ಸ್ಥಾಪಕರಾಗಿದ್ದರು.ಮೂಡುಬಿದಿರೆ ಗುರುಮಠ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 1997- 2002 ರ ಅವಧಿಯಲ್ಲಿ ಎರಡನೇ

ಬೆಂಗಳೂರು: ದ.ಕ, ಉಡುಪಿ ಜಿಲ್ಲೆಯ ಗಣಿ ಇಲಾಖೆಯ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ , ಅಧಿಕಾರಿಗಳ ಸಭೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲೆಯಲ್ಲಿನ ಗಣಿ ಇಲಾಖೆಯ ಸಮಸ್ಯೆಗಳ ಬಗ್ಗೆ ಇಂದು ವಿಧಾನಸೌಧದ ಕೊಠಡಿ ಸಂಖ್ಯೆ106ರಲ್ಲಿ ನಡೆದ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಕೆಂಪು ಕಲ್ಲು

ಪಡುಬಿದ್ರಿ ಸಂತೆಕಟ್ಟೆ ದೈವರಾಜ ಕೋರ್ದಬ್ಬು ದೈವಸ್ಥಾನ ಅಧ್ಯಕ್ಷರಾಗಿ ಶಶಿಕಾಂತ್ ಪಡುಬಿದ್ರಿ ಆಯ್ಕೆ

ಪಡುಬಿದ್ರಿ: ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾ ಸಭೆಯು ನಡೆಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಮಾಜಿ ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ ಆಯ್ಕೆಯಾದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಕೋಟ್ಯಾನ್, ಜತೆ ಕಾರ್ಯದರ್ಶಿಯಾಗಿ

ಮೂಡುಬಿದಿರೆ : ಕಳಕೊಂಡ ಚಿನ್ನವನ್ನು 65 ಗಂಟೆಯಲ್ಲಿ ಪತ್ತೆ ಮಾಡಿದ ಮೂಡುಬಿದಿರೆ ಪೊಲೀಸರು

ಮೂಡುಬಿದಿರೆ : ಆ. 8 ರಂದು ಮಹಿಳೆಯೋವ೯ರು ಪಸ್ ೯ ಸಹಿತ 72 ಗ್ರಾಂ ಚಿನ್ನವನ್ನು ಕಳೆದುಕೊಂಡಿದ್ದು ಅದನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ನೇತೃತ್ವದ ತಂಡವು 65 ಗಂಟೆಯಲ್ಲಿ ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ಸೋಮವಾರ ಹಸ್ತಾಂತರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.ಪಡುಮಾನಾ೯ಡಿನ ದಿ. ಧಮ೯ಪಾಲ ಬಲ್ಲಾಳ್ ಅವರ ಪತ್ನಿ ವಿಜಯ ಅವರು ಆ. 8ರಂದು

ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಆರೋಗ್ಯ ಸೇವೆ ನಿರಾಕರಣೆ:ಸಂಸದ ಕ್ಯಾ. ಚೌಟ ಕಳವಳ

ನವದೆಹಲಿ: ದೇಶದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಆಯುಷ್ಮಾನ್‌ ಯೋಜನೆಗೆ ಕರ್ನಾಟಕ ಸರ್ಕಾರವು ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ

ಮಂಗಳೂರು:ಎಸ್ ಸಿಡಿಸಿಸಿ ಬ್ಯಾಂಕ್ ಗೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್  ಪ್ರಥಮ ಪ್ರಶಸ್ತಿ

ಮಂಗಳೂರು *  ಸಹಕಾರಿ ರಂಗದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಾ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್)ಗೆ  ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನ ಪ್ರಥಮ ಪ್ರಶಸ್ತಿ ಲಭಿಸಿದೆ. ಅಪೆಕ್ಸ್ ಬ್ಯಾಂಕ್ ರಾಜ್ಯದ ಅತ್ಯುತ್ತಮ