ನೇತ್ರ ಜ್ಯೋತಿ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಸಿವಿಲ್ ಡಿಫೆನ್ಸ್ ಕಮಾಂಡಿಂಗ್ ಆಫೀಸರ್ ಡಾ. ವಿಜೇಂದ್ರ ಸಿವಿಲ್ ಡಿಫೆನ್ಸ್ ಮಾಹಿತಿ ಕಾರ್ಯಗಾರ
ಉಡುಪಿ:ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ಸಿವಿಲ್ ಡಿಫೆನ್ಸ್ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಿಮಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಿವಿಲ್ ಡಿಫೆನ್ಸ್ ಕಮಾಂಡಿಂಗ್ ಆಫೀಸರ್ ಡಾ. ವಿಜೇಂದ್ರರವರು ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ರಕ್ಷಣೆ ಮತ್ತು ಮಾನವೀಯ ಸೇವೆ ಒದಗಿಸುವುದೇ ಸಿವಿಲ್ ಡಿಫೆನ್ಸ್. ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ವಿಧ್ಯಾರ್ಥಿಗಳು ಮುಂದಾಗಬೇಕು. ಹೆಚ್ಚು ಹೆಚ್ಚು ವಿಧ್ಯಾರ್ಥಿಗಳು ಸಿವಿಲ್ ಡಿಫೆನ್ಸ್ ಘಟಕಕ್ಕಾಗಿ ಹೆಸರನ್ನು ನೋಂದಾಹಿಸಿಕೊಳ್ಳುವಂತೆ ವಿಧ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷೆ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ವಿಧ್ಯಾರ್ಥಿಗಳು ನಾಗರಿಕ ರಕ್ಷಣೆಯಂತಹ ಕೆಲಸಗಲ್ಲಿ ತಮ್ಮನ್ನು ತೊಡಗಿಸಿಕೊಳ್ಳುದು ಪುಣ್ಯದ ಕೆಲಸ ಎಂದರು. ತಾವೇ ಮೊದಲು ಸಿವಿಲ್ ಡಿಫೆನ್ಸ್ ಘಟಕದಲ್ಲಿ ಹೆಸರು ನೋಂದಾಯಿಸಿ ಮಾದರಿಯಾದರು. ವೇದಿಕೆಯಲ್ಲಿ ಕಾಲೇಜಿನ ಸಿ ಓ ಓ ಡಾ. ಗೌರಿ ಪ್ರಭು, ಕಾಲೇಜಿನ ಕಾರ್ಡಿನೇಟರ್ ಗಳಾದ ಶ್ರೀ ಮಾಧವ ಪೂಜಾರಿ, ಶ್ರೀ ಸಚಿನ್ ಶೇಟ್ ಉಪಸ್ಥಿತರಿದ್ದರು. ಮೊದಲಿಗೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸ್ವಾಗತಿಸಿ ವಂದಿಸಿದರು.


















