ಬೈಂದೂರು : ಸರಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ – ರಂಗಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಸರಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ 60ರ ಸಂಭ್ರಮದ ರಂಗಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಅದ್ದೂರಿಯಿಂದ ಜರಗಿತು.


ಕೊಡುಗೆ ದಾನಿ ಯಶಸ್ವಿ ಉದ್ಯಮಿ ಹೇರಂಜಾಲು ಜಯಶೀಲ ಶೆಟ್ಟಿ ಅವರು ರಂಗಮಂದಿರಕ್ಕೆ ಅಡಿಗಲ್ಲು ಹಾಕುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಸರಕಾರಿ ಶಾಲೆಗಳ ಉಳಿವಿಕೆಗೆ ಹಳೆ ವಿದ್ಯಾರ್ಥಿಗಳ ಸಹಭಾಗಿತ್ವವು ಪ್ರಮುಖವಾದದ್ದು. ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಸಂಕಲ್ಪ ನಮ್ಮಿಂದಾಗಬೇಕು ಎಂದರು
.


60 ಸಂಭ್ರಮದ ಅಧ್ಯಕ್ಷರಾಗಿರುವ ಜಿ ಗೋಕುಲ್ ಶೆಟ್ಟಿ ಅವರು ಮಾತನಾಡಿ ಜಯಶೀಲ ಶೆಟ್ಟಿಯವರು ರಂಗ ಮಂದಿರ ನಿರ್ಮಾಣಕ್ಕೆ 10 ಲಕ್ಷಕ್ಕೂ ಮಿಕ್ಕಿ ದೇಣಿಗೆಯನ್ನು ನೀಡಿ ನಮ್ಮ 60 ಸಂಭ್ರಮ ತಂಡಕ್ಕೆ ಶಕ್ತಿ ತುಂಬಿದ್ದಾರೆ. ನಾವು ಓದಿದ ಸಂಸ್ಥೆಯ ಋಣ ತೀರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಹಳೆ ವಿದ್ಯಾರ್ಥಿಗಳು ಮತ್ತು ಪಾಲಕರು ಕೈಜೋಡಿಸಬೇಕು ಎಂದರು.

ಸಂಸ್ಥೆಯ ಅಧ್ಯಾಪಕರಾದ ವಿಶ್ವನಾಥ್ ಶೆಟ್ಟಿ ಅವರು ಮಾತನಾಡಿ ರಂಗಮಂದಿರ, ಸಭಾಂಗಣ, ಹೈಟೆಕ್ ಶೌಚಾಲಯ, ಗುರುವಂದನ ಕಾರ್ಯಕ್ರಮ, ತರಗತಿ ಕೋಣೆ ಒಟ್ಟು 1 ಕೋಟಿ 50 ಲಕ್ಷ ಯೋಜನೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಈ ಸಂದರ್ಭದಲ್ಲಿಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ಅರುಣ್ ಹೆಬ್ಬಾರ್ , ಪ್ರಾಂಶುಪಾಲರಾಗಿರುವ ಗಣಪತಿ ಅವಭ್ರತ್, ಉಪ ಪ್ರಾಂಶುಪಾಲರಾದ ಚೈತ್ರಾ ಶೆಣೈ. ಉದ್ಯಮಿ ವಾದಿರಾಜ ಶೆಟ್ಟಿ ಸಂಭ್ರಮ ಕಾರ್ಯದರ್ಶಿ ಸುಂದರ್ ಕೊಠಾರಿ ,ಎಸ್ ಡಿ ಎಂ ಸಿ ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಶಾಲಾಭಿಮಾನಿಗಳು ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ಚೈತ್ರ ಶೆಣೈ, ಸ್ವಾಗತಿಸಿದರು ಟಾಕೇಶ್ ಪಟಗಾರ ವಂದಿಸಿದರು.

Add - Clair veda ayur clinic

Related Posts

Leave a Reply

Your email address will not be published.