ಕಡಬ : ‘ಅನ್ವೇಷಣೆ–2026’ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆ
ಕಡಬ, ಫೆ.10: ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ಇಲ್ಲಿನ ವಿಜ್ಞಾನ ಸಂಘದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ‘ಅನ್ವೇಷಣೆ–2026’ ಎಂಬ ಶೀರ್ಷಿಕೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ, ರಂಗೋಲಿ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯದ ನಿವೃತ್ತ ಮುಖ್ಯಗುರುಗಳಾದ ಶ್ರೀ ಕೆ. ಯಶವಂತ ರೈ ಮರ್ಧಾಳ ಮಾತನಾಡಿ, ವಿಜ್ಞಾನವು ನಾವು ಅಧ್ಯಯನ ಮಾಡುವ ವಿಷಯಗಳ ಬಗ್ಗೆ ಸ್ಪಷ್ಟ ಜ್ಞಾನವನ್ನು ನೀಡುತ್ತದೆ. ಕಲಿತ ವಿಚಾರಗಳನ್ನು ಆಚಾರದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ವಾಸ್ತವಾಂಶಗಳ ಆಧಾರದ ಮೇಲೆ ವಿಚಾರಿಸುವ ಗುಣವೇ ವಿಜ್ಞಾನದ ಸಾರವಾಗಿದ್ದು, ಒಬ್ಬ ವಿಜ್ಞಾನಿ ಆಧ್ಯಾತ್ಮಿಕ ಮನೋಭಾವವನ್ನೂ ಹೊಂದಿರುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಶಿವಪ್ರಸಾದ್ ರೈ ಮೈಲೇರಿ ವಹಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕಿ ಶ್ರೀಮತಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ ರೈ ಎಸ್. ಉಪಸ್ಥಿತರಿದ್ದರು.
ಅಶ್ವಿನಿ ಕೆ. ಪ್ರಾರ್ಥನೆಗೈದರು. ಕೃತಿಕಾ ಜೆ. ಸ್ವಾಗತಿಸಿದರು. ಜಸ್ಮಿತ ಅತಿಥಿಗಳನ್ನು ಪರಿಚಯಿಸಿದರು. ವಿಜ್ಞಾನ ಶಿಕ್ಷಕಿ ಶ್ರೀಮತಿ ಕಾವ್ಯ ಹರಿಕೃಷ್ಣ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಿಂಚನ ವಂದಿಸಿದರು. ಎನ್.ಕೆ. ಯಶ್ವಿತ್ ಕಾರ್ಯಕ್ರಮ ನಿರ್ವಹಿ


















