ಮಡುಂಬು ಹಿಂದೂ ರುದ್ರಭೂಮಿಯ ಶಿವನ ಮೂರ್ತಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಅನಾವರಣ
ಕಾಪು:ಇನ್ನಂಜೆ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯುವಸೇನೆ ಮಡುಂಬು ಪ್ರಾಯೋಜಕತ್ವದಲ್ಲಿ ಮಡುಂಬು ಹಿಂದೂ ರುದ್ರಭೂಮಿ ಮುಂಭಾಗಲ್ಲಿ ನಿರ್ಮಿಸಿರುವ ಶಿವನ ಮೂರ್ತಿಯನ್ನು ದಿನಾಂಕ 15-02-2026 ಭಾನುವಾರದಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಮಡುಂಬು ಯುವಸೇನೆ ಅಧ್ಯಕ್ಷರಾದ ದೀಪಕ್ ಶೆಟ್ಟಿ, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಉದಯವಾಣಿ ದಿನಪತ್ರಿಕೆಯ ಪತ್ರಕರ್ತರಾದ ರಾಕೇಶ್ ಕುಂಜೂರು, ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಶಿಧರ್ ಆಚಾರ್ಯ ಹಾಗೂ ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.


















