ನೇತ್ರ ಜ್ಯೋತಿ ಕಾಲೇಜಿನಲ್ಲಿ ರಾಷ್ಟ್ರೀಯ ಅರಿವಳಿಕೆ ಮತ್ತು ಆಪರೇಷನ್ ಥೀಯೇಟರ್ ತಂತ್ರಜ್ಞರ ದಿನಾಚರಣೆ

ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ರಾಷ್ಟ್ರೀಯ ಅರಿವಳಿಕೆ ಮತ್ತು ಆಪರೇಷನ್ ಥೀಯೇಟರ್ ತಂತ್ರಜ್ಞರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲ ಕಸ್ತುರ್ಬಾ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ|ಶ್ವೇತ ಸಿನ್ಹರವರು ಮಾತನಾಡಿ ರೋಗಿಯ ರಕ್ಷಣೆಯಲ್ಲಿ ಅರಿವಳಿಕೆ ಮತ್ತು ಆಪರೇಷನ್ ಥೀಯೇಟರ್ ತಂತ್ರಜ್ಞರ ಪಾತ್ರ ಮಹತ್ತರವಾಗಿದೆ ಎಂದರು.
ಇನ್ನೊರ್ವ ಅತಿಥಿ ಉಡುಪಿ ಜಿಲ್ಲಾ ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ| ಗಣಪತಿ ಹೆಗಡೆಯವರು ಮಾತನಾಡಿ ಸಮಾಜದಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಇರಬೇಕಾದ ಜವಾಬ್ದಾರಿಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷೆ ಶ್ರೀಮತಿ ರಶ್ಮೀ ಕೃಷ್ಣ ಪ್ರಸಾದ್ ರವರು ಅರಿವಳಿಕೆ ಮತ್ತು ಆರೇಷನ್ ತಿಯೇಟರ್ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ನಿತ್ಯವು ಆಚರಿಸುವಂತಾ ಗಬೇಕು ಎಂದರು. ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಅದನ್ನು ಸಮಾಚಿತ್ತದಿಂದ ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಸಿ ಓ ಓ ಡಾ| ಗೌರಿ ಪ್ರಭು ಮಾತನಾಡಿ ಯಾವುದೇ ಆಷ್ಪತ್ರೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ವೈದ್ಯರ ಜೊತೆಗೆ ಅರೆವೈದ್ಯಕೀಯ ಸಿಬ್ಬಂದಿಗಳ ಪಾತ್ರ ವಿಶೇಷವಾಗಿದೆ ಎಂದರು.
ವೇದಿಕೆಯಲ್ಲಿ ಉಪನ್ಯಾಸಕಿ ಸ್ವಾತಿ ಉಪಸ್ಥಿತರಿದ್ದು,ಕುಮಾರಿ ಭೂಮಿಕಾ ಸ್ವಾಗತಿಸಿದರು,ಕುಮಾರಿ ರಾಧಿಕಾ ಧನ್ಯವಾದಗೈದರು. ಕುಮಾರಿ ನಿವೇದಿತಾ
ಕಾರ್ಯಕ್ರಮವನ್ನು ನಿರೂಪಿಸಿದರು.