ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ (ನಿ) ಆರೋಗ್ಯ ಸೇವಾ ಸಂಗಮ:ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮ

ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ (ನಿ) ಆರೋಗ್ಯ ಸೇವಾ ಸಂಗಮ 100ನೇ ಯ ಬೃಹತ್ ಉಚಿತ ವೈದ್ಯಕೀಯ ನೇತ್ರ, ದಂತ, ರಕ್ತದಾನ ಶಿಬಿರ, ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರವು ಹಾಗೂ 14ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರಿನ ಪಡೀಲ್‌ನಲ್ಲಿ ತನ್ನ ಕೇಂದ್ರ ಕಛೇರಿ “ಆತ್ಮ ಶಕ್ತಿ ಸೌಧ” ದಲ್ಲಿ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ “ಸಹಕಾರ ರತ್ನ” ಚಿತ್ತರಂಜನ್ ಬೋಳಾ‌ರ್
ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ, ವೈದ್ಯರಿಗೆ ಸನ್ಮಾನ ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಭಿನಂದನಾ ಸಮಾರಂಭದಲ್ಲಿ
ಹಿರಿಯ ವೈದ್ಯರಾದ ಡಾ। ಎನ್.ಟಿ.ಅಂಚನ್ ಹಾಗೂ ಎಸ್.ಡಿ.ಎಮ್ ಆಯುರ್ವೇದ ಮೆಡಿಕಲ್ ಕಾಲೇಜು ಉಡುಪಿಯ ಡಾ| ಸದಾನಂದ್ ಎಲ್ ಭಟ್ ಹಾಗೂ ಶ್ರೀಮತಿ ಡಾ|ಸುಷ್ಮಾ ಎಸ್. ಭಟ್ ಇವರುಗಳನ್ನು ಸನ್ಮಾನಿಸಲಾಯಿತು.

ಎಸ್ಸಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್‌ ಸೂರಿಂಜೆ, ವೆನ್ಸಾಕ್ ಆಸ್ಪತ್ರೆ ಅಧೀಕ್ಷಕ ಡಾ| ಶಿವಪ್ರಕಾಶ್ ಡಿ.ಎಸ್, ಐಎಂಎ ರಾಜ್ಯ ಉಪಾಧ್ಯಕ್ಷ ಡಾ। ಅಣ್ಣಯ್ಯ ಕುಲಾಲ್, ಐಎಂಎ ಮಂಗಳೂರು ಅಧ್ಯಕ್ಷ ಡಾ| ಸದಾನಂದ ಪೂಜಾರಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲೆಂಟ್ಸ್ ಚಾರಿ ಅಧ್ಯಕ್ಷ ಡಾ| ಆನಂದ ಬಂಗೇರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಆರಕ್ಷಕ ಅಧೀಕ್ಷಕ ಕುಮಾರಚಂದ್ರ, ಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷ ಸುರೇಶ್ ಅಮೀನ್, ಆತ್ಮಶಕ್ತಿ ಸಹಕಾರ ಸಂಘದ ನಿರ್ದೇಶಕ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ ಎನ್., ರಮಾನಾಥ ಸನಿಲ್, ಮುದ್ದು ಮೂಡುಬೆಳ್ಳೆ, ದಿವಾಕರ್‌ಬಿ.ಪಿ.ಯ, ಗೋಪಾಲ್ ಎಂ, ಚಂದ್ರಾವತಿ ಹಾಗೂ ಉಮಾವತಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.