ಮೂಡುಬಿದಿರೆ: ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಲಿಖಿತಾ ಪ್ರಜ್ವಲ್ ಅವರಿಗೆ ‘ಅಬ್ಬಕ್ಕ ಪ್ರೇರಣಾ ಪುರಸ್ಕಾರ’

ಮೂಡುಬಿದಿರೆ: ವೀರರಾಣಿ ಅಬ್ಬಕ್ಕ ೫೦೦ನೇ ವರ್ಷದ ಸಂಭ್ರಮದ ಅಂಗವಾಗಿ ‘ಜವನೆರ್ ಬೆದ್ರ’ ಸಂಘಟನೆಯು ನೀಡುವ ಪ್ರತಿಷ್ಠಿತ ‘ಅಬ್ಬಕ್ಕ ಪ್ರೇರಣಾ ಪುರಸ್ಕಾರ’ಕ್ಕೆ ವಿ೪ ನ್ಯೂಸ್‌ನ ನಿರೂಪಕಿ ಲಿಖಿತಾ ಪ್ರಜ್ವಲ್ ಅವರು ಆಯ್ಕೆಯಾಗಿದ್ದು ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಚೌಟ ರಾಣಿ ಅಬ್ಬಕ್ಕಳ ೫೦೦ನೇ ಜನ್ಮಶತಾಭ್ದಿಯ ವರ್ಷಾಚರಣೆಯ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಘಟನೆಯಿAದ ೫೦ ವನಿತೆಯರಿಗೆ ‘ಚೌಟ ರಾಣಿ ಅಬ್ಬಕ್ಕ’ ಪ್ರೇರಣಾ ಪತ್ರ ಗೌರವ ನೀಡಿ ಪುರಸ್ಕಾರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ಚೌಟ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ವಿತರಿಸಲಾಯಿತು. ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ಚೌಟ ಅರಮನೆಯ ಕುಲದೀಪ್ ಎಂ ಪ್ರಧಾನ ಮಾಡಿದರು.

ಮಾಧ್ಯಮ ಕ್ಷೇತ್ರದಲ್ಲಿ ಅವರು ಮಾಡಿರುವ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಯಿತು. ಲಿಖಿತಾ ಅವರು ಪ್ರಸ್ತುತ ವಿ೪ ನ್ಯೂಸ್ ಸುದ್ದಿವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿ ಮತ್ತು ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಗಿಯೂ ಅವರು ಜನಪ್ರಿಯರಾಗಿದ್ದಾರೆ. ಬಾಲ್ಯದಿಂದಲೇ ನೃತ್ಯಗಾರ್ತಿಯಾಗಿರುವ ಇವರು, ಕಲೆಯ ಜೊತೆಗೆ ಮಾಧ್ಯಮ ಕ್ಷೇತ್ರದಲ್ಲಿ ತೋರಿದ ಬಹುಮುಖ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ನಾಯಕ್, ಕಾರ್ಯಕ್ರಮ ಸಂಯೋಜಕರಾದ ಸುನೀತಾ ಉದಯ್ ಕುಮಾರ್, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹಾನ ನಾಯಕ್, ಅಬ್ಬಕ್ಕ ಬ್ರಿಗೇಡ್ ನ ಸದಸ್ಯರಾದ ಸೌಮ್ಯ, ವಿದ್ಯಾ ಹಾಗೂ ಜವನೆರ್ ಬೆದ್ರ ಸಂಘಟನೆಯ ಸದಸ್ಯರಾದ ಶಮಿತ್ ರಾವ್, ಗಣೇಶ್ ಪೈ, ಮನು ಒಂಟಿಕಟ್ಟೆ, ಸುಮಂತ್ ಶೆಟ್ಟಿ, ಅರುಣ್, ಪ್ರತೀಶ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಕೆಲ್ಲಪುತ್ತಿಗೆ ನಿರ್ವಹಿಸಿದರು.

Related Posts

Leave a Reply

Your email address will not be published.