ಕಾಪು: ಬಿಳಿಯಾರು ರತ್ನ ಮಡಿವಾಳ್ತಿ ಅವರಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾಸ್ತಲ್ಯ ಕುಟುಂಬ ಮಶಾಸನ ಮತ್ತು ವಾಸ್ತಲ್ಯ ಕಿಟ್ ವಿತರಣೆ

ಕಾಪು:ಕಾಪು ತಾಲೂಕಿನ ಬಿಳಿಯಾರು ರತ್ನ ಮಡಿವಾಳ್ತಿ ಅವರಿಗೆ ಇಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾಸ್ತಲ್ಯ ಕುಟುಂಬ ಮಶಾಸನ ಮತ್ತು ವಾಸ್ತಲ್ಯ ಕಿಟ್ ವಿತರಣೆ ಮಾಡಲಾಯಿತು.

ವೃದ್ಯಾಪ್ಯ ಜೀವನ ಸಾಗಿಸುತ್ತಿರುವ ರತ್ನ ಮಡಿವಾಳ್ತಿಯರಿಗೆ ಮಕ್ಕಳಿಲ್ಲದ ನೋವು ಒಂದು ಕಡೆಯಾದರೆ ಇತ್ತ ಅನಾರೋಗ್ಯದಿಂದ ಬಳಲುತ್ತಿರುವ ಪತಿ ಇವರುಗಳ ವಾಸ್ತವ ಸ್ಥಿತಿಯನ್ನು ಮನಗಂಡು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾತೃಶ್ರೀ ಹೇಮಾವತಿ ಹೆಗ್ಗಡೆ ಯವರ ಪರಿಕಲ್ಪನೆ ಯಂತೆ ಕುಟುಂಬಕ್ಕೆ ಪ್ರತಿ ತಿಂಗಳು ವಾಸ್ತಲ್ಯ ಮಶಾಸನ ಅದೇ ರೀತಿ ಅವರ ಜೀವನ ನಿರ್ವಹಣೆ ಗೆ ವಾಸ್ತಲ್ಯ ಕಿಟ್ ನ್ನು ಜಿಲ್ಲಾ ನಿರ್ದೇಶಕರಾದ ನಾಗರಾಜ್ ಶೆಟ್ಟಿ ಕಿಟ್ ನ್ನು ರತ್ನ ಮಡಿವಾಳ್ತಿ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿಗಳಾದ ಮಮತಾ ಶೆಟ್ಟಿ, ಬಿಳಿಯರ್ ರಾಜೇಶ್, ಹರೀಶ್ ಹಾಗೂ ಜ್ಞಾನ ವಿಕಾಸ ಸಮನ್ವಯಧಿಕಾರಿ ಸವಿತ ಮತ್ತು ಸೇವಾಪ್ರತಿನಿಧಿ ಆಶಾಲತಾ ಉಪಸ್ಥಿತರಿದ್ದರು.

Related Posts

Leave a Reply

Your email address will not be published.