Home 2026 (Page 11)

ಮೂಡುಬಿದಿರೆ: ಅಗ್ನಿವೀರ್ ನೇಮಕಾತಿ ರ್‍ಯಾಲಿ ಮುಕ್ತಾಯ : 8,500 ಮಂದಿ ಭಾಗಿ

ಮೂಡುಬಿದಿರೆ: ಅಗ್ನಿವೀರ್ ರ‍್ಯಾಲಿ ಆಡಳಿತ, ಸಂಘಟಿತ ವ್ಯವಸ್ಥೆ ಮತ್ತು ಸೇವಾಭಾವದ ಅಪರೂಪದ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಇದು ಕೇವಲ ನೇಮಕಾತಿ ಪ್ರಕ್ರಿಯೆಯಲ್ಲ; ಯುವ ಮನಸ್ಸುಗಳಲ್ಲಿ ದೇಶಸೇವೆಯ ಉತ್ಸಾಹವನ್ನು ಮತ್ತಷ್ಟು ಗಟ್ಟಿಗೊಳಿಸಿದ ಮಹತ್ವದ ಅಧ್ಯಾಯವಾಗಿದೆ. ಪುಣ್ಯದ ಕೆಲಸದಲ್ಲಿ ನಮ್ಮ ಸಂಸ್ಥೆಯು ಭಾಗಿಯಾಗಿರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ

ಕಡಬ : ‘ಅನ್ವೇಷಣೆ–2026’ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆ

ಕಡಬ, ಫೆ.10: ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ಇಲ್ಲಿನ ವಿಜ್ಞಾನ ಸಂಘದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ‘ಅನ್ವೇಷಣೆ–2026’ ಎಂಬ ಶೀರ್ಷಿಕೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ, ರಂಗೋಲಿ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ

ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ (ನಿ) ಆರೋಗ್ಯ ಸೇವಾ ಸಂಗಮ:ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮ

ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ (ನಿ) ಆರೋಗ್ಯ ಸೇವಾ ಸಂಗಮ 100ನೇ ಯ ಬೃಹತ್ ಉಚಿತ ವೈದ್ಯಕೀಯ ನೇತ್ರ, ದಂತ, ರಕ್ತದಾನ ಶಿಬಿರ, ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರವು ಹಾಗೂ 14ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರಿನ ಪಡೀಲ್‌ನಲ್ಲಿ ತನ್ನ ಕೇಂದ್ರ ಕಛೇರಿ “ಆತ್ಮ ಶಕ್ತಿ ಸೌಧ” ದಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ:ಇಂದಿನಿಂದ ಜಾತ್ರೆ, ಕುಂಭ ಮಹೋತ್ಸವ

ಮಹಾನಗರ: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ, ಕುಂಭ ಮಹೋತ್ಸವ ಫೆ. 11ರಿಂದ 14ರ ವರೆಗೆ ನಡೆಯಲಿದೆ. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶೀರ್ವಾ ದದೊಂದಿಗೆ ಶ್ರೀ ಕ್ಷೇತ್ರದ ತಂತ್ರಿ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಜನಾರ್ದನ ಭಟ್ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಫೆ.

ಕೋವಿ ಪರವಾನಗಿ ವಿಳಂಬ–ನಿರಾಕರಣೆ ವಿರುದ್ಧ ರೈತರ ಆಕ್ರೋಶ ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಭೇಟಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ಶಾಸಕಿಯರಾದ ಭಾಗೀರಥಿ ಮುರುಳ್ಯ ಅವರು ಬಂದೂಕು ಪರವಾನಗಿದಾರರೊಂದಿಗೆ ಸೋಮವಾರ ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರನ್ನು ಭೇಟಿ ಮಾಡಿ, ಕೃಷಿಕರಿಗೆ ನೀಡುವ ಕೋವಿ ಪರವಾನಗಿ ನವೀಕರಣದಲ್ಲಿ ನಡೆಯುತ್ತಿರುವ ವಿಳಂಬ ಹಾಗೂ ನಿರಾಕರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಡಂಚಿನ ಗ್ರಾಮಗಳಲ್ಲಿ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಉಪಟಳ

26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ಶಿಪ್. (ಪುರುಷ ಮತ್ತು ಮಹಿಳಾ) ಕರ್ನಾಟಕ ರಾಜ್ಯ ವಾಲಿಬಾಲ್ ಮಹಿಳಾ ವಾಲಿ ಬಾಲ್ ತಂಡದ ಆಯ್ಕೆ ಪ್ರಕ್ರಿಯೆ .

ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆಯ ಆದೇಶ ಪ್ರಕಾರ ಮಾರ್ಚ್ 15ರಿಂದ 20ರವರೆಗೆ ಭುವನೇಶ್ವರ ಒಡಿಸ್ಸಾದಲ್ಲಿ ನಡೆಯಲಿರುವ , 26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್ (ಪುರುಷ ಮತ್ತು ಮಹಿಳಾ) ನಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ಮಹಿಳಾ ಯೂತ್ ವಾಲಿಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ, ಜಯನಗರ

ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಆಳ್ವಾಸ್ ವಿದ್ಯಾರ್ಥಿನಿಯರು‌ ಪ್ರಥಮ

ಮೂಡುಬಿದಿರೆ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಫೆಬ್ರವರಿ 7 ಮತ್ತು 8ರಂದು ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಬಿ. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಆಳ್ವಾಸ್

ಪೇರಾಲು: ಫೆ. 20ರಿಂದ 22ರ ವರೆಗೆ ಅಂಬ್ರೋಟಿ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಮಂಡೆಕೋಲು ಗ್ರಾಮದ ಪೇರಾಲು ಅಂಬ್ರೋಟಿಯಲ್ಲಿರುವ ಶ್ರೀ ಮುಚ್ಚಿರಡಿ ಇರುವೆರ್ ಉಳ್ಳಾಕುಲು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ. 20ರಿಂದ 22ರ ವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಶ್ರೀ ನಾಗದೇವರು ಮತ್ತು ಇರುವೆರು ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಮೇಳ – 2026

ಮೂಡುಬಿದಿರೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ವಾರ್ಷಿಕ ಕಬ್ಸ್-ಬುಲ್ ಬುಲ್ಸ್ ಉತ್ಸವ, ಸ್ಕೌಟ್-ಗೈಡ್ ಮೇಳ ಹಾಗೂ ರೋವರ್ಸ್-ರೇಂಜರ್ಸ್ ಸಮಾಗಮವು ಭಾನುವಾರ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಿತು. ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ವಸಂತ್ ದೇವಾಡಿಗ ಅವರು ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿ

ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟ : ಮೂಡುಬಿದಿರೆಯ ಅಪಿ೯ತಾಗೆ ಕಂಚು

ಮೂಡುಬಿದಿರೆ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನಲ್ಲಿ ನಡೆದ 2025–26ನೇ ಸಾಲಿನ ವಿಶೇಷ ಚೇತನ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮೂಡುಬಿದಿರೆ ಜ್ಯೋತಿನಗರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅರ್ಪಿತಾ ಸ್ಪರ್ಧಿಸಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಸಾಧನೆಗಾಗಿ ಶಾಲೆಯ ಮುಖ್ಯೋಪಾಧ್ಯಾಯರು,