ಫೇಮಸ್ ಯೂತ್ ಕ್ಲಬ್ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ

ತೋಕೂರು: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇವರ ಮಾರ್ಗದರ್ಶನದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಪ್ರಿಯದರ್ಶಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಪೂಜಾ ಫ್ರೆಂಡ್ಸ್ ಹಳೆಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕುಳಾಯಿ ಇವರ ಸಹಕಾರದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಹಳೆಯಂಗಡಿ ಇವರ ಪ್ರಾಯೋಜಕತ್ವದಲ್ಲಿ ಗೋವಿಂದ ದಾಸ ಕಾಲೇಜು ಮತ್ತು ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆ ಸುರತ್ಕಲ್ ಇವರ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟ 2025-26 ರ ಸಮಾರೋಪ ಕಾರ್ಯಕ್ರಮವನ್ನು ಗೋವಿಂದ ದಾಸ ಕಾಲೇಜು ಮೈದಾನದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್ ವಿ ಸಂಘ (ರಿ) ಸುರತ್ಕಲ್ ಇದರ ಅಧ್ಯಕ್ಷರಾದ ಶ್ರೀ ಶ್ರೀರಂಗ ಎಚ್. ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯನ್ನು ಮಂಗಳೂರು ಹಾಲು ಒಕ್ಕೂಟ ಇದರ ನಿರ್ದೇಶಕರಾದ ಶ್ರೀ ಕೆ.ಪಿ. ಸುಚರಿತ ಶೆಟ್ಟಿಯವರು ನೆರವೇರಿಸಿ ಕೊಟ್ಟರು.


ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮಾ ಚಂದ್ರಶೇಖರ್, ಗೋವಿಂದ ದಾಸ ಕಾಲೇಜು ಸುರತ್ಕಲ್ ಪ್ರಾಂಶುಪಾಲರಾದ ಶ್ರೀ ಹರೀಶ್ ಆಚಾರ್ಯ ಪಿ, ಜಿಲ್ಲಾ ಪಂಚಾಯತ್ ಮಂಗಳೂರು ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ, ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲಾ ಯುವ ಅಧಿಕಾರಿ ಶ್ರೀ ಉಲ್ಲಾಸ್. ಕೆ.ಟಿ.ಕೆ, ಮತ್ತು ಜಗದೀಶ್ ಕೆ, ಪೂಜಾ ಎರೇಂಜರ್ಸ್ ಮತ್ತು ಕ್ಯಾಟರರ್ಸ್ ಮಾಲೀಕರಾದ ಶ್ರೀ ಜೈ ಕೃಷ್ಣ ಬಿ.ಕೋಟ್ಯಾನ್, ಗೋವಿಂದ ದಾಸ ಕಾಲೇಜು ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾರವರು ಉಪಸ್ಥಿತರಿದ್ದರು.
ಸಮಾಜ ಸೇವೆಯ ನೆಲೆಯಲ್ಲಿ ಶ್ರೀ ಶ್ರೀರಂಗ ಎಚ್, ಶ್ರೀ ಹಿಮಕರ್, ಮತ್ತು ಶ್ರೀ ಜನಾರ್ಧನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಕ್ರೀಡಾಕೂಟದಲ್ಲಿ ವಾಲಿಬಾಲ್ ವಿಭಾಗದಲ್ಲಿ-12 ತಂಡಗಳು, ತ್ರೋಬಾಲ್ ವಿಭಾಗದಲ್ಲಿ -06 ತಂಡಗಳು ಮತ್ತು ಖೋ..ಖೋ ವಿಭಾಗದಲ್ಲಿ 02 ತಂಡಗಳು ಭಾಗವಹಿಸಿದ್ದವು ವೈಯಕ್ತಿಕ ಕ್ರೀಡಾ ವಿಭಾಗದಲ್ಲಿ 100 ಮೀಟರ್ ಓಟ, ಶಾಟ್ ಪುಟ್, ಶಟಲ್ ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಯಿತು.


ವಾಲಿಬಾಲ್ ನಲ್ಲಿ ಯುನೈಟೆಡ್ ತಾಳಿಪಾಡಿ ಪ್ರಥಮ ಮತ್ತು ಪ್ರೋಡೆಕ್ಟ್ ಹೌಸ್ ಕಿನ್ನಿಗೋಳಿ ದ್ವಿತೀಯ, ತ್ರೋಬಾಲ್ ನಲ್ಲಿ ಮಂಗಳೂರು ಫ್ರೆಂಡ್ಸ್ ಪ್ರಥಮ ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್ ದ್ವಿತೀಯ, ಖೋ ಖೋ ಪಂದ್ಯಾಟದಲ್ಲಿ ಎಸ್ ಡಿ ಪಿ ಟಿ ಕಟೀಲು ಪ್ರಥಮ ಮತ್ತು ಜಿ.ಎಫ್ ಜಿ ಸಿ ಕಾರ್ ಸ್ಟ್ರೀಟ್ ಮಂಗಳೂರು ದ್ವಿತೀಯ, ಯುವಕರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ನಲ್ಲಿ ಶಶಾಂಕ್ ಪ್ರಥಮ ಮತ್ತು ವಿನೀತ್ ದೇವಾಡಿಗ ದ್ವಿತೀಯ,
ಯುವಕರ ವಿಭಾಗದ ಶಾಟ್ ಪುಟ್ ನಲ್ಲಿ ತನಿಷಾ ವಿ ಸುವರ್ಣ ಪ್ರಥಮ ಜಗದೀಶ್ ಶೆಟ್ಟಿ ದ್ವಿತೀಯ, ಯುವತಿಯರ ವಿಭಾಗದ ಶಾಟ್ ಪುಟ್ ನಲ್ಲಿ ಅಕ್ಷಾ ಪ್ರಥಮ ಮತ್ತು ಮತ್ತು ರಶ್ಮಿತಾ ದ್ವೀತೀಯ, ಯುವಕರ ವಿಭಾಗದ 100. ಮೀಟರ್ ಓಟದಲ್ಲಿ ದೀಕ್ಷಿತ್ ಪ್ರಥಮ ನಾಗರಾಜ್ ದ್ವಿತೀಯ, ಯುವತಿಯರ ವಿಭಾಗದ 100 ಮೀಟರ್ ಓಟ ಪ್ರೇಕ್ಷಾ ಪ್ರಥಮ ಪ್ರತೀಕ್ಷಾ ದ್ವಿತೀಯ ಸ್ಥಾನವನ್ನು ಪಡೆದರು ಇದರ ಜೊತೆಗೆ ಗುಂಪು ಕ್ರೀಡೆಗಳಲ್ಲಿ ವೈಯಕ್ತಿಕ ಬಹುಮಾನಗಳನ್ನು ನೀಡಲಾಯಿತು

ಕಾರ್ಯಕ್ರಮವನ್ನು ಅಧ್ಯಕ್ಷರಾದ ಸಂಪತ್ ಜಿ ಶೆಟ್ಟಿ ಅವರು ಸ್ವಾಗತಿಸಿ, ಭಾಸ್ಕರ್ ಅಮೀನ್ ತೋಕೂರುರವರು ಕಾರ್ಯಕ್ರಮವನ್ನು ನಿರೂಪಿಸಿದರು

Related Posts

Leave a Reply

Your email address will not be published.