ದುಬೈ: ಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ ವಾರ್ಷಿಕ ಆರೋಗ್ಯ ಪ್ರಶಸ್ತಿಗೆ ನಾಮಿನೇಷನ್ ಪ್ರಾರಂಭ

ದುಬೈ: – ಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ, ವಾರ್ಷಿಕ ಆರೋಗ್ಯ ಪ್ರಶಸ್ತಿಗಳು 2025 ಗೆ ನಾಮಿನೇಷನ್‌ಗಳು ಪ್ರಾರಂಭವಾಗಿವೆ. ಯುಎಇಯಲ್ಲಿ ಆರೋಗ್ಯ ಕ್ಷೇತ್ರದ ಅತ್ಯುನ್ನತ ಗೌರವ ಈ ಪ್ರಶಸ್ತಿಗಳು. ಈ ವರ್ಷದ ವಿಶೇಷತೆ. 15 ಯುಎಇ ನಾಗರೀಕರು ಮತ್ತು ಇನ್ನೂ 46 ವಿಭಿನ್ನ ವಿಭಾಗಗಳಲ್ಲಿ ಸಾಧನೆ ಗೈದವರನ್ನು ಗೌರವಿಸಲಾಗುತ್ತದೆ. ಈ ಸಮಾರಂಭ ಅಕ್ಟೋಬರ್ 9ರಂದು ಬೆಳಿಗ್ಗೆ 11 ಗಂಟೆಗೆ ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ನಡೆಯಲಿದೆ.
ಸ್ಮರಣೀಯವಾದ ಗೌರವ: ಇದೇ ಮೊದಲ ಬಾರಿಗೆ 15 ಎಮಿರಾತಿ ಆರೋಗ್ಯ ವೃತ್ತಿಪರರು ವಿಶಿಷ್ಟ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸಾರ್ವಜನಿಕ ಆರೋಗ್ಯದ ಅಭಿಯಾನಗಳಿಂದ ಹಿಡಿದು ಶಸ್ತ್ರಚಿಕಿತ್ಸಾ ಸಾಧನೆ, ನವೀನತೆ, ಆರೈಕೆ, ಆರೋಗ್ಯ ಶಿಕ್ಷಣ ಮತ್ತು ಇನ್ನೂ ಹಲವಾರು ವಿಭಾಗಗಳಲ್ಲಿ ಸಾಧನೆಗೈದವರನ್ನು ಈ ಪ್ರಶಸ್ತಿ ಪಟ್ಟಿಯಲ್ಲಿಗುರುತಿಸಲಾಗುತ್ತಿದೆ.
ಈ ಪ್ರಶಸ್ತಿಗಳನ್ನು ಹೆಚ್ಚಿನ ಮಾಧ್ಯಮ ಪಾಲುದಾರರು ಮತ್ತು ಸ್ಪಾನ್ಸರ್‌ಗಳು ಬೆಂಬಲಿಸುತ್ತಿದ್ದು, ತುಂಬೆ ಮಾಧ್ಯಮವು ಟಿ.ವಿ, ಮುದ್ರಿತ ಮಾಧ್ಯಮ, ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಕಥೆಗಳನ್ನು ವಿಸ್ತಾರಗೊಳಿಸಲು ವಿಶಾಲ ಅಭಿಯಾನವೊಂದನ್ನು ಹಮ್ಮಿಕೊಂಡಿದೆ.
ನಾಮಿನೇಷನ್ ಮಾತ್ರವಲ್ಲ-ಇದು ನಿಮ್ಮ ಕಥೆ ಹೇಳುವ ವೇದಿಕೆ. ವೈಯಕ್ತಿಕ ವೈದ್ಯರಿಂದ ಹಿಡಿದು ಆಸ್ಪತ್ರೆಗಳವರೆಗೂ, ಸ್ಟಾಪ್‌ಗಳಿಂದ ಹಿಡಿದು ವೈದ್ಯಕೀಯ ತಂಡಗಳವರೆಗೂ ಈ ವೇದಿಕೆ ಸಾಧನೆಗಳನ್ನು ಹಂಚಿಕೊಳ್ಳಲು ಒಂದು ಸುವರ್ಣಾವಕಾಶ.
ತುಂಬೆ ಮಾಧ್ಯಮದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾದ ವಿಗ್ನೇಶ್‌ಎಸ್. ಉನಡ್ಕತ್ ಅವರು ಹೇಳಿದರು: “ಇದು ಈ ಪ್ರದೇಶದಲ್ಲಿನ ಅತೀದೊಡ್ಡ ಆರೋಗ್ಯ ಪ್ರಶಸ್ತಿ ವೇದಿಕೆ. ಇದರ ಪ್ರಮಾಣ, ವ್ಯಾಪ್ತಿ, ಮತ್ತು ಪ್ರಭಾವದಲ್ಲಿ ಇದು ಸಾಟಿ ಇಲ್ಲದಂತದ್ದು. ಉತ್ತಮ ಆರೋಗ್ಯ ವೃತ್ತಿಪರರಿಗೆ ಮಾನ್ಯತೆ, ವಿಶ್ವಾಸಾರ್ಹತೆ ಮತ್ತು ಪ್ರಾದೇಶಿಕ ಗುರುತಿನ ವೇದಿಕೆ ಇದಾಗಿದೆ.”
➡️https://www.healthmagazine.ae/awards/ ಗೆ ಭೇಟಿ ನೀಡಿ
*ನಿಮಗೆ ಹೊಂದಿಕೊಳ್ಳುವ ವಿಭಾಗವನ್ನುಆಯ್ಕೆ ಮಾಡಿ
* ನಿಮ್ಮ ಸಾಧನೆ, ಪ್ರಭಾವ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀವು ಹೇಗೆ ಮುಂದುವರೆದಿದ್ದೀರಿ ಎಂಬ ಮಾಹಿತಿಯೊಂದಿಗೆ ನಾಮಿನೇಷನ್ ಸಲ್ಲಿಸಿ.
ಎಲ್ಲಾ ನಾಮಿನೇಷನ್‌ಗಳನ್ನು ವಿಶಿಷ್ಟ, ಪ್ರಾಮಾಣಿಕ ಮತ್ತು ಅನುಭವಿ ತಜ್ಞರ ಸಮಿತಿಯು ಪರಿಶೀಲಿಸಿ, ಅಕ್ಟೋಬರ್ 9ರಂದು ವಿಜೇತರನ್ನು ಘೋಷಿಸಲಾಗುವುದು.
ನಾಮಿನೇಷನ್‌ಸಲ್ಲಿಸಲುಕೊನೆಯ ದಿನಾಂಕ: ಸೆಪ್ಟೆಂಬರ್ 20, 2025