ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026”

ಸುಳ್ಯದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026” ಕಾರ್ಯಕ್ರಮವು ಫೆ.10 ರಂದು ಸುಳ್ಯದ ಲಯನ್ಸ್ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಭಾಗವಹಿಸಿ, ಮಾತನಾಡಿ ಮಕ್ಕಳೊಂದಿಗೆ ತಂದೆ ತಾಯಿಯ ಬಾಂಧವ್ಯ ಯಾವ ರೀತಿ ಇರಬೇಕೆಂದು ತಿಳಿ ಹೇಳಿ, ಶುಭ ಹಾರೈಸಿದರು.

ಗೌರವಾನ್ವಿತ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯದ ವೆಂಕಟರಮಣ ಸಹಕಾರಿ ಸಂಘದ ಸಿಇಒ ಕೆ.ಟಿ. ವಿಶ್ವನಾಥ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಬಳಿಕ ಅವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಶುಭಕರ ಬಿ.ಸಿ. ವಹಿಸಿದ್ದರು. ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ.ಜಿ. ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಪುಟಾಣಿಗಳ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಸ್ವಾಗತ ಭಾಷಣವನ್ನು ಬೇಬಿ ಆಯಿಶಾ ಸಾಜ್ನಾ ಅವರು ನೆರವೇರಿಸಿದರು. ಮಾಸ್ಟರ್ ಶುಕೃತ್ ವಂದನಾರ್ಪಣೆ ಸಲ್ಲಿಸಿದರು. ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಫಬಿದಾ ನಡೆಸಿಕೊಟ್ಟರು.

“ಏಕತೆಯಲ್ಲಿ ವೈವಿಧ್ಯತೆ” ಮತ್ತು “ಸರ್ವ ಧರ್ಮ ಸಮಭಾವ” ಎಂಬ ಸಂದೇಶವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದವು.

Related Posts

Leave a Reply

Your email address will not be published.