ಮಂಗಳೂರು:ಎಜೆ ಆಸ್ಪತ್ರೆ ಯಲ್ಲಿ ಪ್ರೋಸ್ಟೇಟ್ ವೃದ್ಧಿಗೆ ರೀಜಮ್ ಹೊಸ ಥೆರಪಿ ಪರಿಚಯ ದಕ್ಷಿಣ ಕನ್ನಡ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರಥಮ ಪ್ರಯೋಗ

ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಿಸ್ತರಿಸಿದ ಪ್ರಾಸ್ಟೇಟ್‌ಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಹಾಗೂ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾದ ರೀಜಮ್ ಅನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಪರಿಚಯಿಸಿದೆ.

ರೀಜಮ್ ಥೆರಪಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ನೀರಿನ ವಾಷ್ಪದ ಶಕ್ತಿಯನ್ನು ಬಳಸುವ ಪರಿಣಾಮಕಾರಿಯಾದ ವಿಧಾನವಾಗಿದೆ. ಇದು ದೀರ್ಘಕಾಲದ ಮೂತ್ರ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಮತ್ತು ಲೈಂಗಿಕ ಮೂತ್ರ ಕ್ರಿಯೆಗಳ ರಕ್ಷಣೆ ಮಾಡುತ್ತದೆ. ದಿನದೊಳಗಿನ ಚಿಕಿತ್ಸೆ ಆಗಿದ್ದು, ಇದು ಸುರಕ್ಷಿತ ಮತ್ತು ಸೌಲಭ್ಯ ಪೂರ್ಣವಾಗಿದೆ.
ಈ ಚಿಕಿತ್ಸೆಯನ್ನು ಈಗಾಗಲೇ ಎಜೆ ಆಸ್ಪತ್ರೆಯಲ್ಲಿ ಯಶಸ್ವಿಯಾಗು ಮಾಡಲಾಗಿದೆ. ಚಿಕಿತ್ಸೆ ಪಡೆದ ರೋಗಿಗಳು ತಮ್ಮ ಮೂತ್ರದ ತೊಂದರೆಗಳಿಂದ ಸಾಕ್ಷು ಶಮನ ಪಡೆದಿದ್ದು, ಅವರು ಬೇಗನೇ ಚೇತರಿಸಿಕೊಂಡಿದ್ದಾರೆ ಎಂದು ಎಜೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಯೂರೋಲಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾರ್ಲಾ ತಿಳಿಸಿದ್ದಾರೆ.