Home Articles posted by v4news (Page 107)

ಹೂಗುಚ್ಚ, ಹಾರ, ತುರಾಯಿ ಹಣ್ಣಿನ ಬುಟ್ಟಿ ನಿಷೇಧ ಹಿಂತೆಗುಕೊಳ್ಳುವಂತೆ ಆಗ್ರಹ: ಆಗಸ್ಟ್‌ 12 ರಂದು ಪುಷ್ಪ ಮಾರಾಟಗಾರರ ಸಂಘದಿಂದ ಪ್ರತಿಭಟನೆ

ಬೆಂಗಳೂರು: ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್‌ ಅವರು ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂದಕ್ಕೆ ತಗೆದುಕೊಳ್ಳಬೇಕು ಎಂದು ಆಗ್ರಹಿಸಲು ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ರಾಜ್ಯದ

ಪೆರುವಾಜೆಯ ಕಾನಾವಿನಲ್ಲಿ ಉರುಳಿಗೆ ಬಿದ್ದ ಚಿರತೆ

ಕಾಣಿಯೂರು : ಪೆರುವಾಜೆ ಗ್ರಾಮದ ಕಾನಾವುನಲ್ಲಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಯಾರೋ ಹಂದಿಗೆ ಇಟ್ಟ ಉರುಳಿಗೆ ಚಿರತೆ ಬಿದ್ದಿದ್ದು ಚಿರತೆ ಜೀವಂತವಾಗಿದೆ. ಪೆರುವಾಜೆ ವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ.ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿದ್ದಾರೆ. ಅರವಳಿಕೆ ತಜ್ಞರು ಬಂದ ಬಳಿಕ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಹಿಡಿಯಬೇಕಷ್ಟೆ ಎಂದು ತಿಳಿದು ಬಂದಿದೆ.

ಅರಸೀಕೆರೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ

ಹಾಸನ: ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ. ನವಾಜ್ (27) ಕೊಲೆಯಾದ ರೌಡಿಶೀಟರ್. ಹಾಸನ ಜಿಲ್ಲೆಯ ಅರಸೀಕೆರೆ ನಗರದ ಹೊರವಲಯದ ಚಿಕ್ಕತಿರುಪತಿ ರಸ್ತೆಯ ಕಾರೆಹಳ್ಳಿ ಸಮೀಪ ನಡೆದಿದೆ. ಮೂರು ವರ್ಷಗಳ ಹಿಂದೆ ಮೀನು ಹಿಡಿಯುವ ಸಂಬಂಧ ಎರಡು ಯುವಕರ ತಂಡದ ನಡುವೆ ಗಲಾಟೆ ನಡೆದು ಕೊನೆಗೆ ಆಂಬುಲೆನ್ಸ್ ಚಾಲಕ ಅರುಣ್ ಎಂಬುವನನ್ನು ಅರಸೀಕೆರೆ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ ಚಾಕು

ಖಾಸಗಿ ಬಸ್ ಪ್ರಯಾಣ ದರ ಏರಿಕೆ ತಡೆ ಹಿಡಿಯಿರಿ: ಜಾತ್ಯಾತೀತ ಮತ್ತು ಸಮಾನ ಮನಸ್ಕ ಸಂಘಟನೆಗಳಿಂದ ಆಗ್ರಹ

ಖಾಸಗೀ ಬಸ್ ಪ್ರಯಾಣ ದರದ ವಿಪರೀತ ಏರಿಕೆಯನ್ನು ಖಂಡಿಸಿ, ದ.ಕ.ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ, ದಕ.ಜಿಲ್ಲೆಯ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು. ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯದೆ ಏಕಾಏಕಿಯಾಗಿ ಬಸ್ ಪ್ರಯಾಣ ದರವನ್ನು ಏರಿಸಿದ್ದು ಸರ್ವಥಾ ಸರಿಯಲ್ಲ. ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಜಿಲ್ಲೆಯ ಲಕ್ಷಾಂತರ ಜನತೆ

