ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಲಿವರ್ ಟ್ಯೂಮರ್ ಗೆ  ಮಾಡಲಾಗಿರುವ  ಕರಾವಳಿ ಕರ್ನಾಟಕದಲ್ಲಿಯೇ  ಮೊದಲ ಯಶಸ್ವಿ ಮಕ್ಕಳ ರೊಬೊಟಿಕ್ ಶಸ್ತ್ರಚಿಕಿತ್ಸೆ

ಹದಿನಾಲ್ಕು ವರ್ಷದ ಬಾಲಕಿಯೊಬ್ಬಳಿಗೆ  ಕಿಬ್ಬೊಟ್ಟೆಯ ನೋವು ಕಾಣಿಸಿಕೊಂಡಿದ್ದರಿಂದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕರೆತರಲಾಗಿತ್ತು.  ಅಲ್ಲಿನ ವೈದ್ಯಕೀಯ ತಂಡವು ಆಕೆಯನ್ನು ಸಂಪೂರ್ಣ ಪರಿಶೀಲನೆ ಮಾಡಿದಾಗ ಆಕೆಗೆ  ಯಕೃತ್ತಿನಲ್ಲಿ  (ಕಾಡೇಟ್ ಲೋಬ್) ದೊಡ್ಡ ಗೆಡ್ಡೆ ಉಂಟಾಗಿರುವುದು ಪತ್ತೆಯಾಯಿತು. ಈ ಥರದ  ದೊಡ್ಡ ಪಿತ್ತಜನಕಾಂಗದ ಗೆಡ್ಡೆಗಳಿಗೆ  ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅವು ಒಡೆದು  ನಿಯಂತ್ರಿಸಲಾಗದ ಅತೀವ ರಕ್ತಸ್ರಾವವಾಗುವ ಅಪಾಯವಿರುತ್ತದೆ.  

ಅಧಿಕ ರಕ್ತಸ್ರಾವಕ್ಕೆ ಕಾರಣವಾಗುವ ವೆನಾ ಕ್ಯಾವಾದಂತಹ ಪ್ರಮುಖ ರಕ್ತನಾಳಗಳ ಬಳಿ ಈ ಗೆಡ್ಡೆ ಇರುವುದರಿಂದ ತೆರೆದ ಶಸ್ತ್ರಚಿಕಿತ್ಸೆ ತುಂಬಾ ಅಪಾಯಕಾರಿಯೆಂಬುದನ್ನು ಮನಗಂಡು  ಮಕ್ಕಳ ಶಸ್ತ್ರಚಿಕಿತ್ಸೆ ತಂಡವು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು  / Hepato-Pancreato-Biliary (HPB) ಶಸ್ತ್ರಚಿಕಿತ್ಸಕರೊಂದಿಗೆ ರೊಬೊಟಿಕ್ ಅಸಿಸ್ಟೆಡ್ ಲಿವರ್ ರಿಸೆಕ್ಷನ್ ಸರ್ಜರಿಯನ್ನು ನಡೆಸುವ ತೀರ್ಮಾನದೊಂದಿಗೆ   ಕೈಗೊಂಡ ಈ ಅತ್ಯಂತ  ಸವಾಲಿನ  ಶಸ್ತ್ರಚಿಕಿತ್ಸೆಗೆ ಸುಮಾರು  11 ಗಂಟೆಗಳು ತಗಲಿರುತ್ತದೆ. 

ಈ ಶಸ್ತ್ರಚಿಕಿತ್ಸೆಯನ್ನು ಪ್ರಖ್ಯಾತ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿಸ್ಟ್ ಆಗಿರುವ ಪ್ರಾಕ್ಟರ್ ಡಾ। ಕಲಯರಸನ್ ರಾಜಾ, JIPMER, Pondicherry,  ಇವರ ಮಾರ್ಗದರ್ಶನದಲ್ಲಿ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆಯಲ್ಲಿ ಕಡಿಮೆ ರಕ್ತದೊತ್ತಡ  ಮತ್ತು ಅತಿಯಾದ ರಕ್ತಸ್ರಾವದ  ಸಾಧ್ಯತೆಯಿದ್ದು,  ಅಂತಹ ಸಂದರ್ಭಗಳಲ್ಲಿ ಅರಿವಳಿಕೆ ನೀಡುವುದು ಅತ್ಯಂತ ಸವಾಲಿನ ಸ್ಥಿತಿಯಾಗಿದ್ದರೂ,  ಇದನ್ನು ತಜ್ಞ ಅರಿವಳಿಕೆ ತಂಡವು ಪರಿಣಾಮಕಾರಿಯಾಗಿ ನಿರ್ವಹಿಸಿದೆ.

ಮಕ್ಕಳ ವೈದ್ಯರು ಹಾಗೂ  ಮಕ್ಕಳ ತುರ್ತು ನಿಗಾ ಘಟಕದ  ಸಿಬ್ಬಂದಿಗಳ  ಆರೈಕೆಯಿಂದಾಗಿ  ರೋಗಿಯು ಶಸ್ತ್ರಚಿಕಿತ್ಸೆಯ ನಂತರದ  ಯಾವುದೇ ನಾಜೂಕಾದ ತೊಂದರೆಗಳಿಲ್ಲದೆ  ಚೇತರಿಸಿಕೊಂಡರು.  ಮತ್ತು ಶಸ್ತ್ರಚಿಕಿತ್ಸೆಯ 5 ನೇ ದಿನದಿಂದ  ಸಂಪೂರ್ಣವಾಗಿ ಚೇತರಿಸಿಕೊಂಡು ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ತೊಡಗಿದ ಬಳಿಕ  ಆಕೆಯನ್ನು ಡಿಸ್ಚಾರ್ಜ್ ಮಾಡಲಾಯಿತು.

ಆಸ್ಪತ್ರೆಯ ಮೂಲಗಳ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಇಂತಹ ಸಂಕೀರ್ಣವಾದ ಲಿವರ್ ಟ್ಯೂಮರ್‌ಗೆ ಮಾಡಲಾಗಿರುವ  ಮೊದಲ ಮಕ್ಕಳ ರೊಬೊಟಿಕ್ ಶಸ್ತ್ರಚಿಕಿತ್ಸೆ ಇದಾಗಿದೆ. ಕೆ ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯಲ್ಲಿ ಕಳೆದ ಒಂದು ವರ್ಷದಲ್ಲಿ  ರೊಬೊಟಿಕ್ ನೆರವಿನೊಂದಿಗೆ  ಸುಮಾರು 170 ಕ್ಕೂ ಹೆಚ್ಚು ಸಂಕೀರ್ಣವಾದ   ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಸಾಮಾನ್ಯವಾದ  ಶಸ್ತ್ರಚಿಕಿತ್ಸೆ ಪದ್ಧತಿಗಳಿಗಿಂತ  ರೊಬೊಟಿಕ್ ಶಸ್ತ್ರಚಿಕಿತ್ಸೆಯು ಪ್ರಮುಖ ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಜಠರ, ಮೂತ್ರಕೋಶ, ಸ್ತ್ರೀರೋಗ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿನ ನಿಖರತೆಯೊಂದಿಗೆ ನಿರ್ವಹಿಸಲು ಸಹಾಯ ಮಾಡುತ್ತದೆ, ಇದು ರೋಗಿಯ ಚೇತರಿಕೆ ಪ್ರಮಾಣವನ್ನು ವೇಗಗೊಳಿಸಿ  ಮತ್ತು ಕಡಿಮೆ ನೋವನ್ನುಂಟು ಮಾಡುವಲ್ಲಿ ಸಹಕಾರಿಯಾಗಿದೆ.

ರೋಗಿಯು ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರಾಗಿದ್ದು, ಈ ಶಸ್ತ್ರಚಿಕಿತ್ಸೆಯು ಸಂಸ್ಥೆ ಮತ್ತು ನಿಟ್ಟೆ ಆಡಳಿತ ಮಂಡಳಿಯ ಬೆಂಬಲ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಯಿತು.  ರೋಗಿ ಸಾಮಾಜಿಕವಾಗಿ ಅನಾನುಕೂಲ ಸ್ಥಿತಿಯಿಂದ ಬಂದವರಾಗಿದ್ದರೂ ಈ ಶಸ್ತ್ರಚಿಕಿತ್ಸೆಯನ್ನು ನಿಟ್ಟೆ ಸಂಸ್ಥೆಯ ಸಂಪೂರ್ಣ ಸಹಕಾರ ಮತ್ತು ಬೆಂಬಲದಿಂದಾಗಿ   ಯಶಸ್ವಿಗೊಳಿಸುವುದು ಸಾಧ್ಯವಾಯಿತು.

Related Posts

Leave a Reply

Your email address will not be published.