ಹಿದಾಯ ಫೌಂಡೇಶನ್ ಗೆ ರಾಜೀನಾಮೆ ನೀಡಿದ ಟೀಂ ಬಿ-ಹ್ಯೂಮನ್ ಸಂಸ್ಥಾಪಕ

ಮಂಗಳೂರಿನ ಖ್ಯಾತ ಸಮಾಜ ಸೇವಾ ಸಂಸ್ಥೆಯಾದ ಟೀಂ ಬಿ-ಹ್ಯೂಮನ್ ಇದರ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರು ಹಿದಾಯ ಫೌಂಡೇಶನ್ ನ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಕಳೆದ 13 ವರ್ಷಗಳಿಂದ ಸಕ್ರಿಯವಾಗಿ ಹಿದಾಯ ಫೌಂಡೇಶನ್ ಸದಸ್ಯರಾಗಿದ್ದು ಪ್ರಸ್ತುತ ವೈಸ್ ಚೇರ್ಮನ್ ಹಾಗೂ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಷ್ಟು ವರ್ಷಗಳಿಂದ ಯಾವುದೇ ಪೂರ್ವಾಗ್ರಹವಿಲ್ಲದೆ ಎರಡೂ ಸಂಸ್ಥೆಗಳಲ್ಲಿ ಸಮಾನವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸೇವೆಗೈಯುತ್ತಿದ್ದುದು

ಕನ್ನಡ ದಿನಪತ್ರಿಕೆ – ಕನ್ನಡ ಪುಸ್ತಕ ಓದಿ : ಸುನಿಲ್ ಕುಮಾರ್

ಬೆಂಗಳೂರು ಆಗಸ್ಟ್ 11-ಪ್ರತಿದಿನ ಕನ್ನಡ ಪತ್ರಿಕೆಯೊಂದನ್ನು ಓದುವ ಹಾಗೂ ತಿಂಗಳಿಗೊಂದು ಕನ್ನಡ ಪುಸ್ತಕ ಕೊಂಡು ಓದುವ, ಹಾಗೆಯೇ ಎರಡು ತಿಂಗಳಿಗೊಂದು ಕನ್ನಡ ಚಲನಚಿತ್ರ ನೋಡುವ ಅಭ್ಯಾಸ ಮಾಡಿಕೊಂಡರೆ ಆ ಮೂಲಕವೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ಜನರೂ ಸಹ ಪಾಲುಗೊಳ್ಳಲು ಸಾಧ್ಯವಾಗುತ್ತದೆ ಎಂದು ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಭಾರತಾಂಬೆ ಹಾಗೂ

ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾಪ್ರಸಾದ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ

ಪುತ್ತೂರು: ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಘಟನೆ ನಡೆದಿದೆ. ಹಿಂದೂ ಸಂಘಟನೆಗಳ ಮುಂದಾಳು, ಖ್ಯಾತ ವೈದ್ಯ ಡಾ.ಎಂ.ಕೆ.ಪ್ರಸಾದ್ ಮತ್ತು ಅವರ ಪತ್ನಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಭಾವಚಿತ್ರವನ್ನು ಪ್ರೊಫೈಲ್ ಹಾಕಿರುವ ನಕಲಿ ಫೇಸ್ಬುಕ್ ಖಾತೆ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗುತ್ತಿದೆ. ರಿಕ್ವೆಸ್ಟ್ ಆಕ್ಸೆಪ್ಟ್ ಮಾಡಿದವರಲ್ಲಿ ಹಣಕ್ಕೆ ಬೇಡಿಕೆ

ಸೋಲಾರ್ ಪಂಪ್‌ ಸೆಟ್‌ಗಳಿಗೆ ಸಬ್ಸಿಡಿ ನೀಡುವಂತೆ ಕೇಂದ್ರ ಸಚಿವೆ ಶೋಭಾಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಮನವಿ

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ಆ.10ರಂದು ದೆಹಲಿಯಲ್ಲಿ ಕೇಂದ್ರದ ಕೃಷಿ ರಾಜ್ಯ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತರ ಕನ್ನಡ ಜಿಲ್ಲೆಯ ಮಾದರಿಯಲ್ಲೇ ಸೋಲಾರ್ ಪಂಪ್ ಸೆಟ್‌ಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಮಾಡಿದರು. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವಾಗ ಸರಕಾರ ಸಬ್ಸಿಡಿ ನೀಡುತ್ತಿದೆ. ಆ ಸಬ್ಸಿಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೂ ವಿಸ್ತರಿಸಬೇಕು

ನಂದಿಕೂರಿನ ದೇವರಕಾಡು ಪ್ರದೇಶ ನೆಲಸಮ: ಗ್ರಾ.ಪಂ.ಗೆ ತಪ್ಪು ಮಾಹಿತಿ ನೀಡಿದ ಕಂಪನಿ ಕಾಮಗಾರಿ ಸ್ಥಗಿತಕ್ಕೆ ಸೂಚನೆ

ನಂದಿಕೂರಿನ ದೇವರಕಾಡು ಪ್ರದೇಶವನ್ನು ನೆಲಸಮ ಮಾಡಿ ಕಾಮಗಾರಿ ನಡೆಸುತ್ತಿರುವ ಕಂಪನಿಯೊಂದು ಗ್ರಾ.ಪಂ.ಗೆ ತಪ್ಪು ಮಾಹಿತಿ ನೀಡಿ ತಮಗೆ ಬೇಕಾದಂತೆಲ್ಲಾ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನನ್ವಯ ಸಭೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಕಂಪನಿಗೆ ಪಲಿಮಾರು ಗ್ರಾ.ಪಂ. ಸೂಚನೆ ನೀಡಿದೆ. ಅಡುಗೆ ಎಣ್ಣೆ ಕಂಪನಿ ಎಂಬುದಾಗಿ ಆಡಳಿತ ಸಮಿತಿ ಅಸ್ಥಿತ್ವದಲ್ಲಿ ಇಲ್ಲದ ವೇಳೆ ಆಡಳಿತಾಧಿಕಾರಿಯಿಂದ ಯಾವುದೇ ಪೂರಕ ಮಾಹಿತಿ ನೀಡದೆ ಅನುಮತಿ ಪತ್ರ ಪಡೆದ

ಸೂಪರ್ ಹಿಟ್ಸ್ 93.5 ರೆಡ್ ಎಫ್.ಎಂ : “ನಾನ್ ಸ್ಟಾಪ್ 8 ಹಾಡುಗಳ ಸರಮಾಲೆ”

 ಭಾರತದಲ್ಲಿ ಅತಿ ಹೆಚ್ಚು ಅವಾರ್ಡ್ ಗಳನ್ನು ಪಡೆದಿರುವ ಅತೀ ದೊಡ್ಡ ರೇಡಿಯೋ ನೆಟ್ವರ್ಕ್ ,93.5 ರೆಡ್ ಎಫ್ ಎಂ . ಮೈಸೂರು ಮಂಗಳೂರು, ಹುಬ್ಬಳ್ಳಿ-ಧಾರವಾಡ, ಹಾಗೂ ಕಲಬುರ್ಗಿ ನಗರಗಳಲ್ಲಿ ಪ್ರಸ್ತುತಪಡಿಸುತ್ತಿದೆ “ನಾನ್ ಸ್ಟಾಪ್ 8 ಹಾಡುಗಳ ಸರಮಾಲೆ”. ಕೇಳುಗರಿಗೆ ಅತಿ ಹೆಚ್ಚು sಸೂಪರ್ ಹಿಟ್ ಹಾಡುಗಳನ್ನು ದಿನ ಪೂರ್ತಿ ಪ್ರಸಾರ ಮಾಡುವ ಸಲುವಾಗಿ ಈ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ನಾನ್ ಸ್ಟಾಪ್ 8 ಹಾಡುಗಳನ್ನು (8 ಹಾಡುಗಳ ಸರಮಾಲೆಯಾಗಿ )